ಜಮ್ಮು, ನ.14 : ಲೆಫ್ಟಿನೆಂಟ್ ಗವರ್ನರ್ ಗಿರೀಶ್ ಚಂದ್ರ ಮುರ್ಮು ಅವರಿಗೆ ಸಲಹೆಗಾರರನ್ನಾಗಿ ಅವರ ಹಿಂದಿನ ಸಲಹೆಗಾರರಾಗಿದ್ದ ಫಾರೂಖ್ ಖಾನ್ ಮತ್ತು ಕೆ.ಕೆ.ಶರ್ಮಾ ಅವರನ್ನು ಗುರುವಾರ ಮರು ನೇಮಕ ಮಾಡಲಾಗಿದೆ.
ನಿವೃತ್ತ ಐಪಿಎಸ್ ಅಧಿಕಾರಿ ಫಾರೂಖ್ ಖಾನ್ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಕೆ.ಕೆ.ಶರ್ಮಾ ಅವರನ್ನು ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಗೆ ಸಲಹೆಗಾರರಾಗಿ ಪುನರ್ ನೇಮಕ ಮಾಡಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.
ಇದಕ್ಕೂ ಮೊದಲು ಜಮ್ಮು ಮತ್ತು ಕಾಶ್ಮೀರ ರಾಜಪಾಲರಾಗಿದ್ದ ಸತ್ಯಪಾಲ್ ಮಲಿಕ್ ಅವರಿಗೆ ಖಾನ್, ಶರ್ಮಾ ಸೇರಿದಂತೆ ಐವರು ಸಲಹೆಗಾರರಿದ್ದರು.