ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ- ಪ್ರತಿಬಂಧಕಾಜ್ಞೆ ಜಾರಿ

Karwar dc harish Kumar


ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ- ಪ್ರತಿಬಂಧಕಾಜ್ಞೆ ಜಾರಿ

ಕಾರವಾರ ಅ.26 :   ಪಶ್ಚಿಮ ಪದವೀಧರ ಕ್ಷೇತ್ರದ ದ್ರೈವಾರ್ಷಿಕ ಚುನಾವಣೆಯ ಮತದಾನದ  ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ‌ ಹರೀಶ್ ಕುಮಾರ್ ಜಿಲ್ಲೆಯಲ್ಲಿ ಅ.28 ರಂದು ಪ್ರತಿಬಂದಕಾಜ್ಞೆ ಹೊರಡಿಸಿದ್ದಾರೆ.
ಮತದಾನ  ಸುಗಮವಾಗಿ ಮತ್ತು ಮುಕ್ತವಾಗಿ ನಡೆಸುವ ಉದ್ದೇಶದಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು  ಜಿಲ್ಲೆಯ ಮತದಾನ ಕೇಂದ್ರಗಳ ಸುತ್ತಲೂ ಅ. 26‌ ರಿಂದ  ಸಂಜೆ 6 ಗಂಟೆಯಿಂದ 28ರ ಮಧ್ಯರಾತ್ರಿ 12 ಗಂಟೆಯವರೆಗೆ ಸಿ.ಆರ್.ಪಿ.ಸಿ 1973ರ ಕಲಂ 144ರನ್ವಯ ಪ್ರತಿಬಂಧಕಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯೂ  ಆಗಿರುವ ಡಾ.  ಹರೀಶ ಕುಮಾರ್  ಆದೇಶ ಹೊರಡಿಸಿದ್ದಾರೆ.
  ಜಿಲ್ಲೆಯ 26  ಮತಗಟ್ಟೆಗಳ ಸುತ್ತ 200 ಮೀಟರ್ ಅಂತರದಲ್ಲಿ ಪ್ರಚಾರದ ಸಲುವಾಗಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಕೂಡುವುದು, ಮೆರವಣಿಗೆ ಅಥವಾ ಸಭೆ ಸಮಾರಂಭ ಜರುಗಿಸುವುದನ್ನು ನಿಷೇಧಿಸಲಾಗಿದೆ. ಮತಗಟ್ಟೆಗಳ ಸುತ್ತ 200 ಮೀಟರ್ ಅಂತರದಲ್ಲಿ ಮೊಬೈಲ್ ಫೋನ್, ಕಾಡ್ರ್ಲೆಸ್ ಫೋನ್ ಅಥವಾ ಇನ್ನಿತರೆ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಒಯುವುದನ್ನು ನಿಷೇಧಿಸಲಾಗಿದೆ( ಚುನಾವಣಾ ಕಾರ್ಯದಲ್ಲಿ ಆರ್.ಓ. ಅವರಿಂದ ಅನುಮತಿ ಪಡೆದ ಅಧಿಕಾರಿಗಳು) ಸಿಬ್ಬಂದಿ ಹೊರತುಪಡಿಸಿ).
  ಜಿಲ್ಲೆಯಾದ್ಯಂತ ಈ ಆದೇಶದ ಅವಧಿಯಲ್ಲಿ ಎಲ್ಲ ಸ್ಕ್ಯಾನಿಂಗ್ ಮತ್ತು ಝರಾಜ್ಸ್ ಸೆಂಟರ್‍ಗಳನ್ನು ಸಂಪೂರ್ಣವಾಗಿ ಮುಚ್ಚಬೇಕು. ಮತ್ತಗಟ್ಟೆಗಳ ಸುತ್ತ 100 ಮೀಟರ್ ಪರಿಮಿತಿಯಲ್ಲಿ ಪ್ರಚಾರಕ್ಕೆ ಸಂಬಂಧಿಸಿದ ಪೋಸ್ಟರ್/ಬ್ಯಾನರ್ ಅಥವಾ ಇನ್ನಾವುದೇ ವಸ್ತುಗಳನ್ನು ಬಳಸುವಂತಿಲ್ಲ.  ಪ್ರಚಾರ ವಾಹನಗಳ ಬಳಕೆಯನ್ನು ಹಾಗೂ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ.
  ಬಹಿರಂಗ ಪ್ರಚಾರದ ಅವಧಿಯ ಮುಕ್ತಾದ ನಂತರ ಅಂದರೆ ದಿನಾಂಕ 26-10-2020 ಸಂಜೆ 5 ಗಂಟೆಯ ನಂತರ ಉತ್ತರ ಕನ್ನಡ  ಜಿಲ್ಲೆಯ ಮತದಾರರಲ್ಲದವರು ಜಿಲ್ಲೆಯಿಂದ ಹೊರಗೆ ಹೊಗಬೇಕು. ಜಿಲ್ಲೆಯ  ಎಲ್ಲ ಕಲ್ಯಾಣ ಮಂಟಪ, ಸಮುದಾಯಭವನ, ವಸತಿಗೃಹಗಳಲ್ಲಿ  ಹಾಗೂ ಅತಿಥಿಗೃಹಗಳಲ್ಲಿ ಬಹಿರಂಗ ಪ್ರಚಾರದಲ್ಲಿ ತೊಡಗಿರುವ ಜಿಲ್ಲೆಯವರಲ್ಲದವರು ವಾಸ್ತವ್ಯ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.