ಜ್ಞಾನದಿಂದ ಜೀವನದಲ್ಲಿ ಎಲ್ಲವೂ ಸಾಧ್ಯ: ವಾಡೆನ್ನವರ

ಲೋಕದರ್ಶನ ವರದಿ

ಮೂಡಲಗಿ 02: ಮನುಷ್ಯರಲ್ಲಿ ಎಲ್ಲರೂ ಶ್ರೇಷ್ಠ ವ್ಯಕ್ತಿಗಳಾಗಲೂ ಸಾಧ್ಯವಿಲ್ಲ. ಯಾರು ಕಠಿಣ ಪರಿಶ್ರಮ ಮಾಡುವನೋ ಅವನು ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗುತ್ತಾನೆ. ವಿದ್ಯಾಥರ್ಿಗಳು ತಮಗೆ ಉಪಯುಕ್ತವಾಗುವಂತಹ ವ್ಯಕ್ತಿಯಿಂದ ಮಾರ್ಗದರ್ಶನ ಪಡೆದುಕೊಂಡರೆ ಉತ್ತಮ ಜೀವನ ನಿರ್ವಹಣೆಯ ಕೌಶಲ್ಯಗಳನ್ನು ಬೆಳಸಲು ಸಾಧ್ಯವಿದೆ ಎಂದು ಲೇಖಕ ಸಿದ್ದಾರ್ಥ ವಾಡೆನ್ನವರ ಹೇಳಿದರು.

ಸ್ಥಳೀಯ ಸಾಯಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ "ಸಾಯಿ ಸಂಭ್ರಮ 2020" ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತ, ಜೀವನದಲ್ಲಿ ಒಂದು ನಿದರ್ಿಷ್ಟ ಗುರಿಯನ್ನು ಇಟ್ಟುಕೊಳ್ಳಿ. ಸಕರ್ಾರವಾಗಲಿ, ರಾಜಕಾರಣಿಗಳಿಂದಾಗಲಿ ಅಥವಾ ಯಾವೂದೇ ಗಣ್ಯ ವ್ಯಕ್ತಿಗಳಿಂದ ನೀವು ಶ್ರೇಷ್ಠ ವ್ಯಕ್ತಿಯಾಗಲೂ ಸಾಧ್ಯವಿಲ್ಲ. ನಮ್ಮಲ್ಲಿರುವ ಜ್ಞಾನದಿಂದ ಮಾತ್ರ ನಾವೂ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳಾಗುತ್ತೆವೆ. ನಾವು ಕಲಿತು ಸಕರ್ಾರಿ ನೌಕರಿ ಹುಡುಕುವುದಕ್ಕಿಂತ ವ್ಯಾಪಾರ ಮಾಡುವುದು ಸೂಕ್ತ. ಹೃದಯದಲ್ಲಿ ದೃಡವಾದ ಧೈರ್ಯವಿದ್ದರೇ ಹಣಗಳಿಸುವುದರ ಜೊತೆಗೆ ಸಮಾಜದಲ್ಲಿ ಗೌರವ ಗಳಿಸಲೂ ಸಾಧ್ಯವಿದೆ. ಜ್ಞಾನ ಮತ್ತು ಪ್ರೇರಣೆಯಿಂದ ಎಲ್ಲವೂ ಸಾಧ್ಯ. ಸಾಧನೆ ಮಾಡಿದ ಮಹಾತ್ಮರ ಜೀವನ ಚರಿತ್ರೆಯನ್ನು ಓದಿದರೆ  ಶ್ರೇಷ್ಠ ವ್ಯಕ್ತಿಯಾಗುವುದರಲ್ಲಿ ಸಂಶಯವಿಲ್ಲ ಎಂದರು.

