ಕೇವಿನ್ ಟರ್ಸನ್‌ ಹಿಂದಿ ಪ್ರೇಮ

ನವದಹೆಲಿ, ಮಾ 20, ಇಂಗ್ಲೆಂಡ್‌ ತಂಡದ ಮಾಜಿ ಕ್ರಿಕೆಟಿಗ ಕೆವಿನ್‌ ಪೀಟರ್ಸನ್‌ಗೆ ಭಾರತ ಹಾಗೂ ಹಿಂದಿ ಭಾಷೆಯ ಮೇಲೆ ಅಪಾರ ಪ್ರೇಮವಿದೆ. ಭಾರತಕ್ಕೆ ಆಗಾಗ ಭೇಟಿ ನೀಡುವ ಅವರು ಇಲ್ಲಿನ ಪ್ರೇಕ್ಷಣಿಯ ಸ್ಥಳಗಳಲ್ಲಿ ಸುತ್ತಾಡುತ್ತಾರೆ. ಇಂತಿಪ್ಪ ಆಟಗಾರ ಕೊರೊನಾ ವೈರಸ್ ಬಗೆಗಿನ ಜಾಗೃತಿಗಾಗಿ ಹಿಂದಿಯಲ್ಲೇ ಟ್ವೀಟ್‌ ಮಾಡಿ ಭಾರತೀಯರ ಮನಗೆದ್ದಿದ್ದಾರೆ.ನಮಸ್ತೇ ಇಂಡಿಯಾ… ಕೊರೊನಾ ವೈರಸ್‌ ಅನ್ನು ಹಿಮ್ಮೆಟ್ಟಿಸಲು ನಾವೆಲ್ಲರೂ ಜತೆಯಾಗಿ ಹೋರಾಡೋಣ. ನಾವು ಕೆಲವು ದಿನಗಳ ಕಾಲ ನಮ್ಮ ಮನೆಯಲ್ಲಿಯೇ ಉಳಿದುಕೊಳ್ಳುವ ಮೂಲಕ ಸರಕಾರದ ನಿರ್ದೇಶನಗಳನ್ನು ಪಾಲಿಸೋಣ. ನಾವೆಲ್ಲರೂ ಬುದ್ಧಿವಂತಿಕೆ ಪ್ರದರ್ಶಿಸಬೇಕಾದ ಸಮಯವಿದು,’’ ಎಂದು ಅವರು ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.  ಕೊನೆಯಲ್ಲಿ ಅವರು ತಮಗೆ ಹಿಂದಿ ಕಲಿಸಿದ ಬಂಗಾಳ ತಂಡದ ಆಟಗಾರ ಶ್ರೀವತ್ಸ್‌ ಗೋಸ್ವಾಮಿ ಅವರನ್ನು ಸ್ಮರಿಸಿದ್ದಾರೆ. ಪಿಟರ್ಸ್ ನ್‌ ಅವರ ಹಿಂದಿ ಟ್ವೀಟ್‌ಗೆ ಶ್ರೀವತ್ಸ್‌ ಅವರೇ ಪ್ರತಿಕ್ರಿಯೆ ನೀಡಿದ್ದು, ಒಳ್ಳೆಯ ಕಲಿಕೆದಾರ ಎಂದು ಹೇಳಿದ್ದಾರಲ್ಲದೆ, ಮುಂದಿನ ಬಾರಿ ವಿಡಿಯೊ ಮಾಡುವಂತೆ ಸೂಚಿಸಿದ್ದಾರೆ. ಕೆವಿನ ಅವರ ಹಿಂದಿ ಕಲಿಕೆಯ ಜಾಣ್ಮೆಗೆ ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.