ಮಹಾ ನಗರಗಳಲ್ಲಿ ಕನ್ನಡಾಭಿಮಾನ ಬೆಳೆಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ

ರಾಮದುರ್ಗ 05: ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಗಡ್ಡಿಯಾಗಿದೆ. ಮಹಾನಗರ ಪಾಲಿಕೆಗಳಂತಹ ನಗರಗಳಲ್ಲಿ ಕನ್ನಡ ಬಗೆಗೆ ಜನತೆ ನಿರಾಶಕ್ತಿ ವಹಿಸಿ ಅನ್ಯ ಭಾಷೆಗಳ ಬಗೆಗೆ ಒಲವು ತೋರುತ್ತಿದ್ದು, ದೊಡ್ಡ, ದೊಡ್ಡ ನಗರಗಳಲ್ಲಿ ಕನ್ನಡಾಭಿಮಾನ ಬೆಳೆಸುವ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ ಎಂದು ತುರನೂರ ವಿಶ್ವಭಾರತಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ವಿ.ಬಿ.ಸೋಮಣ್ಣವರ  ತಿಳಿಸಿದರು.

ಪಟ್ಟಣದ ಸರಕಾರಿ ಗಂಡು ಮಕ್ಕಳ ಮಾದರಿ ಶಾಲೆ ನಂ 1 ರಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಕಸಾಪ 105 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕನ್ನಡ ಸಾಹಿತ್ಯ ಮತ್ತು ಕಲೆ ಅತ್ಯಂತ ಶ್ರೀಮಂತಿಕೆಯಿಂದ ಕೂಡಿದ್ದು ಕನ್ನಡ ಭಾಷೆಯ ಹಲವಾರು ಕೃತಿಗಳು ಅನ್ಯಭಾಷೆಗೆ ಅನುವಾದಗೊಂಡಿವೆ. ಕನ್ನಡ ನಾಡು ನುಡಿಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಶತಮಾನದ ಕಾಲದಿಂದಲೂ ತನ್ನದೇ ಆದ ವಿಶೇಷ ಕಾರ್ಯಮಾಡುತ್ತ ಕನ್ನಡ ಭಾಷಾ ಬೆಳವಣಿಗೆಗಾಗಿ ಕಂಕಣಬದ್ಧವಾಗಿದೆ. ಶಿಕ್ಷಣ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಕನ್ನಡವನ್ನು ಸುಧಾರಿಸವ ಅವಕಾಶಗಳಿವೆ. ಸರಕಾರದ ಇಚ್ಛಾಶಕ್ತಿಯ ಕೊರತೆಯಿಂದ ನಮ್ಮಯ ನಾಡಿನಲ್ಲಿ ಕನ್ನಡಕ್ಕಾಗಿ ಹೋರಾಡುವ ಸ್ಥಿತಿ ಎದುರಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ತಾಲೂಕಾಧ್ಯಕ್ಷ ಪಾಂಡುರಂಗ ಜಟಗನ್ನವರ, ಸಾಹಿತ್ತಿಕ ಭಾಷೆಗಿಂತ ಮೌಖಿಕ ಭಾಷೆ ಭಿನ್ನವಾಗಿದೆ. ಕನ್ನಡ ಇಂದು ಹಲವು ಪ್ರಬೇಧಗಳನ್ನು ಹೊಂದಿದ್ದರೂ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳಿಂದಲೂ ಸ್ವಸಂತ್ರವಾದ ಪರಂಪರೆ ಹಾಗೂ ಉನ್ನತ ಮಟ್ಟದ ಪ್ರಾಚೀನ ಸಾಹಿತ್ಯವನ್ನು ಹೊಂದಿದ್ದರಿಂದ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ದೊರೆತಿದ್ದು ಹೆಮ್ಮೆಯ ವಿಷಯ ಎಂದು ಹರ್ಷ ವ್ಯಕ್ತಪಡಿಸಿದರು.

ನಿಕಟಪೂರ್ವ ಕಸಾಪ ಅಧ್ಯಕ್ಷ ಪ್ರೊ. ಎಸ್.ಎಂ.ಸಕ್ರಿ ಪ್ರಸ್ತಾವಿಕವಾಗಿ ಮಾತನಾಡಿದರು. ಕಸಾಪ ಗೌರವ ಕಾರ್ಯದಶರ್ಿ ಸಿ.ಆರ್.ಗಂಗಣ್ಣವರ ಗೌರವ ಕೋಶ್ಯಾಧ್ಯಕ್ಷ ಚನ್ನಪ್ಪ ಮಾದರ ಉಪಸ್ಥಿತರಿದ್ದರು. 

ಕನ್ನಡ ಅದ್ಯಾಪಕ ಎಸ್.ವಿ. ಕಲ್ಯಾಣಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಹಣಮಂತ ಯಡ್ರಾವಿ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಂ.ಕಲ್ಲೂರ ವಂದಿಸಿದರು.