2025 ರ ವಿಶ್ವ ಕ್ಯಾನ್ಸರ್ ದಿನದ ಧೈಯವಾಕ್ಯ "ಯುನೈಟೆಡ್ ಬೈ ಯುನಿಕ್”
ಗದಗ 04: ಕ್ಯಾನ್ಸರ್ ಬಗ್ಗೆ ಸರಿಯಾದ ಶಿಕ್ಷಣ ನೀಡಲು ಮತ್ತು ಕ್ಯಾನ್ಸರ್ ಪೀಡಿತ ರೋಗಿಗಳ ಕುಟುಂಬಗಳನ್ನು ಬೆಂಬಲಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಕ್ಯಾನ್ಸರ್ ತಡೆಯಲು ಯಾವ ರೀತಿಯ ಜೀವನ ಶೈಲಿಯನ್ನು ಅನುಸರಿಸಬೇಕು ಎಂಬುದನ್ನು ತಿಳಿಸಿಕೊಡಲು ಡಾ. ಗಣೇಶ್ ರಾವ್ ಕುಂದಾಪುರ, ಇವರು ಕ್ಯಾನ್ಸರ್ ಶಸ್ತ್ರ ಚಿಕಿತ್ಸಕರಾಗಿ ಗದಗ ನಗರದಲ್ಲಿಕಾರ್ಯ ನಿರ್ವಹಿಸುತ್ತಿದ್ದಾರೆ, ಇಲ್ಲಿಯವರೆಗೂ ಸುಮಾರು 10 ಸಾವಿರ ಕ್ಕಿಂತ ಅಧಿಕ ಕ್ಯಾನ್ಸರ್ ಶಸ್ತ್ರ, ಚಿಕಿತ್ಸೆಯನ್ನು ಮಾಡಿದ ಪರಿಣಿತಿ ಪಡೆದಿದ್ದಾರೆ.
ಕ್ಯಾನ್ಸರ್ ಅಪಾಯವನ್ನು ತಪ್ಪಿಸುವ, ಕಡಿಮೆ ಮಾಡಲು ಸಹಾಯ ಮಾಡುವ ಕೆಲವು ಮಾತುಗಳನ್ನು ಅವರು ತಿಳಿಸುತ್ತಾ ತಂಬಾಕು ಬಳಕೆಯು ಕ್ಯಾನ್ಸರ್ ಗೆ ಪ್ರಮುಖಕಾರಣಗಳಲ್ಲಿ ಒಂದಾಗಿದೆ, ದುಶ್ಚಟದಿಂದ ಮುಕ್ತರಾಗಿ, ನಿಯಮಿತವಾಗಿ ತಪಾಸಣೆಮಾಡಿಸಿಕೊಳ್ಳಿ ’ಕಡಿಜಛಿಚಿಣಣಠ ಛಜಣಣಜಡಿ ಣಚಿಟಿ ಛಿಣಡಿಜ ’ ಕ್ಯಾನ್ಸರ್ ಅನ್ನು ಪರಿಣಾಮಕಾರಿಯಾಗಿ ಎದುರಿಸಲು ಆರಂಭಿಕ ಪತ್ತೆ ಪ್ರಮುಖವಾಗಿದೆ. ಗರ್ಭಕಂಠ ಮತ್ತು ಇತರ ಕ್ಯಾನ್ಸರ್ ಗಳ ಅಪಾಯವನ್ನು ಕಡಿಮೆ ಮಾಡುವ ಎಚ್ ಪಿವಿ ಲಸಿಕೆ ಮತ್ತು ಯಕೃತ್ತಿನ ಕ್ಯಾನ್ಸರ್ ನಿಂದ ರಕ್ಷಿಸುವ ಹೆಪಟೈಟಿಸ್ ಬಿ ಲಸಿಕೆಗಳು ಕೆಲವು ರೀತಿಯ ಕ್ಯಾನ್ಸರ್ ತಡೆಗಟ್ಟಲು ಸಹಾಯಮಾಡುತ್ತವೆ.
ವೈದ್ಯರ ಸಲಹೆಯಂತೆ ಲಸಿಕೆ ಹಾಕಿಸಿಕೊಳ್ಳಿ. ಮುಖ್ಯವಾಗಿ ಮೆಡಿಟೇಶನ್ ಮಾಡಿ, ಒತ್ತಡಮುಕ್ತರಾಗಿ, ಕ್ಯಾನ್ಸರ್ ಇದು ಅಂಟುರೋಗವಲ್ಲ ಹಾಗಾಗಿ ಕ್ಯಾನ್ಸರ್ ರೋಗಿಗಳನ್ನು ಬಹಳ ಪ್ರೀತಿಯಿಂದ ಆರೈಕೆ ಮಾಡಿರಿ, ಸಹಾಯ ಮಾಡಿರಿ ಎಂದು ತಿಳಿಸಿದರು.
