ಧಾರವಾಡ ಫೆ.04: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆ ಅಡಿ 2024-25 ನೇ ಸಾಲಿನ ಹಿಂಗಾರು ಹಂಗಾಮಿಗೆ ಧಾರವಾಡ ಜಿಲ್ಲೆಯಲ್ಲಿ ಕೈಗೊಂಡಿರುವ ಬೆಳೆ ಕಟಾವು ಪ್ರಯೋಗದ ಸಮೀಕ್ಷೆ ಕಾರ್ಯದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ನಿನ್ನೆ (ಫೆ.03) ಮಧ್ಯಾಹ್ನ ಪಾಲ್ಗೊಂಡಿದ್ದರು.
ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮ ಪಂಚಾಯತಿ ವಿಮಾ ಘಟಕದ ವ್ಯಾಪ್ತಿಯ ಬ್ಯಾಲಾಳ ಗ್ರಾಮದ ರೈತ ಶಿವರೆಡ್ಡಿ ಭೀಮರೆಡ್ಡಿ ಹೆಬ್ಬಾಳ ಇವರ ಸರ್ವೆ ನಂ: 138 ರ ಜಮೀನದಲ್ಲಿರುವ ಕಡಲೆ (ಮಳೆ ಆಶ್ರಿತ) ಬೆಳೆಯ ಬೆಳೆ ಕಟಾವು ಪ್ರಯೋಗದ ಸಮೀಕ್ಷೆ ಕಾರ್ಯದ ಮೇಲ್ವಿಚಾರಣೆಯನ್ನು ಜಿಲ್ಲಾಧಿಕಾರಿಗಳು ಮಾಡಿದರು.
ಗ್ರಾಮ ಪಂಚಾಯತ ಮಟ್ಟಕ್ಕೆ ಜೋಳ (ಮಳೆ ಆಶ್ರಿತ), ಕಡಲೆ (ಮಳೆ ಆಶ್ರಿತ) ಬೆಳೆಗಳ ಒಟ್ಟು 237 ಹಾಗೂ ಹೋಬಳಿ ಮಟ್ಟಕ್ಕೆ ಜೋಳ(ನೀ), ಮುಸುಕಿನಜೋಳ(ನೀ), ಗೋಧಿ(ಮಳೆ ಆಶ್ರಿತ), ಗೋಧಿ(ನೀ), ಕಡಲೆ(ಮಳೆ ಆಶ್ರಿತ), ಕಡಲೆ(ಮಳೆ ಆಶ್ರಿತ), ಕಡಲೆ(ನೀ), ಕುಸುಮೆ(ಮಳೆ ಆಶ್ರಿತ), ಹೆಸರು(ಮಳೆ ಆಶ್ರಿತ), ಹುರುಳಿ(ಮಳೆ ಆಶ್ರಿತ), ಸೂರ್ಯಕಾಂತಿ (ಮಳೆ ಆಶ್ರಿತ), ಸೂರ್ಯಕಾಂತಿ(ನೀ) ಬೆಳೆಗಳ ಒಟ್ಟು 65 ಸೇರಿದಂತೆ ಒಟ್ಟು 302 ವಿಮಾ ಘಟಕಗಳಿಗೆ ಮತ್ತು ಹತ್ತಿ (ಮಳೆ ಆಶ್ರಿತ), ಸೋಯಾಬಿನ್(ನೀ), ಸಾವೆ(ಮಳೆ ಆಶ್ರಿತ) ಬೆಳೆಗಳ 06 ಹೋಬಳಿಗಳನ್ನು ಸೇರಿದಂತೆ ಒಟ್ಟು 1658 ಬೆಳೆ ಕಟಾವು ಪ್ರಯೋಗಗಳ ಕಾರ್ಯಯೋಜನಾ ಪಟ್ಟಿಯನ್ನು ಅನುಮೋದಿಸಲಾಗಿದೆ. ಸದರಿ ಬೆಳೆ ಕಟಾವು ಪ್ರಯೋಗಗಳು ನಮೂನೆ-1 ಮತ್ತು ನಮೂನೆ-2 ರಲ್ಲಿ ಪ್ರಗತಿಯಲ್ಲಿವೆ.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಶಾಲಂ ಹುಸೇನ್, ತಹಶೀಲ್ದಾರ ಸುಧೀರ ಸಾಹುಕಾರ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ವೀರನಗೌಡ ಪಾಟೀಲ, ತಾಲೂಕಾ ಯೋಜನಾಧಿಕಾರಿಗಳು, ಸಹಾಯ ಸಾಂಖ್ಯಿಕ ಅಧಿಕಾರಿಗಳು, ಸಾಂಖ್ಯಿಕ ನೀರೀಕ್ಷಕರು, ಕಂದಾಯ ನೀರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮದ ರೈತರು ಹಾಗೂ ಎಐಸಿ ವಿಮಾ ಕಂಪನಿಯ ಜಿಲ್ಲಾ ಕೋ-ಆರ್ಡಿನೇಟರ್ ಅವರು ಉಪಸ್ಥಿತರಿದ್ದರು.