ಕತಕನಹಳ್ಳಿ ಮಾತೋಶ್ರೀ ಶಂಕ್ರೆಮ್ಮತಾಯಿ ಪ್ರಾಥಮಿಕ ಶಾಲೆ ಸಾಧನೆ
Kathakanahalli Matoshree Shankremmatai Primary School Achievements
ವಿವಿಧ ವಸತಿ ಶಾಲೆಗಳಿಗೆ 21 ವಿದ್ಯಾರ್ಥಿಗಳು ಆಯ್ಕೆ
ವಿಜಯಪುರ 12: ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಿದಲ್ಲಿ ಉತ್ತಮವಾದ ಫಲಿತಾಂಶವನ್ನು ಪಡೆಯುವುದಕ್ಕೆ ಸಾಧ್ಯ ಎನ್ನುವುದನ್ನು ಕತಕನಹಳ್ಳಿಯ ಮಾತೋಶ್ರೀ ಶಂಕ್ರೆಮ್ಮಾತಾಯಿ ಪ್ರಾಥಮಿಕ ಶಾಲೆಯು ಸಾಬೀತು ಮಾಡಿ ತೋರಿದೆ.
ಕತಕನಹಳ್ಳಿಯ ಶಿವಯ್ಯ ಅಜ್ಜನವರ ಹಾರೈಕೆಯಂತೆ ಪ್ರಾರಂಭವಾಗಿರುವ ಈ ಶಾಲೆಯು ತನ್ನ ಗುಣಮಟ್ಟದ ಶಿಕ್ಷಣದ ಮೂಲಕ ಇಂದು 2024-25ನೇ ಸಾಲಿನ ವಿವಿಧ ವಸತಿ ಶಾಲೆಗಳ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗುವಂತೆ ಮಾಡಿದ್ದಾರೆ. ಮುರಾರ್ಜಿ ವಸತಿ ಶಾಲೆಗೆ ಇಬ್ಬರು ವಿದ್ಯಾರ್ಥಿಗಳು ಹಾಗೂ ಆದರ್ಶ ವಿದ್ಯಾಲಯಕ್ಕೆ 19 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 21 ವಿದ್ಯಾರ್ಥಿಗಳು ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾಗಿದ್ದಾರೆ. ಅಂಕಿತಾ ನಾಯ್ಕೋಡಿ ಹಾಗೂ ಸೃಷ್ಟಿ ಪಾಟೀಲ ಆದರ್ಶ ಶಾಲೆಗೆ ಗೌತಮಿ ಬಬಲೇಶ್ವರ, ಸನ್ನಿಧಿ ಶಿರಮಗೋಂಡ, ಪ್ರದೀಪ ಹಂಡಿ, ಶ್ರವೀಲ ಬಡಿಗೇರ, ಅಬ್ದುಲಸಲಾಂ ವಾಲಿಕಾರ, ಚೈತ್ರಾ ಬಬಲೇಶ್ವರ, ಸನ್ನಿಧಿ ಸೋಲಾಪೂರ, ಸಮೀರ ಚವ್ಹಾಣ, ಭಾಗ್ಯಶ್ರೀ ಬಿರಾದಾರ, ಕಲ್ಪನಾ ರಾಠೋಡ, ವಿರಾಟ ಲಮಾಣಿ, ಆರ್ಯನ ರಾಠೋಡ, ಪ್ರೀತಂ ಪುಂಡಲಿಕ ರಾಠೋಡ, ಪ್ರೀತಂ ವಿಲಿಯಾಸ್ ರಾಠೋಡ, ಜವೇರಿಯಾ ದಳವಾಯಿ, ಪ್ರವೀಣಾ ರಾಠೋಡ, ಸಿದ್ದನಗೌಡ ಪಾಟೀಲ, ಅಂಕಿತಾ ನಾಯ್ಕೋಡಿ ಹಾಗೂ ಸೃಷ್ಟಿ ಪಾಟೀಲ ಈ ವಿದ್ಯಾರ್ಥಿಗಳು ಆಯ್ಕೆಯಾಗುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದು ಇವರ ಸಾಧನೆಗೆ ಶ್ರೀಗುರು ಚಕ್ರವರ್ತಿ ಸದಾಶಿವ ವಿದ್ಯಾವರ್ಧಕ ಸಂಸ್ಥೆಯ ಚೇರಮನ್ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹಾಗೂ ಸಂಸ್ಥೆಯ ಎಲ್ಲ ಸದಸ್ಯರು, ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆ ವಿಜಯಪುರದ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಕೋಚಿಂಗ್ ವಿಭಾಗದ ಮೇಲ್ವಿಚಾರಕ ಹೇಮಂತ ನಾಯಕ, ಶಾಲೆಯ ಮುಖ್ಯಗುರು ಅರವಿಂದ ಪವಾರ ಸೇರಿದಂತೆ ಎಲ್ಲ ಶಿಕ್ಷಕ ವೃಂದ ಮತ್ತು ಎಲ್ಲ ಪಾಲಕರು ಸಂತೋಷವ್ಯಕ್ತಪಡಿಸಿದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 