ಕೊಲ್ಕತಾ, ಖ್ಯಾತ ಬೆಂಗಾಳಿ ಹಾಸ್ಯ ನಟ ಚಿನ್ಮೊಯ ರಾಯ್ ಇನ್ನಿಲ್ಲ

ಕೊಲ್ಕತಾ, ಮಾ.18  ಖ್ಯಾತ ಬೆಂಗಾಳಿ ನಟ ಚಿನ್ಮೊಯ ರಾಯ್ ನಿನ್ನೆ ರಾತ್ರಿ 22.10ಕ್ಕೆ ನಿಧನ ಹೊಂದಿದ್ದಾರೆ. ಅವರಿಗೆ 79 ವಯಸ್ಸಾಗಿತ್ತು.

ಕಳದ ವರ್ಷ ಜೂನ್ ತಿಂಗಳಲ್ಲಿ ತಮ್ಮ ಲೇಕ್ ಗಾರ್ಡನ್ಸ್ ನಿವಾಸದ ಐದನೇ ಮಹಡಿಯಿಂದ ಕೆಳಗೆ ಬಿದ್ದ ಪರಿಣಾಮ ಮೆದುಳು, ಕಾಲು ಹಾಗೂ ಕೈಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಅವರು ಪ್ರಜ್ಞಾವಸ್ಥೆಗೆ ಬಂದಿದ್ದರಾದರೂ ಅವರ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತ ಹೋಗಿತ್ತು ಎಂದು ಅವರ ವ್ಯವಸ್ಥಾಪಕ ಪ್ರೊಸೆನ್ ಜಿತ್ ತಿಳಿಸಿದ್ದಾರೆ.

1940ರ ಜನವರಿ 16ರಂದು ಜನಿಸಿದ್ದ ಅವರು ಬೆಂಗಾಳಿ ಚಿತ್ರಗಳಲ್ಲಿ ಹಾಸ್ಯ ನಟರಾಗಿ ಪ್ರಸಿದ್ಧರಾಗಿದ್ದರು.