ತಾಳಿಕೋಟಿ 03: ಪಟ್ಟಣದ ಪ್ರತಿಷ್ಠಿತ ಶ್ರೀ ಎಚ್.ಎಸ್.ಪಾಟೀಲ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ, ಸಮಾಜ ಸೇವಕರಾದ ಎಚ್.ಎಸ್.ಪಾಟೀಲ ಇವರಿಗೆ ದೇಶದ ಖ್ಯಾತ ಉದ್ಯಮಿ ರತನ್ ಟಾಟಾ ಇವರ ಸ್ಮರಣಾರ್ಥವಾಗಿ ಬೆಂಗಳೂರಿನ ಶಿವಶ್ರೀ ಮಾಧ್ಯಮ ಪ್ರೈವೇಟ್ ಲಿಮಿಟೆಡ್ ವತಿಯಿಂದ ಕೊಡ ಮಾಡುವ ಕರ್ನಾಟಕ ಹೆಮ್ಮೆಯ ಉದ್ಯಮಿ 2024 ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಗಿದೆ.
ಮಾರ್ಚ್ 1 ರಂದು ಬೆಂಗಳೂರಿನ ಶರಟಾನ್ ಗ್ರ್ಯಾಂಡ್ ಹೋಟೆಲ್ ನಲ್ಲಿ ಶಿವ ಶ್ರೀ ಮಾಧ್ಯಮ ಪ್ರೈವೇಟ್ ಲಿಮಿಟೆಡ್ ಅವರು ಹಮ್ಮಿಕೊಂಡ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕರ್ನಾಟಕ ವಿಧಾನಸಭೆಯ ಘನ ಅಧ್ಯಕ್ಷ( ಸ್ಪೀಕರ)ರಾದ ಶ್ರೀ ಯು.ಟಿ.ಖಾದರ್ ಅವರು ಈ ಪ್ರಶಸ್ತಿಯನ್ನು ಎಚ್‌ಎಸ್ ಪಾಟೀಲರಿಗೆ ಪ್ರಧಾನ ಮಾಡಿದರು.
ಅಭಿನಂದನೆ: ಎಚ್‌ಎಸ್ ಪಾಟೀಲ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಎಚ್‌ಎಸ್ ಪಾಟೀಲರಿಗೆ ಈ ಪ್ರಶಸ್ತಿ ಲಭಿಸಿದ್ದಕ್ಕಾಗಿ ಅವರ ಧರ್ಮಪತ್ನಿ, ಸಂತೋಷ್ ಎಚ್ ಪಾಟೀಲ, ಸ್ಮಿತಾ ಸಂತೋಷ ಪಾಟೀಲ, ಸಂತೋಷ್ ತಿಳಗೂಳ, ರಾಮನಗೌಡ ಪಾಟೀಲ ಕಾರ್ಯದರ್ಶಿ ಸಚಿನ್ ಎಚ್. ಪಾಟೀಲ, ಆಡಳಿತಾಧಿಕಾರಿ ಕಿರಣ್ ಬಿ ಪಾಟೀಲ, ಸದಸ್ಯ ರವಿ ಬಿ. ಪಾಟೀಲ, ಪ್ರಾಚಾರ್ಯರಾದ ಡಾ.ಎಚ್.ಬಿ.ನಡುವಿನಮನಿ, ಶಿವಕುಮಾರ್ ನಾಯಕ, ವೀರೇಶ್ ಕನಕ, ಜಿ.ಸಿ.ಪಾಟೀಲ, ಎಂ.ಎಸ್.ಬಿರಾದಾರ, ಮುಖ್ಯ ಗುರುಗಳಾದ ಅಶೋಕ ಕಟ್ಟಿ, ಜೆ. ಎಂ.ಕೊಣ್ಣೂರ, ಮೀರಾ ದೇಶಪಾಂಡೆ, ಬಿ.ಐ.ಹಿರೇಹೊಳಿ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.