ಕೊಡಗು : 8 ವರ್ಷದ ಹುಲಿ ಸೆರೆ

ಮಡಿಕೇರಿ, ಮೇ 20,ವಿರಾಜಪೇಟೆ ತಾಲ್ಲೂಕಿನಲ್ಲಿ ಕಳೆದ 40 ದಿನಗಳ ಸತತ ಕಾರ್ಯಾಚರಣೆಯ ಬಳಿಕ 24 ಸಾಕು ಪ್ರಾಣಿಗಳನ್ನು ಕೊಂದಿದ್ದ 8 ವರ್ಷದ ಹುಲಿಯನ್ನು ಅರಣ್ಯ ಅಧಿಕಾರಿಗಳು ಮಂಗಳವಾರ ರಾತ್ರಿ ಸೆರೆ ಹಿಡಿದಿದ್ದಾರೆ.ಡಾ.ಸನಾಥ್ ಕೃಷ್ಣಬಾ ಮೌಲಿ ನೇತೃತ್ವದ ತಂಡ ಹುಲಿ ಸೆರೆ ಕಾರ್ಯಾಚರಣೆ ನಡೆಸಿದ್ದು, ಸದ್ಯಕ್ಕೆ ಸ್ಥಳೀಯರು ನಿಟ್ಟುಸಿರಿಟ್ಟಿದ್ದಾರೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ. ಗೋಪಾಲಸ್ವಾಮಿ ಬೆಟ್ಟಗಳ ಮತ್ತಿಗೂಡು ಅರಣ್ಯ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಯಿತು, ಹುಲಿಯನ್ನು ವಶಪಡಿಸಿಕೊಂಡ ತಂಡದಲ್ಲಿ ದಸರಾ ಆನೆಗಳಾದ ಭೀಮಾ, ಗಣೇಶ್ ಸೇರಿದ್ದವು, ಬಳಿಕ ಮೈಸೂರು ನಗರದಹೊರವಲಯದಲ್ಲಿರುವ ಕೇರಗಹಳ್ಳಿಯ ಚಾಮುಂಡಿ ಪ್ರಾಣಿ ರಕ್ಷಣಾ ಕೇಂದ್ರಕ್ಕೆ ಹುಲಿಯನ್ನು ಬಿಡಲಾಯಿತು. ಪಶುವೈದ್ಯ ವೈದ್ಯ ಮುಜುಬ್ ರೆಹಮಾನ್, ಅರಣ್ಯ ಅಧಿಕಾರಿ ತೀರ್ಥ, ರಾಜನ್ ದೇವಯ್ಯ ಮತ್ತು ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.