ಕೇರಳ : ಗಾಯಗೊಂಡಿದ್ದ ಕಾಡಾನೆ ಸಾವು

ಮಲಪ್ಪುರಂ, ಜೂನ್ 08,ಮೇ 27 ರಂದು ಪಾಲಕ್ಕಾಡ್‌ನ ಸೈಲೆಂಟ್ ವ್ಯಾಲಿ ಬಳಿಯ ಖಾಸಗಿ ತೋಟವೊಂದರಲ್ಲಿ ಸ್ಫೋಟಕ ತುಂಬಿದ ತೆಂಗಿನಕಾಯಿ ತಿಂದ ನಂತರ ಗರ್ಭಿಣಿ ಕಾಡು ಆನೆ ಸಾವನ್ನಪ್ಪಿದ ಘಟನೆಯ ಬೆನ್ನಲ್ಲೇ, ಮತ್ತೊಂದು ಕಾಡಾನೆ ಮೃತಪಟ್ಟಿದೆ. ಇಲ್ಲಿನ ಕರುವಾರಮ್‌ಕುಂಡಿನ ಅರ್ಥಲಕುನ್ನಿಯಲ್ಲಿ ಈ ಘಟನೆ ನಡೆದಿದ್ದು, ಆನೆ ಗಾಯಗೊಂಡಿತ್ತು.  ಆದರೆ ಈ ಗಾಯಗಳು ಮಾನವರಿಂದ ಆದುವಲ್ಲ ಎಂದು ತಿಳಿದುಬಂದಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.ಪಾಲಕ್ಕಾಡ್‌ನಲ್ಲಿ ಆನೆಯ ದುರಂತ ಸಾವು ಮಾನವ ನಿರ್ಮಿತವಾಗಿದ್ದು, ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.  ಹಾಗೂ ಆತನ ಸಹಾಯಕನನ್ನು ಬಂಧಿಸಲಾಗಿದೆ.

ಅರ್ಥಲಕುನ್ನಿಯಲ್ಲಿ ಮೃತಪಟ್ಟಿರುವ ಕಾಡಾನೆಯು ದಂತರಹಿತವಾಗಿದ್ದು, ಇತರ ಸಲಗಗಳೊಂದಿಗೆ ಹೋರಾಡಿ ಗಾಯಗೊಂಡಿರಬೇಕು ಎನ್ನಲಾಗಿದೆ.  ಅದರ ಶಿಶ್ನ, ನಾಲಿಗೆ ಮತ್ತು ಹೊಟ್ಟೆಯಲ್ಲಿ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ. ಗಾಯಗೊಂಡ ಆನೆಯನ್ನು ಕಳೆದ ವಾರ ಆರಂಭದಲ್ಲಿ ಅರ್ಥಕುಲಕುಂಜಿನ ತೋಟದಲ್ಲಿ ಗುರುತಿಸಲಾಗಿತ್ತು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಆನೆಯನ್ನು ಮತ್ತೆ ಕಾಡಿಗಟ್ಟುವ ಪ್ರಯತ್ನ ವಿಫಲವಾಯಿತು.  ಬಳಿಕ ಮುಖ್ಯ ಪಶುವೈದ್ಯ ಶಸ್ತ್ರಚಿಕಿತ್ಸಕ ಡಾ.ಅರುಣ್ ಸಕಾರಿಯಾ ಅವರ ನೇತೃತ್ವದಲ್ಲಿ ನಡೆಸಲಾಯಿತು. ಗಾಯ ಮತ್ತು ಸಾವಿಗೆ ಕಾರಣವನ್ನು ಪತ್ತೆಹಚ್ಚಲು ಪಶುವೈದ್ಯಕೀಯ ವಿಶ್ವವಿದ್ಯಾಲಯದ ಪಶುವೈದ್ಯಕೀಯ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ.