ಕಿಂಗ್ಸ್ ಇಲೆವೆನ್ ಪಂಜಾಬ್ ಮುಖ್ಯ ಕೋಚ್ ಅನಿಲ್ ಕುಂಬ್ಳೆ

ಮುಂಬೈ, ಅ 11:   ನಾಯಕ ವಿರಾಟ್ ಕೊಹ್ಲಿ ಜತೆ ಭಿನ್ನಾಭಿಪ್ರಾಯದಿಂದ ಟೀಮ್ ಇಂಡಿಯಾ ಮುಖ್ಯ ಕೋಚ್ ಸ್ಥಾನದಿಂದ ಕೆಳಗೆ ಇಳಿದಿದ್ದ ಅನಿಲ್ ಕುಂಬ್ಳೆ ಮತ್ತೆ ತರಬೇತಿ ವಿಭಾಗಕ್ಕೆ ಮರಳಲು ಸಜ್ಜಾಗುತ್ತಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ  ನಿರ್ದೇಶಕರಾಗಿ ಭಾರತದ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಅನಿಲ್ ಕುಂಬ್ಳೆ ಅವರನ್ನು ಅಂತಿಮಗೊಳಿಸಲಾಗಿದೆ. ಗುರುವಾರ ಇಲ್ಲಿನ ಫೈವ್ ಸ್ಟಾರ್ ಹೋಟೆಲ್ವೊಂದರಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಾರತ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಅವರು ಕಿಂಗ್ಸ್ ಇಲೆವೆನ್ ಪಂಜಾಬ್ಗೆ ಕೋಚ್ ಆಗಿ ಸೇವೆ ಸಲ್ಲಿಸುವುದು ನಮ್ಮ ಮೊದಲ ಆಧ್ಯತೆ. ಅವರ ಕ್ರಿಕೆಟ್ ಜ್ಞಾನ ಹಾಗೂ ತರಬೇತಿಯ ಸಾಮಥ್ರ್ಯ ಇಡೀ ಜಗತ್ತಿಗೆ ತಿಳಿದಿದೆ. ಅವರು ಶಾಂತ ಸ್ವಭಾವದ ವ್ಯಕ್ತಿ. ಐಪಿಎಲ್ನಲ್ಲೂ ಕುಂಬ್ಳೆಗೆ ಸಾಕಷ್ಟು ಅನುಭವವಿದೆ. ಭಾರತ ತಂಡದ ಜತೆ ಈ ಹಿಂದೆ ಇನ್ನಿತರ ಎರಡು ಫ್ರಾಂಚೈಸಿಗಳೊಂದಿಗೆ ಅವರು ಸೇವೆ ಸಲ್ಲಿಸಿದ್ದಾರೆ. ಕುಂಬ್ಳೆ ನೇತೃತ್ವದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಉತ್ತಮ ಪ್ರದರ್ಶನ ತೋರಲಿದೆ ಎಂಬ ನಂಬಿಕೆ ಇದೆ ಎಂದು ಸಹ ಮಾಲೀಕ ನೆಸ್ ವಾಡಿಯ ತಿಳಿಸಿದ್ದಾರೆ. ತಂಡದ ಸಹಾಯಕ ಸಿಬ್ಬಂದಿ ನೇಮಕದ ಬಗ್ಗೆಯೂ ಕುಂಬ್ಳೆ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಆಸ್ಟ್ರೇಲಿಯಾ ತಂಡದ ಸೀಮಿತ ಓವರ್ ಗಳ ಮಾಜಿ ನಾಯಕ ಜಾರ್ಜ್ ಬೈಲಿ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ. ಬೈಲಿ ಅವರ ನಾಯಕತ್ವದಲ್ಲಿ 2014ರ ಆವೃತ್ತಿಯಲ್ಲಿ ಮೊಹಾಲಿ ತಂಡ ಫೈನಲ್ ತಲುಪಿತ್ತು. ಭಾರತ ತಂಡದ ಮಾಜಿ ಸ್ಪಿನ್ನರ್ ಸುನೀಲ್ ಜೋಷಿ ಅವರು ತಂಡದ ಸಹಾಯಕ ಕೋಚ್ ಅಂತಿಮಗೊಳಿಸಲಾಗಿದೆ. ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಜಾಂಟಿ ರೋಡ್ಸ್ ಅವರು ಫೀಲ್ಡಿಂಗ್ ಕೋಚ್ ಹಾಗೂ ವೆಸ್ಟ್ ಇಂಡೀಸ್ ಮಾಜಿ ವೇಗಿ ಕೌಟ್ರ್ನಿ ವಾಲ್ಷ್ ಅವರು ಬೌಲಿಂಗ್ ಕೋಚ್ ಮಾಡಲಾಗಿದೆ. ಅನಿಲ್ ಕುಂಬ್ಳೆ ಅವರ ಮೊದಲ ಕಾರ್ಯ ಡಿಸೆಂಬರ್ 19 ರಂದು ಕೊಲ್ಕತಾದಲ್ಲಿ ನಡೆಯುವ ಐಪಿಎಲ್ ಹರಾಜಿನಲ್ಲಿ ಬಲಿಷ್ಟ ತಂಡದ ರಚನೆಯಾಗಿದೆ.