ಖಿಳೇಗಾಂವ ಬಸವೇಶ್ವರ ದೇವಸ್ಥಾನ ಪರಿಸರ ಸ್ವಚ್ಚತೆ ಕಾರ್ಯಕ್ರಮ
ಸಂಬರಗಿ 17 : ಕರ್ನಾಟಕ ಮಹಾರಾಷ್ಟ್ರದ ಗಡಿಯಲ್ಲಿ ಇರುವ ಲಕ್ಷಾಂತರ ಭಕ್ತರ ಆರಾಧ್ಯ ಧೈವವಾದ ಖಿಳೇಗಾಂವ ಬಸವೇಶ್ವರ ದೇವಸ್ಥಾನ ಹಾಗೂ ಸುತ್ತ ಮುತ್ತಲಿನ ಪರಿಸರವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅಥಣಿ ಘಟಕದ ಅಧ್ಯಕ್ಷರಾದ ರಾವಸಾಬ ಅಂಬಿ ಇವರ ನೇತೃತ್ವದಲ್ಲಿ ಸ್ವಚ್ಚತೆ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ವೇಳೆ ರಾವಸಾಬ ಅಂಬಿ ಮಾತನಾಡಿ ಯುಗಾದಿ ಹಬ್ಬದ ಜಾತ್ರಾ ಮಿನಿತ್ಯವಾಗಿ ದೇವರ ಗುಡಿ ಸುತ್ತ ಮುತ್ತಲಿನ ಪರಿಸರ ಸ್ವಚ್ಚತೆ ಮಾಡಲಾಗಿದೆ. ಜಾತ್ರೆಗೆ ಬರುವ ಭಕ್ತಾಧಿಗಳು ಸ್ವಚ್ಚತೆಯನ್ನು ಕಾಪಾಡಬೇಕು ಮತ್ತು ಆರೋಗ್ಯ ಮುಕ್ತವಾಗಬೇಕು ಎಂದು ಹೇಳಿದರು.
ಈ ವೇಳೆ ಅನಿಲ ಬಡಿಗೇರ, ಮಹಾಂತೇಶ ಮಗದುಮ, ಸಾಗರ ಖೋತ, ಪ್ರಾ. ಶ್ರೀಶೈಲ ದೇವರಡ್ಡಿ, ಅಭಯ ಸಾಗರೆ , ರಸೂಲ ಮುಲ್ಲಾ, ಎಸ್. ಎಸ್. ಎಮ್.ಎಸ್. ಮಹಾ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಎನ್.ಸಿ.ಸಿ ವಿದ್ಯಾರ್ಥಿಗಳು ಸೇರಿ ಮೂರು ನೂರಕಿಂತ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಭಾನುವಾರ ಮುಂಜಾನೆ 8 ರಿಂದ ಸಾಯಂಕಾಲ 5ರ ವರೆಗೆ ಸ್ವಚ್ಚತೆ ಮಾಡಿದರು. ಈ ವೇಳೆ ದೇವಸ್ಥಾನ ಕಮೀಟಿಯಿಂದ ಸ್ವಚ್ಚತೆ ಮಾಡಲು ಬಂದಿರುವ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಯಿತು. ದೇವಸ್ಥಾನ ಕಮೀಟಿಯ ಅಧ್ಯಕ್ಷರಾದ ಸತೀಶ ಹೊನ್ನಾಗೋಳ, ಮುರಗೇಶ ಭಾನೆ ಉಪಸ್ಥಿತ ಇದ್ದರು.