8 ದಿನದ ಸಾಂಸ್ಕೃತಿಕ ಸಪ್ತಾಹಕ್ಕೆ ಕಲಾವಿದರಿಗೆ ಕರೆ
Call for artists for 8-day cultural week
ಲೋಕದರ್ಶನ ವರದಿ
ಕೊಪ್ಪಳ 28: ಜಿಲ್ಲಾ ಸಾಂಸ್ಕೃತಿಕ ಪ್ರವಾಸೋದ್ಯಮ ಸಪ್ತಾಹ, ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ 12ನೇ ಸಮ್ಮೇಳನ, 76ನೇ ರಾಜ್ಯಮಟ್ಟದ ಸಾಂಸ್ಕೃತಿಕ ಕಲಾ ಪ್ರತಿಭೋತ್ಸವ ಹಾಗೂ 12ನೇ ರಾಷ್ಟ್ರೀಯ ನೃತ್ಯ ಕಲಾಮೇಳದ ರೂಪರೇಖೆಯು ಸಂಪೂರ್ಣ ಬದಲಾಗಲಿದ್ದು, ಜಿಲ್ಲೆಯ ಕುಷ್ಟಗಿ, ಗಂಗಾವತಿ, ಯಲಬುರ್ಗಾ, ಕೊಪ್ಪಳದಲ್ಲಿ ನಡೆಯಲಿದೆ. ಈ ನಾಲ್ಕು ತಾಲ್ಲೂಕಿನಲ್ಲಿ ತಲಾ 2 ದಿನದಂತೆ, ಒಟ್ಟು 8 ದಿನಗಳ ಜಿಲ್ಲೆಯಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಆಯಾ ತಾಲ್ಲೂಕಿನ ಕಲಾವಿದರು, ನೃತ್ಯಗಾರರು, ಗಾಯಕರು, ಸಂಗೀತ, ಏಕಪಾತ್ರಾಭಿನಯ, ಕವನ ವಾಚನ, ಚಿತ್ರಕಲಾ ಪ್ರದರ್ಶನ, ಕರಕುಶಲ ಪ್ರದರ್ಶನ, ಪುಸ್ತಕ ಪ್ರದರ್ಶನ ಹಾಗೂ ಜನಪದ ಮೂಲ ಗೀತೆಗಳ ಕಲಾವಿದರು ಸೇರಿದಂತೆ, ಎಲ್ಲಾ ಕಲಾ ಪ್ರಕಾರಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆಸಕ್ತರು ತಮ್ಮ ತಾಲ್ಲೂಕಿನಲ್ಲಿ ನಡೆಯುವಾಗ ಭಾಗವಹಿಸಬಹುದು.ಕೂಡಲೇ ತಮ್ಮ 2 ಭಾವಚಿತ್ರ, ಒಂದು ಪುಟ ಸಾಧನೆಯ ಮಾಹಿತಿ, ದೂರವಾಣಿ ಮತ್ತು ವಿಳಾಸದೊಂದಿಗೆ ನೋಂದಣಿ ಮಾಡಿಕೊಳ್ಳುಬಹುದು. ವಾಟ್ಸಾಪ್ ಮೂಲಕ ಅರ್ಜಿಯನ್ನು ಪಡೆದು, ಭರ್ತಿ ಮಾಡಿ ಬೆಂಗಳೂರಿನ ಕೇಂದ್ರ ಕಛೇರಿಗೆ ಕಳುಹಿಸಬೇಕು.