ಇದೇ ವೇಳೆ ಗದುಗಿನ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕರು ಬ್ರಹ್ಮಾಕುಮಾರಿ ಜಯಂತಿ ಅಕ್ಕನವರು ಮಾತನಾಡಿ “ 2025 ರ ವಿಶ್ವ ಕ್ಯಾನ್ಸರ್ ದಿನದ ಧೈಯವಾಕ್ಯ "ಯುನೈಟೆಡ್ ಬೈ ಯುನಿಕ್” ಎಂಬುದಾಗಿದೆ. ಇದು ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ರೋಗಿ-ಕೇಂದ್ರಿತ ಆರೈಕೆಯ ಮಹತ್ತ್ವವನ್ನು ಒತ್ತಿಹೇಳುತ್ತದೆ. ವೈದ್ಯರು ರೋಗವನ್ನು ಆರೈಕೆ ಮಾಡುವ ಜೊತೆ ಜೊತೆಗೆ ರೋಗಿಯನ್ನು ಆರೈಕೆ ಮಾಡಬೇಕು. ಪಂಚ ತತ್ವದಿಂದ ತಯಾರಾದ ಈ ದೇಹದ ಒಳಗಡೆ ನೋವನ್ನು, ದುಃಖವನ್ನು ಅನುಭವಿಸುವ ಶಕ್ತಿಯೇ ಆತ್ಮ ಎಂದರು.
ಯಾವುದೋ ಜನ್ಮದಲ್ಲಿ ದೇಹದ ಮೂಲಕ ಆತ್ಮ ಪಾಪ ಕರ್ಮವನ್ನು ಮಾಡಿದರೆ ಪ್ರತಿಫಲವಾಗಿ ದೇಹಕ್ಕೆ ಬರುವರೋಗವನ್ನು ಈ ಜನ್ಮದಲ್ಲಿ ಅನುಭವಿಸಲೇ ಬೇಕು. ಆದರೆ ಆತ್ಮ ಶಕ್ತಿಶಾಲಿಯಾಗಿದ್ದರೆ ಸಮಸ್ಯೆ ನಮ್ಮ ಪಾಲಿಗೆ ಸಣ್ಣದಾಗಿ ಬಿಡುತ್ತದೆ. ಅದ್ದರಿಂದ ವೈದ್ಯರು ದೇಹದ ರೋಗಕ್ಕೆ ಆರೈಕೆಮಾಡುವ ಜೊತೆ ಜೊತೆಗೆ ಆತ್ಮ ಶಕ್ತಿಶಾಲಿ ಯಾಗಿರಲು, ಧೈರ್ಯವಾಗಿರಲು, ಡಿಜಟಚಿಥ ಆಗಿರಲು ಯುಕ್ತಿಯನ್ನು ನೀಡಬೇಕು, ಅದು ಮೆಡಿಟೇಶನ್ ನಿಂದಲೇ ಸಾಧ್ಯ. ಆಗಲೇ ವೈದ್ಯರು ಡಬಲ್ ಡಾಕ್ಟರ್ ಆಗುತ್ತಾರೆಂದರು.
ಈ ವೇಳೆ ಡಾಕ್ಟರ್ ಕುಂದಾಪುರ ದಂಪತಿಗಳಿಗೆ ಗೌರವಿಸಿ ಸನ್ಮಾನಿಸಿ,ಆಶೀರ್ವದಿಸಿದರು. ಈ ಜಾಗೃತಿ ಕಾರ್ಯಕ್ರಮದಲ್ಲಿ ಪೂರ್ಣಿಮಾ ಗಣೇಶ್ ರಾವ್, ರೇಡಿಯೋಲೋಜಿ, ಇವರು ಉಪಸ್ಥಿತರಿದ್ದರು. ಕೊನೆಗೆ ಆಸಕ್ತರು ತಮ್ಮ ಪ್ರಶ್ನೆಗಳಿಗೆ ಉತ್ತರ ಪಡೆದರು. ಬಿ.ಕೆ ರೇಖಾ ಸ್ವಾಗತಿಸಿದರು, ಬಿಕೆ ಸಾವಿತ್ರಿ ವಂದಿಸಿದರು.