ಭಾರತ ವಿರುದ್ಧದ 3ನೇ ಪಂದ್ಯೆಕ್ಕೆ ಕೇಶವ್ ಮಹರಾಜ್ ಔಟ್

ಪುಣೆ, ಅ 13:     ಭಾರತದ ವಿರುದ್ಧ ಇಂದು ಮುಕ್ತಾಯವಾದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದ ದಕ್ಷಿಣ ಆಫ್ರಿಕಾ ಸ್ಪಿನ್ನರ್ ಕೇಶವ್ ಮಹರಾಜ್ ಅವರು ಗಾಯದಿಂದಾಗಿ ರಾಂಚಿ ನಡೆಯಲಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯೆಕ್ಕೆ ಅಲಭ್ಯಾರಾಗಿದ್ದಾರೆ. ಅವರ ಸ್ಥಾನೆಕ್ಕೆ ಜಾರ್ಜ್ ಲಿಂಡೆ ಅವರನ್ನು ಗುರುತಿಸಲಾಗಿದೆ.  

ಕೇಶವ್ ಮಹರಾಜ್ ಅವರು ಎರಡನೇ ಪಂದ್ಯ ಎರಡನೇ ದಿನ ಫೀಲ್ಡಿಂಗ್  ಮಾಡುವ ವೇಳೆ ಭುಜದಲ್ಲಿ ನೋವು ಕಾಣಿಸಿಕೊಂಡಿತ್ತು. ಇಂದು ಅವರ ಭೆುಜಕ್ಕೆ ಎಂಆರ್ಐ ಸ್ಕ್ಯಾನ್ ಮಾಡಲಾಗಿತ್ತು. ರಾಂಚಿಯಲ್ಲಿ ಮುಂದಿನ ಶನಿವಾರ ಆರಂಭವಾಗುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕೇಶವ್ ಮಹರಾಜ್ ಅವರು ಆಡಲು ಸಾಧ್ಯವಾಗುವುದಿಲ್ಲ ಎಂದು ಸ್ಕ್ಯಾನ್ ವರದಿಗಳು ಧೃಡೀಕರಿಸಿವೆ.  

 ಇಂದು ಮುಕ್ತಾಯವಾದ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಇನಿಂಗ್ಸ್ ಹಾಗೂ 137 ರನ್ಗಳಿಂದ ಸೋಲು ಒಪ್ಪಿಕೊಂಡಿತ್ತು. ಇದರೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 2-0 ಅಂತರದಲ್ಲಿ ವಶ ಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ಕೇಶವ್ ಮಹರಾಜ್ ಕೇವಲ ಒಂದು ವಿಕೆಟ್ ಪಡೆದಿದ್ದರು. ಆದರೆ, ಪ್ರಥಮ ಇನಿಂಗ್ಸ್ 72 ರನ್ ಹಾಗೂ ದ್ವಿತೀಯ ಇನಿಂಗ್ಸ್ನಲ್ಲಿ 22 ರನ್ ಗಳಿಸಿದ್ದರು. 

ಸ್ಕ್ಯಾನ್ ವರದಿ ಅನ್ವಯ ಕೇಶವ್ ಮಹರಾಜ್ ಅವರ ಸಂಪೂರ್ಣ ಚೇತರಿಸಿಕೊಳ್ಳಲು ಇನ್ನೂ 14 ರಿಂದ 21 ದಿನಗಳು ಅಗತ್ಯವಿದೆ. ಹಾಗಾಗಿ ಅವರಿಗೆ ಕೊನೆಯ ಪಂದ್ಯದಿಂದ ವಿಶ್ರಾಂತಿ  ನೀಡಲಾಗಿದೆ. ಅವರ ಸ್ಥಾ ನದಲ್ಲಿ ಜಾರ್ಜ್ ಲಿಂಡೆ ಕೆಣಕ್ಕೆ ಇಳಿಯಲಿದ್ದಾರೆ.