ಈ ಕಾರ್ಯಕ್ರಮವು ಪ್ರತಿ ತಾಲ್ಲೂಕಿನ 2 ದಿನಗಳಂತೆ ನಡೆಯಲಿದ್ದು, 2026ನೇ ಸಂಸ್ಥೆಯ ಗೌರವ ಅಧ್ಯಕ್ಷರಾಗಿ ಸಹಕಾರಿ ಧುರಿಣ, ಸಾಹಿತಿ, ಕಸಪಾ ಮಾಜಿ ಜಿಲ್ಲಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಕಾರ್ಯನಿರ್ವಹಿಸುತ್ತಿದ್ದಾರೆ. ಮೇಲ್ಕಂಡ ಸಮ್ಮೇಳನದಲ್ಲಿ ವಿಶ್ವೇಶ್ವರಯ್ಯ ಪ್ರತಿಷ್ಠಾನದ ಸದಸ್ಯತ್ವದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಎಲ್ಲಾ ವಯಸ್ಸಿನ ಕಲಾವಿದರಿಗೆ ಅವಕಾಶವಿದ್ದು, ಆಯ್ಕೆಯಾದ ಎಲ್ಲರಿಗೂ ಕರುನಾಡ ಕಲಾಕಣ್ಮಣಿ ಅಥವಾ ಅರ್ಜಿಯ ಹಿಂಭಾಗದಲ್ಲಿರುವ ಯಾವುದೇ ಪ್ರಶಸ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಒಂದು ಸಾವಿರ ರೂ. ಸದಸ್ಯತ್ವದ ಶುಲ್ಕವಿದ್ದು, ಸದಸ್ಯರಾದವರಿಗೆ ರಾಜ್ಯಮಟ್ಟದ ಪ್ರಶಸ್ತಿಯ ಜೊತೆಗೆ ಒಂದು ನೆನಪಿನ ಕಾಣಿಕೆ, ಹಾರ, ಶಾಲು, ಪ್ರಶಸ್ತಿ ಪತ್ರ ಮತ್ತು ಸದಸ್ಯತ್ವದ ಐಡಿ ಕಾರ್ಡ್ ನೀಡಿ ಗೌರವಿಸಲಾಗುವುದು. ಭಾಗವಹಿಸುವ ಕಲಾವಿದರು ಕಡ್ಡಾಯವಾಗಿ 2 ಅವಧಿಯ ಕಾರ್ಯಕ್ರಮದಲ್ಲಿ, ಒಂದು ಅವಧಿಗೆ ರಂಗಮಂದಿರಬೇಕಾಗಿದ್ದು ಅತ್ಯಾವಶ್ಯಕ. ಕಾರ್ಯಕ್ರಮ ಮೊದಲ ಅವಧಿ ಬೆಳಿಗ್ಗೆ 9 ರಿಂದ ಮದ್ಯಾಹ್ನ 2 ಗಂಟೆಯವರೆಗೆ, ಎರಡನೇ ಅವಧಿ 1.30 ರಿಂದ ರಾತ್ರಿ 9.30 ರವರೆಗೆ ನಡೆಯುತ್ತದೆ. ಅರ್ಜಿಯನ್ನು ಕೂಲಂಕುಶವಾಗಿ ಪರೀಶೀಲಿಸಿ ತುಂಬಿ ಕೆಳಕಂಡ ವಿಳಾಸಕ್ಕೆ ಕಳುಹಿಸಿ.
ಕಛೇರಿ ವಿಳಾಸ : ರಮೇಶ ಸುರ್ವೆ ಅಧ್ಯಕ್ಷರು, ವಿಶ್ವೇಶ್ವರಯ್ಯ ಪ್ರತಿಷ್ಠಾನ (ರಿ.). ನಂ. 468/ಸುರ್ವೆ, 13ನೇ ಮುಖ್ಯರಸ್ತೆ, 3ನೇ ಹಂತ, ಮೋದಿ ಸರ್ಕಲ್-ತಿಮ್ಮಯ್ಯ ರಸ್ತೆ, ಮಂಜುನಾಥನಗರ, ಬೆಂಗಳೂರು-560010. ಹೆಚ್ಚಿನ ಮಾಹಿತಿ ಮತ್ತು ಅರ್ಜಿಗಾಗಿ 9845307327 ನಂಬರ್ಗೆ ಕರೆ ಮಾಡಿ ಪಡೆಯಿರಿ. ಕಾರ್ಯಕ್ರಮವು ಅಗಸ್ಟ್, ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ನಲ್ಲಿ ನಡೆಯಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 