ಖುಷಿ ಢವಳಿಗೆ ಕಿತ್ತೂರು ರಾಣಿ ಚನ್ನಮ್ಮ ಜಿಲ್ಲಾ ಯುವ ಪ್ರಶಸ್ತಿ ಪ್ರದಾನ

Khushi Dhavali presented with Kittur Rani Channamma District Youth Award

ಬೆಳಗಾವಿ 21: ಬೆಳಗಾವಿ ನಗರದ ಕುಮಾರಿ ಖುಷಿ ಢವಳಿ ಅವರು ಕಳೆದ 9  ವರ್ಷಗಳಿಂದ ಸಂಗೀತ ಕ್ಷೆತ್ರದಲ್ಲಿ ತನ್ನದೆಯಾದ ಸಾಧನೆ ಮಾಡುತ್ತ ಬಂದಿರುತ್ತಾಳೆ.  ಯುವಜನೋತ್ಸವ, ಸಂಸ್ಕೃತಿಕ ಜನಪದ ಕಾರ್ಯಕ್ರಮಗಳು, ಯುವಜನ ಮೇಳ ಹೀಗೆ ಹಲವಾರು ಕಾರ್ಯಕ್ರಮಗಳಲ್ಲಿ ಜಿಲ್ಲೆ ರಾಜ್ಯ ಮತ್ತು ರಾಷ್ಟ ಮಟ್ಟದ ವೇದಿಕೆಗಳಲ್ಲಿ ಸಾಧನೆ ಮಾಡುತ್ತಾ ಬಹುಮಾನಗಳನ್ನು ಪಡೆದಿರುತ್ತಾಳೆ ಇವರ ಸಂಗೀತ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ ತಾಲೂಕಾ ಘಟಕ ಮೂಡಲಗಿ ಇವರ ವತಿಯಿಂದ ಕೊಡಮಾಡುವ 2025 ನೇ ಸಾಲಿನ ಕಿತ್ತೂರ ರಾಣಿ ಚನ್ನಮ್ಮ ಜಿಲ್ಲಾ ಯುವ ಪ್ರಶಸ್ತಿ ಖುಷಿ ಢವಳಿ ಅವರಿಗೆ ಲಭಿಸಿದೆ.  

ಗುರುವಾರ ದಿನಾಂಕ 20 ರಂದು ಮೂಡಲಗಿ ಪಟ್ಟಣದ ಸತ್ಯಭಾಮಾ ಕಲ್ಯಾಣ ಮಟ್ಟಪದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆ ಅರಭಾವಿ ಕಾರ್ಯಾಲಯ ಮೂಡಲಗಿ ಹಾಗೂ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ ತಾಲೂಕಾ ಘಟಕ ಮೂಡಲಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರಿ​‍್ಡಸಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕಿತ್ತೂರ ರಾಣಿ ಚನ್ನಮ್ಮ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮೂಡಲಗಿ ಸಿವಿಲ್ ಹಾಗೂ ಜೆ ಎಮ್ ಎಫ್ ಸಿ ನ್ಯಾಯಾಧೀಶರಾದ ಜ್ಯೋತಿ ಪಾಟೀಲ್, ತಹಶೀಲ್ದಾರ್ ಶಿವಾನಂದ ಬಬಲಿ, ಬಿ ಇ ಒ ಅಜೀತ್ ಮನ್ನಿಕೇರಿ, ಸಿಡಿಪಿಒ ಯಲ್ಲಪ್ಪ ಗದಾಡಿ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷರಾದ ಸಿದ್ದಣ್ಣ ದುರದುಂಡಿ ಅವರು ಕುಮಾರಿ ಖುಷಿ ಢವಳಿ ಅವರಿಗೆ ಕಿತ್ತೂರು ರಾಣಿ ಚನ್ನಮ್ಮ ಜಿಲ್ಲಾ ಯುವ ಪ್ರಶಸ್ತಿ ಪ್ರಧಾನ ಮಾಡಿದರು.   

ವೇದಿಕೆ ಮೇಲೆ ಮೂಡಲಗಿ ಪುರಸಭೆ ಅಧ್ಯಕ್ಷರಾದ ಖುರ್ಷಾದ ನದಾಫ್, ಉಪಾಧ್ಯಕ್ಷರಾದ ಭೀಮವ್ವಾ ಪೂಜೇರಿ, ತಾಲೂಕಾ ಪಂಚಾಯತ ಕಾರ್ಯನಿರ್ವಕ ಅಧಿಕಾರ ಎಫ್ ಜಿ ಚಿನ್ನಣ್ಣವರ, ಡಾ ಭಾರತಿ ಕೋಣಿ, ನ್ಯಾಯವಾದಿಗಳಾದ ಲಕ್ಷ್ಮಿಣ್ಣ ಅಡಿಹುಡಿ, ಜ್ಯೋತಿ ಕುಡತೆ, ತಾಲೂಕಾ ಅಧ್ಯಕ್ಷರಾದ ಜಗದೀಶ ಡೊಳ್ಳಿ, ವಿಠ್ಠಲ ಪೂಜೇರಿ, ಮಹಾದೇವ ಮುರಗೋಡ, ರಾಘವೇಂದ್ರ ಲಂಬುಗೋಳ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಸುಭಾಷ ಗೊಡೆಗೋಳ, ಯಲ್ಲಾಲಿಂಗ ವಾಳದ, ಕಸ್ತೂರಿ ಪಡೆನ್ನವರ, ಮಾಯವ್ವಾ ದುರದುಂಡಿ ಇಂದ್ರಾ ಭೂವಿ, ಯಮುನಾ ತಳವಾರ ಹಾಗೂ ಯುವ ಸಂಘದ ಪದಾಧಿಕಾರಿಗಳು, ಗಣ್ಯರು, ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಉಪಸ್ಥಿತರಿದ್ದರು.