      ಲೆಕ್ಕ ಪರಿಶೋಧಕ ಎಸ್.ಬಿ ಗದಾಡಿ ಮಾತನಾಡಿ, ಮಕ್ಕಳ ಬದುಕನ್ನು ಉತ್ತಮ ಗೊಳಿಸಲು ತಂದೆ ತಾಯಿಗಳು ನಿರಂತರ ಪ್ರಯತ್ನಿಸುತ್ತಾರೆ. ಇಂದಿನ ವಿದ್ಯಾಥರ್ಿಗಳು ಅವುಗಳ ಅರಿವು ಇಲ್ಲದೇ ತಮ್ಮ ಬದುಕು ನಿಷ್ಕ್ರೀಯ ಸ್ಥಿತಿಯಲ್ಲಿ ನಿಮರ್ಿಸಿಕೊಳ್ಳುತ್ತಿದ್ದಾರೆ. ವಿದ್ಯಾಥರ್ಿಗಳೇ ನಿಮ್ಮ ಜೀವನ ರೂಪಿಸುವ ಜವಾಬ್ದಾರಿ ನಿಮ್ಮ ಕೈಯಲ್ಲಿದೆ. ನಮಗೆ ನಾವೇ ಯೋಚಿಸಿಕೊಂಡು ಆಧ್ಯಾಯನ ಮಾಡಬೇಕು. ನಮ್ಮ ಸಾಧನೆಗೆ ನಾವೇ ಮಾಲಿಕರು, ಪ್ರತಿದಿನ ಒಳ್ಳೇಯ ಪುಸ್ತಕಗಳನ್ನು ಓದಿ, ಕನಸುಗಳನ್ನು ಕಟ್ಟಿಕೊಂಡು ಒಳ್ಳೆತನದಿಂದ  ಜೀವನ ನಡೆಸುವ ಗುಣ ಬೆಳೆಸಿಕೊಳ್ಳಿ. ನಮ್ಮನ್ನು ಮಾನವ ಸಂಪನ್ಮೂಲ ವ್ಯಕ್ತಿಗಳಾಗಿ ರೂಪಿಸುವ ಶಕ್ತಿ ಗುರುಗಳಿಗಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ವಿದ್ಯಾಥರ್ಿಗಳಿಗೆ ಕಿವಿಮಾತು ಹೇಳಿದರು.  

ಕೌಜಲಗಿಯ ಎಮ್ಡಿಆರ್ಎಸ್ನ ಪ್ರಾಚಾರ್ಯ ಎನ್.ಜಿ ಯರಗಟ್ಟಿ ಮಾತನಾಡಿ, ಜೀವನದಲ್ಲಿ ಹಣಗಳಿಸುವುದು ಮುಖ್ಯವಲ್ಲ. ಸಮಾಜಕ್ಕೆ ಮೌಲ್ಯ ನೀಡುವುದು ಮುಖ್ಯ. ಅಡಂಬರವಿಲ್ಲದ ವ್ಯಕ್ತಿ ಉನ್ನತ ಮಟ್ಟಕ್ಕೆ ಬೆಳೆಯುತ್ತಾನೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ ಮನ್ನಿಕೇರಿ ಮಾತನಾಡಿ, ಈ ಸಂಸ್ಥೆಯೂ ಶಿಕ್ಷಣ ಮತ್ತು ಸಮಾಜದ ಕಲ್ಯಾಣಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು. ಸಂಸ್ಥೆಯ ಅಧ್ಯಕ್ಷ ಪುಲಕೇಶಿ ಸೋನವಾಲ್ಕರ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು. ಜಮಖಂಡಿಯ ಅರುಣ್ ತಿಕೋಟಿಕರ ಗುರೂಜೀ ಸಾನಿಧ್ಯವಹಿಸಿದ್ದರು. ಕಾರ್ಯಕ್ರಮದಲ್ಲಿ  ಆಕಾಶ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರಕಾಶ ಬಾಗೇವಾಡಿ, ರೇವಪ್ಪಾ ಕುರುಬಗಟ್ಟಿ, ಸಂಸ್ಥೆಯ ಕಾರ್ಯದಶರ್ಿ ಮಲ್ಲಿನಾಥ ಶೆಟ್ಟಿ, ಆದಿಲ್ ಶೇಖ, ದಯಾನಂದ ಮಟ್ಟಕಲ್ಲಿ, ಎಸ್.ಆಯ್ ಮಠಪತಿ, ಶೋಭ ಉಪ್ಪಾರ, ಬಾಹುಬಲಿ ಜಕ್ಕನ್ನವರ, ಸೋಮಶೇಖರ ಹಿರೇಮಠ, ಆರ್.ಪಿ ಕಂಬಾರ ಮತ್ತಿತರರು ಉಪಸ್ಥಿತರಿದ್ದರು. ಕಳೆದ ಬಾರಿ ಗರಿಷ್ಠ  ಅಂಕ ಪಡೆದ ವಿದ್ಯಾಥರ್ಿಗಳನ್ನು ಸತ್ಕರಿಸಲಾಯಿತು. ವಿದ್ಯಾಥರ್ಿಗಳಿಂದ ಮನೋರಂಜನೆ ಕಾರ್ಯಕ್ರಮ ನಡೆಯಿತು.