ಕರ್ನಾಟಕ-ಜಮ್ಮು ಕ್ವಾರ್ಟರ್ ಫೈನಲ್ಸ್ ಪಂದ್ಯಕ್ಕೆ ಮಂದ ಬೆಳಕಿನ ಕಾಟ, ಕರುಣ್ ಪಡೆಗೆ ಆರಂಭಿಕ ಆಘಾತ

karun

ಜಮ್ಮು, ಫೆ.20- ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೂರನೇ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಕರ್ನಾಟಕ ಹಾಗೂ ಜಮ್ಮು ಕಾಶ್ಮೀರ ತಂಡಗಳು ಕಾದಾಟ ನಡೆಸಿದವು. ಆದರೆ, ಮಂದಬೆಳಕು ಆಟಕ್ಕೆ ಕಾಟ ನೀಡಿದ್ದರಿಂದ ಕೇವಲ ಆರು ಓವರ್ ಗಳ ಪಂದ್ಯ ಮಾತ್ರ ನಡೆದಿದೆ. 

  ಟಾಸ್ ಗೆದ್ದ ಕರ್ನಾಟಕ ತಂಡ ಮೊದಲು ಬ್ಯಾಟಿಂಗ್ ಮಾಡಲು ಮುಂದಾಯಿತು. ಸ್ಟಾರ್ ಆರಂಭಿಕರಾದ ಆರ್.ಸಮರ್ಥ್ (5) ಹಾಗೂ ದೇವದತ್ ಪಡಿಕ್ಕಲ್ (2) ರನ್ ಕಲೆ ಹಾಕುವಲ್ಲಿ ವಿಫಲರಾದರು. ನಾಯಕ ಕರುಣ್ ನಾಯರ್ (4) ಹಾಗೂ ಕೆ.ವಿ ಸಿದ್ಧಾರ್ಥ್ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಕರ್ನಾಟಕ ದಿನದಾಟದಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 14 ರನ್ ಸೇರಿಸಿದೆ. 

  ರಣಜಿ ಟ್ರೋಫ ಪಂದ್ಯಕ್ಕೆ ಮಂದ ಬೆಳಕು ಕಾಡಿತು. 90 ಓವರ್ ಗಳ ಪಂದ್ಯದಲ್ಲಿ ಕೇವಲ ಆರು ಓವರ್ ಗಳ ಆಟ ಮಾತ್ರ ನಡೆಯಿತು. ಈ ಅವಧಿಯಲ್ಲಿ ಕರ್ನಾಟದ ಸ್ಟಾರ್ ಬ್ಯಾಟ್ಸ್ ಮನ್ ಗಳು ರನ್ ಕಲೆ ಹಾಕುವಲ್ಲಿ ಎಡವಿದರು.