ಕಾಯಕದ ಕೈಗಳನ್ನು ನುಲಿ ಚಂದಯ್ಯ

ಕಾಯಕದ ಕೈಗಳನ್ನು ನುಲಿ ಚಂದಯ್ಯ (ದಿ. 22-08-2021 ರಂದು ನುಲಿ ಚಂದಯ್ಯನವರ ಜಯಂತಿ ನಿಮಿತ್ಯ ಲೇಖನ) 12ನೇ ಶತಮಾನದ ಶಿವಶರಣರ ವಚನಗಳ ಸಂದೇಶವು ಶರಣ ಸಂಸ್ಕೃತಿ ಪರಂಪರೆಯನ್ನು ಶ್ರೀಮಂತಗೊಳಿಸಿದೆ. ವಚನ ಸಾಹಿತ್ಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಿಸುವಂತಿವೆ. ಅಂತಹ ಶರಣರಲ್ಲಿ ನೂಲಿ ಚಂದಯ್ಯನವರು ಕಾಯಕದ ಮಹತ್ವ ತೋರಿಸಿಕೊಟ್ಟ ಶ್ರೇಷ್ಠ ಶರಣರು. “ಸಂಸಾರ ಸಾಗರದ ಮಧ್ಯದೊಳಗೆ ಬೆಳೆದು ಹೂಡಿಕೆಯ ಹುಲ್ಲ ಕೊಯಿತಂದು ಮತ್ತೆ ಮಾಕಣ್ಣ ತೆಗೆದು ಕಣ್ಣೆಯ ಮಾಡಿ ಇಪಪರವೆಂಬ ಉಭಯದ ಗಂಟಿನಿಕ್ಕಿ ತುದಿಯಲ್ಲಿ ಮಾಟ ಕೂಟವೆಂಬ ಮನದಕುಣಿಕೆಯೊಳಗೆ ಕಾಯಕವಾಯಿತ್ತು. ಇದು ಕಾರಣ ಚಂದೇಶ್ವರ ಲಿಂಗವೆಂಬ ಭಾವನೆನಗಿಲ್ಲ” ಇವರೊಬ್ಬ ಅಸಾಧಾರಣ ಕಾಯಕ ಯೋಗಿಯೇ ಇರಬೇಕು ಇವರು ನುಲಿ ಕಣ್ಣೆ ಹೊಸೆದು ಮಾರಿ ಜೀವನ ಸಾಗಿಸುತ್ತಿದ್ದರು. “ಹೌದು ಕಲ್ಯಾಣದ ಕೇರಿಯೊಂದರಲ್ಲಿ ಹುಲ್ಲಿನಿಂದ ಹಗ್ಗವನ್ನು ಹೊಸೆದು ಬದುಕುತ್ತಿದ್ದ ಕಾಯಕ ಜೀವಿ ಹೆಸರು ನುಲಿ ಚಂದಯ್ಯ ಚಂದಯ್ಯ ನುಲಿಯಿಂದ ನೇಣು ಹಾಕಿಕೊಳ್ಳಬಹುದು. ಕೈಲಾಸಕ್ಕೆ ಏಣಿಯನ್ನು ಹೊಸೆದುಕೊಳ್ಳಬಹುದು. ನುಲಿಯ ಚಂದಯ್ಯನವರು ತಮ್ಮ ನೂಲಿಯಿಂದ ದೇವಲೋಕಕ್ಕೆ ಬಟ್ಟೆಯನ್ನು ಕಟ್ಟಿದರು. ಗುರು ಲಿಂಗ ಜಂಗಮನಾದರೂ ಕಾಯಕದಿಂದ ಮುಕ್ತಿಯಂದು ಸಾರಿದ ಧೀರರು. ಕಾಯಕದ ಮಹತ್ವವನ್ನು