ಖೋ ಖೋ ಪಂದ್ಯಾವಳಿ : ರಾಜರಾಜೇಶ್ವರಿ ಕಾಲೇಜು 5 ಬಾರಿ ಚಾಂಪಿಯನ್
ರಾಣೆಬೆನ್ನೂರು 18: ಇಲ್ಲಿನ ಕೆಎಲ್‌ಇ ಶಿಕ್ಷಣ ಸಂಸ್ಥೆಯ ರಾಜ ರಾ ಕಾಲೇಜು ಆವರಣದಲ್ಲಿ ಇತ್ತೀಚೆಗೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಐಕ್ಯೂಎಸಿ ಸಹಯೋಗದಲ್ಲಿ ಅಂತರ ಮಹಿಳಾ ಮಹಾವಿದ್ಯಾಲಯಗಳ ಏಕ ವಲಯ ಖೋ.ಖೋ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆದವು.
ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾ ವಿದ್ಯಾಲಯದ ಕ್ರೀಡಾಪಟುಗಳು ಎರಡು ವಿಭಾಗದಲ್ಲಿ ಸ್ಪರ್ಧಿಸಿ ಕೋ ಕೋ ದಲ್ಲಿ ಸತತ ನಾಲ್ಕನೇ ಬಾರಿ ಮತ್ತು ಬಾಲ್ ಬ್ಯಾಡ್ಮಿಂಟನ್ ನಲ್ಲಿ ಐದನೇ ಬಾರಿ ಜಯ ಸಾದಿಸಿ, ಚಾಂಪಿಯನ್ನಾಗಿ ಹೊರಹೊಮ್ಮಿ, ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಅಲ್ಲದೆ ಖೋ. ಖೋ ದಲ್ಲಿ ಸುನೀತಾ ಕ್ಯಾತಾರಿ ಉತ್ತಮ ಆಟಗಾರ್ತಿ, ಮತ್ತು ಚಂದ್ರಕಲಾ ಗಾಳಿ ಅವರು ಉತ್ತಮ ಚಿಜರ್ ಆಗಿ ಹೊರಹೊಮ್ಮಿದ್ದಾರೆ.
ಬಾಲ್ ಬ್ಯಾಡ್ಮಿಂಟನ್ ನಲ್ಲಿ ಪ್ರಿಯಾಂಕ ಅಸುಂಡಿ ಆಲ್ ರೌಂಡರ್, ಹಾಗೂ ವಿಶ್ವವಿದ್ಯಾನಿಲಯದ ಅಥ್ಲೆಟಿಕ್ಸ್ ನಲ್ಲಿ ರನ್ನರ್ ಆಪ್ ಆಗಿದ್ದಾರೆ.
ಚಂದ್ರಕಲಾ ಗಾಳೇರ 400 ಮೀ. ರಿಲೆಯಲ್ಲಿ ದ್ವಿತೀಯ ಸ್ಥಾನ. 200, ಮೀ. ರಿಲೇ ಸುನಿತಾ ಕ್ಯಾತಾರಿ ದ್ವಿತೀಯ, 4+100 ರಿಲೇಯಲ್ಲಿ ಪವಿತ್ರ, ಕಾವ್ಯ, ಸೌಂದರ್ಯ, ದಾನೇಶ್ವರಿ ಅವರುಗಳು ದ್ವಿತೀಯ ಸ್ಥಾನ ಗಳಿಸಿದ್ದಾರೆ.
4*400 ಮೀ. ರಿಲೇ ಶೃತಿ, ಮಧು ದ್ವಿತೀಯ. ಹೈ ಜಂಪ್ ನಲ್ಲಿ ಸುಪ್ರೀತಾ ಪ್ರಥಮ ಸ್ಥಾನ ಪಡೆದಿದ್ದಾರೆ. ಮತ್ತು ವಾಲಿಬಾಲ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ. ಕಾಲೇಜಿನ 15 ವಿದ್ಯಾರ್ಥಿಯರು, ಬ್ಲೂ ಆಗಿ ಹೊರಹೊಮ್ಮಿದ್ದಾರೆ. ಕ್ರಿಡಾಕೂಟದಲ್ಲಿ ಸಾಧನೆ ಮೆರೆದು, ಕಾಲೇಜಿಗೆ ಮತ್ತು ನಗರ ಜಿಲ್ಲೆಗೆ ನಾಡಿಗೆ ಕೀರ್ತಿ ತಂದ ಎಲ್ಲಾ ಕ್ರೀಡಾಪಟುಗಳಿಗೆ, ಆಡಳಿತ ಮಂಡಳಿ ನಿರ್ದೇಶಕರಾದ ಶಂಕ್ರಣ್ಣ ಮುನವಳ್ಳಿ, ಸ್ಥಾನಿಕ ಕಾರ್ಯಾಧ್ಯಕ್ಷ ವ್ಹಿ.ಪಿ.ಲಿಂಗನಗೌಡ್ರ, ಪ್ರಾಚಾರ್ಯ ನಾರಾಯಣ ನಾಯಕ ಎ. ಮತ್ತು ಉಪನ್ಯಾಸಕರು ಸದಸ್ಯರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.