ದುಬೈ, ಫೆ 1 - ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಬಿಡುಗಡೆ ಮಾಡಿದ ಐಸಿಸಿ ಟೆಸ್ಟ್ ಕ್ರಿಕೆಟ್ ಆಟಗಾರರ ಶ್ರೇಯಾಂಕದಲ್ಲಿ ಇಂಗ್ಲೆೆಂಡ್ ವೇಗಿ ಮಾರ್ಕ್ ವುಡ್ ಹಾಗೂ ದಕ್ಷಿಣ ಆಫ್ರಿಕಾ ವಿಕೆಟ್ ಕೀಪರ್ ಕ್ವಿಂಟಾನ್ ನ್ ಡಿ ಕಾಕ್ ಅವರು ಗಮನಾರ್ಹ ಏರಿಕೆ ಕಂಡಿದ್ದಾರೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಆದರೆ, ಉಪ ನಾಯಕ ಅಜಿಂಕ್ಯಾ ರಹಾನೆ 9ನೇ ಸ್ಥಾನಕ್ಕೆೆ ಕುಸಿದಿದ್ದಾರೆ.
ಕೊಹ್ಲಿ 928 ಅಂಕಗಳನ್ನು ಹೊಂದಿದ್ದು, 17 ಪಾಯಿಂಟ್‌ಗಳ ಅಂತರವನ್ನು ಆಸ್ಟ್ರೇಲಿಯಾ ರನ್ ಮಶೀನ್ ಸ್ಟೀವನ್ ಸ್ಮಿತ್ ಅವರಿಂದ ಕಾಯ್ದುಕೊಂಡಿದ್ದಾರೆ. ಚೇತೇಶ್ವರ ಪೂಜಾರ 791 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿ ಉಳಿದುಕೊಂಡಿದ್ದಾರೆ. ರಹಾನೆ ಖಾತೆಯಲ್ಲಿ 759 ಅಂಕಗಳಿವೆ.
ಭಾರತ ತಂಡದ ವೇಗಿ ಜಸ್ಪ್ರಿತ್ ಬುಮ್ರಾ ಅವರು 794 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿ ಉಳಿದಿದ್ದಾಾರೆ. ಜತೆಗೆ, ಸಹ ಆಟಗಾರ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಎಂಟು, ವೇಗಿ ಮೊಹಮ್ಮದ್ ಶಮಿ ಅವರು ಅಗ್ರ 10ರೊಳಗೆ ಸ್ಥಾನದಲ್ಲಿ ಉಳಿದಿದ್ದಾರೆ. ಆಲ್‌ರೌಂಡರ್ ಶ್ರೇಯಾಂಕದಲ್ಲಿ ರವೀಂದ್ರ ಜಡೇಜಾ 406 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿ ಉಳಿದಿದ್ದಾಾರೆ. ಆರ್. ಅಶ್ವಿನ್ (308) ನಾಲ್ಕನೇ ಸ್ಥಾನದಲ್ಲಿದ್ದಾರೆ.
ಇತ್ತೀಚೆಗೆ ಮುಕ್ತಾಯವಾದ ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆೆಂಡ್ 3-1 ಅಂತರದಲ್ಲಿ ಗೆದ್ದಿತ್ತು. ಕೊನೆಯ ಪಂದ್ಯದಲ್ಲಿ ಇಂಗ್ಲೆೆಂಡ್ 191 ರನ್‌ಗಳಿಂದ ಜಯ ಸಾಧಿಸಿತ್ತು. ಮಾರ್ಕ್ ವುಡ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಅವರು 19ಸ್ಥಾನಗಳಲ್ಲಿ ಏರಿಕೆ ಕಂಡು 38 ಶ್ರೇಯಾಂಕಕ್ಕೇರಿದ್ದಾರೆ. 15ನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲೂ ಅಜೇಯ 35 ಹಾಗೂ 18 ರನ್ ಗಳಿಸಿದ್ದರು. ಬ್ಯಾಟಿಂಗ್ ವಿಭಾಗದಲ್ಲಿ 142 ರಿಂದ 151ಕ್ಕೆೆ ಏರಿಕೆ ಕಂಡಿದ್ದಾರೆ.
ಇಂಗ್ಲೆೆಂಡ್ ಬ್ಯಾಟ್ಸ್‌ಮನ್ ಒಲ್ಲಿ ಪೋಪ್ ಆರು ಸ್ಥಾನಗಳಲ್ಲಿ ಏರಿಕೆ ಕಂಡು 55ನೇ ಶ್ರೇಯಾಂಕ ಪಡೆದಿದ್ದಾರೆ. ಡಾಮ್ ಸಿಬ್ಲೆೆ ಅವರು ಒಂಬತ್ತು ಸ್ಥಾನಗಳಲ್ಲಿ ಏರಿಕೆ ಕಂಡು 67ಕ್ಕೆೆ ಏರಿದ್ದಾರೆ. ಆಲ್ರೌಂಡರ್ ಬೆನ್ ಸ್ಟೋಕ್ಸ್ ಎರಡು ಸ್ಥಾನ ಏರಿಕೆ ಕಂಡು 27ನೇ ಶ್ರೇಯಾಂಕ ಪಡೆದಿದ್ದಾರೆ.
ಜೋಹಾನ್ಸ್‌ಬರ್ಗ್ ಪಂದ್ಯದಲ್ಲಿ 76 ಮತ್ತು 39 ರನ್ ಗಳಿಸಿದ ದಕ್ಷಿಣ ಆಫ್ರಿಕಾ ತಂಡದ ಕ್ವಿಂಟಾನ್ ಡಿ ಕಾಕ್ ಅವರು ಮತ್ತೆೆ ಅಗ್ರ ಸ್ಥಾನದತ್ತ ಮುಖ ಮಾಡಿದ್ದಾರೆ. ಇದೀಗ ಅವರು ಎರಡು ಸ್ಥಾಾನ ಏರಿಕೆ ಕಂಡು 11ನೇ ಶ್ರೇಯಾಂಕ ಪಡೆದಿದ್ದಾಾರೆ. ಆ್ಯನ್ರಿಚ್ ನಾಡ್ಜ್ ಅವರು 20 ಸ್ಥಾನಗಳಲ್ಲಿ ಏರಿಕೆ ಕಂಡು 51ಕ್ಕೆೆ ಏರಿಕೆ ಕಂಡಿದ್ದಾರೆ. ಶ್ರೀಲಂಕಾ ತಂಡದ ಕುಸಾಲ್ ಮೆಂಡೀಸ್ 23 ರಿಂದ 26ಕ್ಕೇರಿದ್ದಾರೆ.