ಕರ್ನಾಟಕ ಗಡಿಯಲ್ಲಿ ರಸ್ತೆ ದಿಗ್ಬಂಧನ : ಪ್ರಧಾನಿ ನೆರವಿಗೆ ಕೇರಳ ಸಿಎಂ ಮೊರೆ

ತಿರುವನಂತಪುರಂ, ಮಾರ್ಚ್ 28, ಕೋವಿಡ್ -19 ಹರಡುವುದನ್ನು ತಡೆಗಟ್ಟಲು ಕರ್ನಾಟಕ ಗಡಿಯಲ್ಲಿ ರಾಜ್ಯ ಹೆದ್ದಾರಿಯಲ್ಲಿ ಸಂಚಾರದ ಮೇಲೆ ನಿರ್ಬಂಧದ  ಕ್ರಮವನ್ನು ಕೂಡಲೇ ತೆಗೆದುಹಾಕಲು ಮಧ್ಯಪ್ರವೇಶ ಮಾಡಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಧಾನಿಯವರನ್ನು ಆಗ್ರಹಪಡಿಸಿದ್ದಾರೆ. ಈ ಸಂಬಂದ ಸಿಎಂ  ಪ್ರಧಾನಮಂತ್ರಿಗೆ  ಪತ್ರ  ಬರೆದು ಮನವಿ ಮಾಡಿದ್ದಾರೆ   ಕರ್ನಾಟಕ ಪೊಲೀಸರು   ತಲಶೇರಿ-ಕೊಡಲು  ರಾಜ್ಯ ಹೆದ್ದಾರಿ  ನಿರ್ಬಂಧಿಸಿದ್ದಾರೆ  ಈ ರಸ್ತೆ ಕೇರಳವನ್ನು ಕರ್ನಾಟಕದ ಕೂರ್ಗ್‌ನೊಂದಿಗೆ ವೀರಾಜಪೇಟೆ ಮೂಲಕ ಸಂಪರ್ಕಿಸುತ್ತಿದ್ದು  ಈ ಮಾರ್ಗವು ಕೇರಳಕ್ಕೆ ಅಗತ್ಯ ವಸ್ತುಗಳ ಪೂರೈಕೆಯ  ಜೀವನಾಡಿಯಾಗಿದೆ. ಇದನ್ನು ನಿರ್ಬಂಧಿಸಿದರೆ,ರಾಜ್ಯಕ್ಕೆ ಅಗತ್ಯ ಸರಕುಗಳನ್ನು ಸಾಗಿಸುವ ವಾಹನಗಳು  ರಾಜ್ಯವನ್ನು ತಲುಪಲು ಇನ್ನೂ ಹೆಚ್ಚು ದೂರ ಪ್ರಯಾಣಿಸಬೇಕಾಗುತ್ತದೆ. ರಾಷ್ಟ್ರೀಯ ಲಾಕ್ ಡೌನ್ ಪರಿಸ್ಥಿತಿಯನ್ನು ಗಮನಿಸಿದರೆ, ಇದು ರಾಜ್ಯದ ಜನರಿಗೆ ಮತ್ತಷ್ಟು  ಕಷ್ಟ ಉಂಟು ಮಾಡಲಿದೆ  ಎಂದೂ  ಅವರು ಪತ್ರದಲ್ಲಿ ವಿವರಿಸಿದ್ದಾರೆ. "ಬಿಕ್ಕಟ್ಟಿನ ಈ ಕ್ಷಣದಲ್ಲಿ ಅಗತ್ಯ ವಸ್ತುಗಳ ಪೂರೈಕೆಗೆ  ಅಡ್ಡಿಯಾಗುವ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದೂ ಹೇಳಿದ್ದು ಇದನ್ನು  ನೀವು ಸಹಜವಾಗಿ  ಒಪ್ಪುತ್ತೀರಿ" ಎಂದು  ಸಿಎಂ ಪತ್ರದಲ್ಲಿ  ಹೇಳಿದ್ದಾರೆ