ಪರಿಸರ ಸಂರಕ್ಷಣೆ ನಮ್ಮೆಲ್ಲರ ಮೂಲಭೂತ ಕರ್ತವ್ಯ

 ಪರಿಸರ ಸಂರಕ್ಷಣೆ ನಮ್ಮೆಲ್ಲರ ಮೂಲಭೂತ ಕರ್ತವ್ಯ Environmental protection is the fundamental duty of all of us.

ಲೋಕದರ್ಶನ ವರದಿ

ಹಾವೇರಿ 28 : ಮೂಲಭೂತ ಹಕ್ಕುಗಳಿಗಾಗಿ ಹೋರಾಡುವ ನಾವುಗಳು ಈ ಭೂಮಿಯನ್ನು ಸಂರಕ್ಷಿಸುವುದನ್ನೆ ಮರೆತುಬಿಟ್ಟಿದ್ದೇವೆ. ವಿನಾಶದತ್ತ ಸಾಗುತ್ತಿರುವ ಮನುಕುಲವನ್ನು ಉಳಿಸಲು ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ  ಬಿರಾದಾರ ದೇವಿಂದ್ರಾ​‍್ಪ ಎನ್ ರವರು ಹೇಳಿದರು. ನಗರದ ಪ್ರಾದೇಶಿಕ ಅರಣ್ಯ ವಿಭಾಗದ ಕಚೇರಿ ಆವರಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಭೂ ದಿನ-2026 ಕಾರ್ಯಕ್ರಮದಲ್ಲಿ ಸಸಿಯನ್ನು ನೆಟ್ಟು ನೀರೆರೆಯುವುದರ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದರ ಅವರು, ಜಾಗತಿಕ ತಾಪಮಾನ ಅರಣ್ಯ ನಾಶ ಹಾಗೂ ಮಾಲಿನ್ಯದಂತಹ ಸವಾಲುಗಳನ್ನು ಮೆಟ್ಟಿನಿಲ್ಲಲು ಭೂ ದಿನದ ಆಚರಣೆ ಪೂರಕವಾಗಿದೆ ಭವಿಷ್ಯದ ಪೀಳಿಗೆಗಾಗಿ ಭೂಮಿಯನ್ನು ಉಳಿಸಲು ತುರ್ತು ಕ್ರಮಗಳ ಅಗತ್ಯವಿದೆ ಕೇವಲ ದಿನಾಚರಣೆಗಳಿಗೆ ಸೀಮಿತವಾಗದೆ ಸಾಮಾಜಿಕವಾಗಿ ಸಾಂಘಿಕವಾಗಿ ಹೋರಾಟ ಮಾಡುವುದರ ಮೂಲಕ ಈ ಸುಂದರ ಪರಿಸರವನ್ನು ಸಂರಕ್ಷಣೆಮಾಡಬೇಕಿದೆ ಎಂದರ. 

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್‌. ಸಿ. ಸಿದ್ದನಗೌಡ್ರ ಮಾತನಾಡಿ, ಮಾನವನ ದುರಾಸೆಗಳೇ ಇಂದಿನ ಪರಿಸರ ದುರಂತಗಳಿಗೆ ಬೀಜಗಳಾಗಿವೆ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವಿತಾವಧಿಯಲ್ಲಿ ಕನಿಷ್ಠ ಪಕ್ಷ ಕೆಲವು ಸಸಿಗಳನ್ನಾದರೂ ನೆಟ್ಟು ಪೋಷಿಸುವ ಮೂಲಕ ಭೂಮಿತಾಯಿಯ ಋಣ ತೀರಿಸಬೇಕು ಎಂದರು. . ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ಕರ್ ಅಕ್ಷಯ ಅಶೋಕ ಅವರು ಮಾತನಾಡಿ, ನಮಗೆ ಇರುವುದೊಂದೇ ಭೂಮಿ ಇದನ್ನು ಪಾಲನೆ ಪೋಷಣೆಮಾಡುವುದರ ಮೂಲಕ ಸುಂದರ ನಾಳೆಗಾಗಿ ಹಸಿರಾಗಿಸೋಣ ಮತ್ತು ಈ ಸುಂದರ ಪರಿಸರವನ್ನು ನಮ್ಮ ಮುಂದಿನ ಪಿಳಿಗೆಗೆ ಕೊಡುಗೆಯಾಗಿ ನೀಡೋಣ ಜಿಲ್ಲೆಯ ಪ್ರತಿಯೊಂದು ಶಾಲೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ತಾವು ಸೇವಿಸುವ ಹಣ್ಣುಗಳ ಬೀಜಗಳನ್ನು ಸಂಗ್ರಹಿಸಿ ಅರಣ್ಯ ಇಲಾಖೆಗೆ ನೀಡುವುದರ ಮೂಲಕ ಹಸಿರು ವೃದ್ಧಿಗೆ ಸಹಕರಿಸಬೇಕು ಎಂದು ಕರೆ ನೀಡಿದರು. ಹಾವೇರಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ. ಹೆಚ್‌. ಮಂಜುನಾಥ ರವರು ಸ್ವಾಗತಿಸಿದರು, ವಲಯ ಅರಣ್ಯ ಅಧಿಕಾರಿ  ಸಿದ್ದಮ್ಮ ಕರಿಗಾರ ವಂದಿಸಿದರು, ಗಸ್ತು ಅರಣ್ಯ ಪಾಲಕ ಬಸವರಾಜ ಕುಲಕರ್ಣಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಶೈಲಜಾ ಹೆಚ್ ವಿ, ಅರಣ್ಯ ಇಲಾಖೆಯ ಸಿಬ್ಬಂದಿಗಳು, ಜಿ. ಹೆಚ್‌. ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.