ಜಗತ್ತಿಗೆ ತೋರಿಸಿಕೊಟ್ಟ ಏಕೈಕ ಶರಣರು ನುಲಿಚಂದಯ್ಯನವರು. ಹಳ್ಳದ ಹುಲ್ಲನ್ನು ತಂದು ಕಣ್ಣಿಗೆ ಹಗ್ಗ ಹೊಸೆದು ಮಾರಿ ಬಂದ ಹಣದಿಂದ ಜಂಗಮಾಧಾರಣೆ ನಡೆಸುವುದು ಇವರ ಕಾಯಕ. ಒಮ್ಮೆ ಎಂದಿನಂತೆ ಹಳ್ಳದ ಹುಲ್ಲು ಕೊಯ್ಯುತ್ತಿರುವಾಗ ಅವರ ಅಂಗದ ಮೇಲಿನ ಲಿಂಗ ಹಳ್ಳದಲ್ಲಿ ಜಾರಿ ಬಿದ್ದಿತು. ಚಂದಯ್ಯನವರು ಅದರ ಕಡೆಗೆ ಲಕ್ಷ ಕೊಡದೆ ಹಾಗೆ ಹೊರಟರು ಆಗ ಹಳ್ಳದಲ್ಲಿದ್ದ ಲಿಂಗಯ್ಯ ಚಂದಯ್ಯನವರನ್ನು ಚಂದಯ್ಯ ಚಂದಯ್ಯ ನನ್ನನ್ನು ಕರೆದುಕೊ ಅಂತಾ ಚಂದಯ್ಯನವರ ಹಿಂದೆ ಬರುತ್ತಾನೆ. ಆಗ ಚಂದಯ್ಯನವರು ಕಾಯಕಕ್ಕೆ ಚ್ಯುತಿ ಬರಬಾರದೆಂದು ತಿಳಿದಿಲ್ಲವೇ ಅಂತಾ ಹಾಗೆ ಹೊರಡುತ್ತಾರೆ. ಆಗ ಆ ಹಾದಿಯಲ್ಲಿ ಬಟ್ಟೆ ಒಗೆಯುತ್ತಿದ್ದ ಮಡಿವಾಳ ಮಾಚಯ್ಯನವರನ್ನು ಕಂಡು ಉಬಯತರು ಶರಣೆಂದುರು. ಆಗ ಚಂದಯ್ಯನವರು ಲಿಂಗ ದೇವರನ್ನು ಮಾಚಯ್ಯನವರನ್ನು ಕಂಡು ಉಬಯತರು ಶರಣೆಂದುರು. ಆಗ ಚಂದಯ್ಯನವರು ಲಿಂಗ ದೇವರನ್ನು ಬಿಟ್ಟು ಬಂದ ವಿಷಯವನ್ನು ಮಾಚಯ್ಯನವರಿಗೆ ತಿಳಿಸುತ್ತಾರೆ. ಅದರಂತೆ ಲಿಂಗದೇವರು ಸಹ ಅವರಲ್ಲಿ ಭಿನ್ನಹಿಸಿಕೊಳ್ಳುತ್ತಾರೆ. ಆಗ ಮಡಿವಾಳ ಮಾಚಯ್ಯನವರು ಚಂದಯ್ಯನ ನಡೆಯನ್ನು ಒಪ್ಪಲಿಲ್ಲಾ. ಕಾಯಕದಲ್ಲಿ ಲಿಂಗ ಪೂಜೆಯು ಬೇಕು ಜಂಗಮಾಧಾರಾಧನೆಯು ಬೇಕು ಅಂತಾ ತಿಳಿಸಿ ಹೇಳಿದರೂ ಕೇಳದೇ ಚಂದಯ್ಯನವರು ಕಾಯಕದಲ್ಲಿ ನಿರತರಾದರೆ ಲಿಂಗವನ್ನಾದರೂ ಮರೆಯಬೇಕು ಪೂಜೆಯನ್ನಾದರೂ ಮರೆಯಬೇಕು ಅಂತಾ ಮಡಿವಾಳ ಮಾಚಯ್ಯನವರಿಗೆ ನುಡಿಯುತ್ತಾರೆ. ಇಷ್ಟಾದರೂ ತೊಡಕು ಬಿಡಲಿಲ್ಲಾ ಆದರೂ ಒಂದು ಷರತ್ತು ಹಾಕಿದರು. ಲಿಂಗದೇವರು ನನ್ನಲ್ಲಿ ಇದ್ದು ನುಲಿನ ಕಣ್ಣಿಯನ್ನು ಮಾರುವ ಕಾಯಕ ಮಾಡಿದರೆ ಮಾತ್ರ ಒಪ್ಪಿಕೊಳ್ಳುವೆ ಅಂದಾಗ ಲಿಂಗದೇವರು ಒಪ್ಪಿ ಚಂದಯ್ಯನವರ ನುಲಿನ ಕಣ್ಣಿಯನ್ನು ಕಲ್ಯಾಣದಲ್ಲಿ ಮಾರಲು ಒಪ್ಪಿಕೊಂಡು ಕಲ್ಯಾಣದಲ್ಲಿ ಮಾರಲು ಹೋದರು. ಅಂದು ಯಾವ ಶರಣರೂ ಕಣ್ಣಿಯನ್ನು ತೆಗೆದುಕೊಳ್ಳಲಿಲ್ಲ. ಒಂದು ಹಾಗಕ್ಕೆ (1 ನಾಣ್ಯ) ಅಂತಾ ಹೇಳಿದರೂ ಯಾರೂ ಕೊಳ್ಳದೆ ಇದ್ದಾಗ ಬಸವೇಶ್ವರರ ಹತ್ತಿರ ಹೋದರು. ಬಸವಣ್ಣನವರು ಒಂದು ಹಗಾ ಇದ್ದ ಕಣ್ಣಿಗೆ (ನಾಣ್ಯಕ್ಕೆ) ನೂರಾ ಹಗಾ ಕೊಟ್ಟು ಕಳುಹಿಸಿದರು. ಆಗ ಲಿಂಗದೇವರು ಖುಷಿಯಿಂದ ಚಂದಯ್ಯನ ಹತ್ತಿರ ಬಂದು ಹೇಳಿದಾಗ, ಚಂದಯ್ಯನವರು ಕೋಪಿತರಾಗಿ ಲಿಂಗದೇವರಿಗೆ ಶಪಿಸುತ್ತಾರೆ. ಏನೋ ಲಿಂಗದೇವಾ ಮಾಚಯ್ಯನವರು ಹೇಳಿದರು ಅಂತಾ ಕರೆದುಕೊಂಡು ಬಂದರೆ ಒಂದು ಹಗಾ ಕಣ್ಣಿಯನ್ನು ನೂರಾ ಹಗಾಕ್ಕೆ ಮಾರಿಬಂದ ಲಂಚದ ಹಣದಿಂದ ಕಾಯಕ ನಿಷ್ಠೆ ಸಲ್ಲದು ಅಂತಾ ತಿಳಿ ಹೇಳಿ ಉಳಿದ ಹಣವನ್ನು ಬಸವಣ್ಣನವರಿಗೆ ಕೊಟ್ಟು ಬರಲು ತಿಳಿಸಿದರಂತೆ ಅಂತಾ ಮಹಾನ್ ಶರಣ ನುಲಿ ಚಂದಯ್ಯನವರು ಶ್ರೇಷ್ಠ ಶರಣರು ಇಷ್ಟಾದರೂ ಈ ಸಮಸ್ಯೆ ತೊಡಕು ಬಿಡಲಿಲ್ಲಾ, ಕೊನೆಗೆ ಅನುಭವ ಪಂಟಪದಲ್ಲಿಯೇ ಇದರ ಇತ್ಯರ್ಥವಾಗಲೆಂದು ಇಬ್ಬರು ಅಲ್ಲಿಗೆ ಹೋದರು. ನುಲಿಯ ಚಂದಯ್ಯನವರು ಗುರು ಸೇವೆ ಮಾಡಿದರೆ ಇಹದಲ್ಲಿ ಸುಖ ಜಂಗಮ ಸೇವೆ ಮಾಡಿದರೆ ಪರರಲ್ಲಿ ಸುಖ ಜಂಗಮ ಸೇವೆ ಮಾಡಿದರೆ ಇಹ ಪರವೆಂಬ ನಾಸ್ತಿ ಇದು ಚಂದೇಶ್ವರ ಲಿಂಗ ಭಾವ ಕಾಣಾ ಪ್ರಭುವೇ ! ಎಂದು ತಿಳಿಸುತ್ತಾರೆ. ಆಗ ತನುಭಾವನರಿದಿಪ್ಪುದು ಗುರುಭಕ್ತಿ ಮನಭಾವವ ನರಿದಿಪ್ಪುದು ಲಿಂಗಭಕ್ತಿ ಎರಡು ಭಾವವನೂ ಮರೆದಿಪ್ಪದು ಜಂಗಮ ಭಕ್ತಿ ಈ ಗುಣ ನಿಶ್ಚಯವಾಗಿ ನಿಂದುದು ಸಂಗನ ಬಸವಣ್ಣ ಪ್ರಿಯ ಚಂದೇಶ್ವರ ಲಿಂಗನರಿದುದು ಎಂದು ಭಿನ್ನವಿಸುತ್ತಾರೆ. ಆಗ ಬಸವಣ್ಣ ಪ್ರಭುದೇವರು ಚೆನ್ನಬಸವಣ್ಣನವರ ಅಣತಿಯಂತೆ ತಿಳಿಸಿ ಭೋದಿಸಿದಾಗ ಭೋದೆ ಬೆಳಗಿತು ವಾದ ನಿಂತಿತು ಅಂಗ ಲಿಂಗ ಜಂಗಮ ಪ್ರಸಾದ ಪರಸ್ಪಾರಾವಲಂಬಿಗಳು ಒಂದರಿಂದ ಇನ್ನೊಂದು ಒಡಮೂಡುತ್ತ ಹೋಗುವವು ಒಂದಿಲ್ಲದಿದ್ದರೆ ಇನ್ನೊಂದಿಲ್ಲ ಫಲದ ಸ್ವಾದ ಬೇಕು ಫಲ ಬೇಡವೆಂದರೆ ಆಗದು, ಮರಬೇಕು ಮರದ ಫಲ ಬೇಡವೆಂದರೆ ಸಾಧ್ಯವಿಲ್ಲಾ, ಅದರ ಹಾಗೆ ಜಂಗಮ ಬೇಕು ಲಿಂಗ ಬೇಡವೆಂದರೆ ಸಲ್ಲದು ಅಂತಾ ತಿಳಿಸಿದ್ದರಿಂದ ಚಂದಯ್ಯನವರಿಗೆ ಲಿಂಗ ಪೂಜೆಯಲ್ಲಿ ವಿಶ್ವಾಸ ಹುಟ್ಟಿ ಲಿಂಗದೇವರನ್ನು ಕೊರಳಲ್ಲಿ ಧರಿಸಿದರು. ಇಂದು ನಿಜ ಕಾಯಕ ನಿಷ್ಠೆ ನಿರ್ಭಿತ ವಿಚಾರ ಸರಣೆಯಿಂದ ನಿರ್ಮಲವಾದ ನಡೆ ನುಡಿಯಿಂದ ನಿರಹಂಕಾರ ವೃತ್ತಿಯಿಂದ ನಿಷ್ಕಲ್ಮಷ ಜೀವನದಿಂದ ನಿಜರೂಪವಾಗಿ ನಿಶೇಷ್ಯವಾದ ಕೀರ್ತಿಯನ್ನು ಚಂದಯ್ಯನವರು ಗಳಿಸಿದ್ದಾರೆ. ಚಿದಾನಂದಯ್ಯ ಶ್ರೀ ಶಾಂತಯ್ಯನಮಠ ಗದಗ ಮೊ : 9148208186