ನ್ಯಾಯಾಧೀಶರ ಮನೆಗೆ ಕಣ್ಣ ಹಾಕಿದ್ದ ಖದೀಮನ ಬಂಧನ : 14.40 ಲಕ್ಷ ಮೌಲ್ಯದ ಚಿನ್ನಾಭರಣ ವಶ

Khadeema arrested for spying on judge's house; gold ornaments worth Rs 14.40 lakh seized

ಬೆಳಗಾವಿ : ನ್ಯಾಯಾಧೀಶರ ಮನೆಗೆ ಕಣ್ಣು ಹಾಕಿ ಮನೆಗಳ್ಳತನ ಮಾಡಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಫರಾರಿಯಾಗಿದ್ದ ಅಂತರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಅಥಣಿ ಪೊಲೀಸರು ಯಶಸ್ವಿಯಾಗಿದ್ದಾರೆ.

  ಈ ಕಳ್ಳತನ ಪ್ರಕರಣದಲ್ಲಿ ಮಹಾರಾಷ್ಟ್ರ ರಾಜ್ಯದ ಕಳ್ಳರ ಗ್ಯಾಂಗಿನ ಪ್ರಮುಖನಾದ ಅರ್ಜುನ @ ಅರ್ಜಂಟ ನಬಿಸಾಬ್ ಭೋಸಲೆ (ಸಾ: ಅರಗ ತಾ: ಮಿರಜ) ಇತನಿಗೆ ಬಂಧಿಸಲಾಗಿದೆ. 

  ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿ 22/12/2024ರಂದು ನಡೆದನ್ಯಾಯಾಧೀಶರ ಮನೆಯ ಕಳ್ಳತನ ನಡೆದಿತ್ತು. ಈ ಕಳ್ಳತನ ಪ್ರಕರಣ ಪತ್ತೆ ಮಾಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಡಾ : ಭೀಮಾಶಂಕರ ಗುಳೇದ ಹಾಗೂ ಶ್ರುತಿ ಎನ್. ಎಸ್ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು (ಕಾ&ಸು), ಆರ್ ಬಿ ಬಸರಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು (ಅಪರಾಧ ವಿಭಾಗ), ಪ್ರಶಾಂತ ಮುನ್ನೋ೪ ಡಿಎಸ್‌ಪಿ ಅಥಣಿ ಇವರ ಮಾರ್ಗದರ್ಶನ ದಲ್ಲಿ ಮತ್ತು ಸಂತೋಷ ಡಿ ಹಳ್ಳೂರ

ಸಿಪಿಐ ಅಥಣಿ ವೃತ್ತ ಅವರ ನೇತೃತ್ವದಲ್ಲಿ ಕುಮಾರ ಹಾಡಕರ ಪಿಎಸ್‌ಐ ಐಗಳಿ, ಶ್ರೀಮತಿ ಜಿ.ಜಿ.ಬಿರಾದಾರಪಿಎಸ್‌ಐ ಕಾಗವಾಡ, ಜಿ.ಎಸ್.ಉಪ್ಪಾರ ಪಿಎಸ್‌ಐ ಅಥಣಿ, ಪಿ. ನಾಗರಾಜ ಪಿಎಸ್‌ಐ ಅಥಣಿ, ಸಿ.ಬಿ.ಸಾಗನೂರ ಪಿಎಸ್‌ಐ ಐಗಳಿ ಪೊಲೀಸ್ ಠಾಣಿ ಇವರ ಮುಂದಾಳತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿತ್ತು.

  ಈ ತಂಡವು ದಿ. 28-02-2025ರಂದು ಮಹಾರಾಷ್ಟ್ರ ರಾಜ್ಯದ ಕಳ್ಳರ ಗ್ಯಾಂಗಿನ ಅರ್ಜುನ @ ಎರ್ಜಂಟ ನಬಿಬ ಭೋಸಲೆ ಸಾ: ಅರಗ ತಾ: ಮಿರಜ ಇತನಿಗೆ ಬಂಧಿಸಿ ದಿ. 04-03-2025ರಂದು ಕಳುವಿನ ಚಿನ್ನಾಭರಣ ಸ್ವೀಕರಿಸಿದ ಸುನಂದಾ ಈಶ್ವರ ಭೋಸಲೆ (ಸಾ: ಕದಮವಾಡಿ ತಾ: ಮಿರಜ) ಇವಳನ್ನು ಬಂಧಿಸಿ, ಅವರಿಂದ ಸುಮಾರು 14.40 ಲಕ್ಷ ಮೌಲ್ಯದ 180 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

  ಸದರಿ ಆರೋಪಿಯು ಈ ಹಿಂದೆ ಅಥಣಿ, ಕಾಗವಾಡ ಐಗಳಿ ಮತ್ತು ಘಟಪ್ರಭಾ ಪೊಲೀಸ ಠಾಣಿಗಳ ವ್ಯಾಪ್ತಿಗಳಲ್ಲಿ ನಡೆದ 1 ದರೋಡೆ, 1 ಸುಲಿಗೆ ಮತ್ತು 8 ಮನೆಗಳ್ಳತನ ಸೇರಿದಂತೆ ಒಟ್ಟು 10 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯಾಗಿರುತ್ತಾನೆ. 

   ಸದರಿ ತನಿಖಾ ತಂಡದಲ್ಲಿ ಅಥಣಿ ವೃತ್ತದ ಸಿಬ್ಬಂದಿ ಗಳಾದ ಪಿ.ಬಿ.ನಾಯಿಕ, ಎಮ್.ಎ.ಪಾಟೀಲ್, ಎ.ಎ.ಈರಕರ, ಜೆ.ಆರ್.ಅಸೋದೆ, ಎಸ್.ಎಸ್. ನಂದಿವಾಲೆ, ಎ.ಎ.ಮೈಗೂರ, ಡಿ.ಟಿ.ಶಾನವಾಡ, ಜೇ.ಎಚ್.ಡಾಂಗೆ ಮತ್ತು ತಾಂತ್ರಿಕ ವಿಭಾಗ ಬೆಳಗಾವಿಯ ವಿನೋದ ಠಕ್ಕಣ್ಣವರ ಇವರು ಈ ಕಳ್ಳತನ ಪ್ರಕರಣ ಭೇದಿಸಲು ಶ್ರಮವಹಿಸಿದ್ದಾರೆ. ಇವರ ಈ ಕಾರ್ಯವನ್ನು  ಎಸ್‌ಪಿ ಭೀಮಾಶಂಕರ ಗುಳೇದ ಅವರು ಶ್ಲಾಘಿಸಿರುತ್ತಾರೆ.