ಕರ್ನಾಟಕ ರಾಜ್ಯೋತ್ಸವ: ವ್ಯವಸ್ಥಿತವಾಗಿ ಆಚರಿಸಲು ಜಿಲ್ಲಾಧಿಕಾರಿಗಳ ನಿರ್ದೇಶನ

ಗದಗ :  ಗದಗ ಜಿಲ್ಲಾಡಳಿತದಿಂದ ಬರುವ ನವೆಂಬರ 1ರಂದು ಜರುಗುವ ಕನ್ನಡ ರಾಜ್ಯೋತ್ಸವವನ್ನು  ವ್ಯವಸ್ಥಿತವಾಗಿ ಹಾಗೂ ಅರ್ಥಪೂರ್ಣವಾಗಿ    ಆಚರಿಸಲು  ಅಗತ್ಯದ  ಕ್ರಮ ಕೈಗೊಳ್ಳಬೇಕೆಂದು   ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ತಿಳಿಸಿದರು. 

ಗದಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು  ಜರುಗಿದ   ಕನರ್ಾಟಕ ರಾಜ್ಯೋತ್ಸವ   ಆಚರಣೆಯ ಕುರಿತ  ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಂದು ಮುಂಜಾನೆ 7.15 ಗಂಟೆಗೆ ಗದಗ ಮುನ್ಸಿಪಲ್ ಕಾಲೇಜ್ ಆವರಣದಲ್ಲಿ ಕನ್ನಡಾಂಬೆ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ರಾಜ್ಯೋತ್ಸವ  ಕಾರ್ಯಕ್ರಮಕ್ಕೆ   ಚಾಲನೆ ನೀಡಲಾಗುವದು. ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ  ಜಿಲ್ಲಾಡಳಿತದ ವತಿಯಿಂದ  ಜರುಗುವ ಸಾರ್ವಜನಿಕ ಧ್ವಜಾರೋಹಣವನ್ನು ಬೆಳಿಗ್ಗೆ  9.00 ಗಂಟೆಗೆ  ನೆರವೇರಿಸಲಾಗುವದು. ಅಂದು ಬೆಳಗ್ಗೆ ಜರುಗುವ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮಕ್ಕೆ ಎಲ್ಲ ಶಾಲಾ ಕಾಲೇಜು ವಿದ್ಯಾಥರ್ಿಗಳು, ಸರಕಾರಿ ಅಧಿಕಾರಿ, ಸಿಬ್ಬಂದಿಗಳು, ಸಾರ್ವಜನಿಕರು ಸರಿಯಾದ ಸಮಯಕ್ಕೆ ಹಾಜರಾಗುವಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.   ಈ ಸಂದರ್ಭದಲ್ಲಿ  ಕಲಾ ತಂಡಗಳ ಮೆರವಣಿಗೆ,     ಪಥ ಸಂಚಲನ ದಳಗಳ ಆಯ್ಕೆ,  ಸಚಿವರ ಸಂದೇಶ , ಬಹುಮಾನ ವಿತರಣೆ, ಸಾಧಕರಿಗೆ ಸನ್ಮಾನ, ವೇದಿಕೆ ವ್ಯವಸ್ಥೆ, ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರ   ಹಾಗೂ ಸಾಯಂಕಾಲ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ಚಚರ್ಿಸಲಾಯಿತು.  ಈ ಕುರಿತು ಸಂಬಂಧಿತ ಇಲಾಖೆ ಅಧಿಕಾರಿಗಳು  ಹೆಚ್ಚಿನ ಮುತುವರ್ಜಿಯಿಂದ  ಕಾರ್ಯನಿರ್ವಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.  ಸಮಾರಂಭದಲ್ಲಿ ಯಾವುದೇ ನ್ಯೂನತೆ ಆಗದಂತೆ ವ್ಯವಸ್ಥಿತವಾಗಿ ಜವಾಬ್ದಾರಿಯಿಂದ ಅಧಿಕಾರಿಗಳು ಹಾಗೂ ಸಮಿತಿಗಳು ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಬೇಕು.  ಒಟ್ಟಾರೆಯಾಗಿ ರಾಜ್ಯೋತ್ಸವ ಸಮಾರಂಭವನ್ನು ವ್ಯವಸ್ಥಿತವಾಗಿ ಆಚರಿಸಲು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚನೆ ನೀಡಿದರು. 

       ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿ.ಪಂ. ಉಪಕಾರ್ಯದಶರ್ಿ  ಪ್ರಾಣೇಶ ರಾವ್,  ತಹಶೀಲ್ದಾರರಾದ ಶ್ರೀನಿವಾಸ ಮೂರ್ತಿ ಕುಲಕರ್ಣಿ,  ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರಾದ ಮನ್ಸೂರ ಅಲಿ,  ಜಿಲ್ಲಾ ಶಸ್ತ್ರ ಚಿಕಿತ್ಸಕರಾದ  ಡಾ. ಕರಿಗೌಡ್ರ,  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್.ಸಿ.ಎಚ್. ಅಧಿಕಾರಿ ಡಾ. ಗೊಜನೂರು   ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.