ಜಮ್ಮು, ಫೆ 12 : ಕಿಸ್ತವಾರ್ ಜಿಲ್ಲೆಯ ಪಾನನಿ ನಲ್ಲಾಹ ಸಮೀಪ ಕಾರೊಂದು ಆಳವಾದ ಕಂದಕಕ್ಕೆ ಬಿದ್ದ ಪರಿಣಾಮ ಒಂದೇ ಕುಟುಂಬದ ಐವರು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ತಹಸಿಲ್ ದ್ರಾಬ್ ಶಾಲಾ ಗ್ರಾಮದ ಬಹಾದತ್ ನಿವಾಸಿಗಳಾದ ಸಂಜಯ್ ಕುಮಾರ್ (32), ಪವನ್ ಕುಮಾರ್ (32), ರೇಖಾ ದೇವಿ (26), ರೀಟಾ ದೇವಿ (30) ಮತ್ತು ಕೆವಾಲ್ ಕ್ರಿಶನ್ (370) ಎಂದು ಗುರುತಿಸಲಾಗಿದೆ.
ಅಪಘಾತ ನಡೆದ ಸಂದರ್ಭದಲ್ಲಿ ಕಾರಿನ ಪ್ರಯಾಣಿಕರು ಜಮ್ಮುವಿನಿಂದ ಅಪ್ರಾಪ್ತ ಮಗುವಿನ ಮೃತ ದೇಹವನ್ನು ಸಾಗಿಸುತ್ತಿದ್ದರು ಎನ್ನಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.