ಲೋಕದರ್ಶನ ವರದಿ
ಬೆಳಗಾವಿ,30: ಸಮೀಪದ ಹುದಲಿ ಗ್ರಾಮ ಪಂಚಾಯತಿ ಸದಸ್ಯ ಬಸವರಾಜ ನಾಗಪ್ಪ ಕೊಂತಿ ಇವರ ವಿವಿಧ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಕನರ್ಾಟಕ ಕಣ್ಮಣಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.
ನವೆಂಬರ 29 ರಂದು ಬೆಂಗಳೂರು ವಿಶ್ವೇಶ್ವರಯ್ಯ ಪ್ರತಿಷ್ಠಾನ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಬಸವರಾಜ ಕೊಂತಿ ಇವರಿಗೆ ಪ್ರಶಸ್ತಿ ವಿತರಿಸಲಾಯಿತು.
ಹುದಲಿ ಗ್ರಾ.ಪಂ ಅಧ್ಯಕ್ಷ ಅಡಿವೆಪ್ಪ ಮಾಳಗಿ, ತಾಪಂ ಸದಸ್ಯ ಭೀಮಪ್ಪ ಮಳಗಲಿ, ಶಂಕರ ಮಾಳಗಿ, ಪ್ರತಿಷ್ಠಾನದ ಅಧ್ಯಕ್ಷ ರಮೇಶ ಸುವರ್ೆ ಸೇರಿದಂತೆ ಅನೇಕರು ಸಮಾರಂಭದಲ್ಲಿ ಭಾಗವಹಿಸಿದ್ದರು.