ತಿರುವನಂತಪುರಂ, ಫೆ 7 ,ಕೇರಳ ಹಣಕಾಸು ಸಚಿವ ಡಾ|| ಥಾಮಸ್ ಐಸಾಕ್ ಶುಕ್ರವಾರ 2020- 21 ನೇ ಹಣಕಾಸು ವರ್ಷದ ರಾಜ್ಯ ಬಜೆಟ್ ಮಂಡಿಸಲಿದ್ದಾರೆ. 2020 -21 ರಲ್ಲಿ ಕೇರಳದ ಕೇಂದ್ರ ತೆರಿಗೆ ಪಾಲು 15,236 ಕೋಟಿ ರೂ ಗೆ ಇಳಿಕೆಯಾಗಿದೆ. ಕಳೆದ ವರ್ಷದ ಅದು 17,872 ಕೋಟಿ ರೂ ಇತ್ತು. ಕೇಂದ್ರದ ತೆರಿಗೆ ಪಾಲಿನ ಮೊತ್ತ ಕಡಿಮೆಯಾಗಿದ್ದು ಆರ್ಥಿಕ ನಿಧಾನಗತಿಯ ಕಾರಣ ಹೆಚ್ಚುವರಿ ಸಂಪನ್ಮೂಲ ಕ್ರೋಢೀಕರಣಕ್ಕೆ 5000 ಕೋಟಿ ರೂ ಮೀಸಲಿಡುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರದಿಂದ ಕೇರಳಕ್ಕೆ ಬರಬೇಕಾದ ತೆರಿಗೆ ಪಾಲು ಪ್ರಸ್ತುತದ ಶೇ 2.5 ರಿಂದ ಶೇ 1.9 ಕ್ಕೆ ಇಳಿಕೆಯಾಗಲಿದ್ದು ಒಟ್ಟಾರೆ 4,300 ಕೋಟಿ ರೂ ನಷ್ಟವಾಗಲಿದೆ ಎಂದು 15 ನೇ ಹಣಕಾಸು ಆಯೋಗದ ಮಧ್ಯಂತರ ವರದಿ ತಿಳಿಸಿದೆ ಫೆಬ್ರವರಿ 10,11 ಮತ್ತು 12 ರಂದು ಬಜೆಟ್ ಪ್ರಸ್ತಾವ ಕುರಿತ ಸಾಮಾನ್ಯ ಚರ್ಚೆಗಳು ನಡೆಯಲಿವೆ. ಪ್ರಸ್ತುತ ಕೇರಳದ 14 ನೇ ವಿಧಾನಸಭೆಯ 18 ನೇ ಅಧಿವೇಶನ ನಡೆಯುತ್ತಿದೆ.