ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಚುನಾವಣೆ
ಇಂಡಿ 16: ಕರ್ನಾಟಕ ಸರ್ಕಾರಿ ರಾಜ್ಯ ನೌಕರರ ಸಂಘದ ಚುನಾವಣೆ ಇಂದು ಇಂಡಿ ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಆವರಣದಲ್ಲಿ ನಡಯಿತು. ಅಧ್ಯಕ್ಷರಾಗಿ ಬಸವರಾಜ ರಾವೂರ, ರಾಜ್ಯ ಪರಿಷತ್ ಸದಸ್ಯರಾಗಿ ಬಸವರಾಜ ಮೇತ್ರಿ ಹಾಗೂ ಖಜಾಂಚಿಯಾಗಿ ಎಸ್ ಎಸ್ ಪ್ಯಾಟಿ ಅವರು ಆಯ್ಕೆ ಆಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಅಂಬಣ್ಣಾ ಸುಣಗಾರ ತಿಳಿಸಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಬಸವರಾಜ ರಾವೂರ ಹಾಗೂ ಎಸ್ ಡಿ ಪಾಟೀಲ ಅವರು ಇಬ್ಬರು ಸ್ಫರ್ಧೆ ಮಾಡಿದರು. ಎಸ್ ಡಿ ಪಾಟೀಲ ಪರ 15 ಮತಗಳು ಬಂದರೆ ಬಸವರಾಜ ರಾವೂರ ಪರ 18 ಮತಗಳು ಬಂದ್ದವು ಅತಿ ಹೆಚ್ಚು ಮತ ಪಡೆದ ಬಸವರಾಜ ರಾವೂರ ಜಯ ಗಳಿಸಿದ್ದಾರೆ ಎಂದು ಘೋಷಿಸಲಾಯಿತು. ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಬಸವರಾಜ ಮೇತ್ರಿ ಹಾಗೂ ವಿಜಯಕುಮಾರ ಪೋಳ ಅವರು ನಡುವೆ ಸ್ಪರ್ಧೆ ನಡೆದಿತ್ತು. ಬಸವರಾಜ ಮೇತ್ರಿ ಪರ 17 ಮತ ಬಂದರೆ.ವಿಜಯ ಕುಮಾರ್ ಪೋಳ ಪರ 16 ಮತ ಬಂದ್ದವು. ಅತಿ ಹೆಚ್ಚು ಮತ ಪಡೆದ ಬಸವರಾಜ ಮೇತ್ರಿ ಅವರು ವಿಜಯಶಾಲಿ ಎಂದು ಘೋಷಿಸಲಾಯಿತು. ಇನ್ನೂ ಖಜಾಂಚಿ ಸ್ಥಾನಕ್ಕೆ ಎಸ್ ಎಸ್ ಪ್ಯಾಟಿ ಹಾಗೂ ವಿ ಪಿ ನಾಯಕ ಅವರು ನಾಮಪತ್ರ ಸಲ್ಲಿಸಿದರು. ಎಸ್ ಎಸ್ ಪ್ಯಾಟಿ ಪರ 17 ಮತ ಬಂದ್ದರೆ ವಿ ಪಿ ನಾಯಕ ಪರ 16 ಮತ ಬಂದವು. ಹೆಚ್ಚು ಮತ ಪಡೆದ ಎಸ್ ಎಸ್ ಪ್ಯಾಟಿ ಅವರು ಜಯ ಗಳಿಸಿದ್ದಾರೆ ಎಂದು ಗುರುತು ಪಡಿಸಲಾದ ಚುನಾವಣೆ ಅಧಿಕಾರಿ ಅಂಬಣ್ಣಾ ಸುಣಗಾರ ತಿಳಿಸಿದ್ದಾರೆ.
ಒಟ್ಟು 33 ಮತದಾರರು ಇದ್ದು ಎಲ್ಲಾ 33 ಮತದಾರರು ಮತದಾನ ಮಾಡಿದ್ದಾರೆ ಎಲ್ಲಾ ಮಾತುಗಳು ಕ್ರಮ ಬಿಂದುವಾಗಿದ್ದವು ಎಂದು ಚುನಾವಣಾ ಅಧಿಕಾರಿ ತಿಳಿಸಿದ್ದರು ಈ ಬಾರಿ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ಕಾವು ಬಾರಿ ಜೋರಾಗಿತ್ತು ಎಂದರು ತಪ್ಪಾಗಲಾರದು.ಚುಣಾವಣೆ ಫಲಿತಾಂಶ ಪ್ರಕಟವಾದ ಸುದ್ದಿ ತಿಳಿದ ತಕ್ಷಣ ತಮ್ಮ ಬೆಂಬಲಿಗರು ಝೇಂಕಾರ ಕೂಗೂತ್ತಾ, ಒಬ್ಬರಿಗೊಬ್ಬರು ಗುಲಾಲ ಎರಚಿ ಸಂಭ್ರಮ ಆಚರಣೆ ಮಾಡಿದರು.