ಕಾಗರ್ಿಲ್ ಯುದ್ದವು ನಾವಾರು ಊಹಿಸಿಕೊಂಡಿರದ ಯುದ್ದವಾಗಿತ್ತು ಭಾರತ ಯಾವಾಗಲು ಯುದ್ದ ಬಯಸಿದ ರಾಷ್ಟ್ರವಲ್ಲ ಇಡಿ ವಿಶ್ವಕ್ಕೆ ಶಾಂತಿ ಸಾರಿದ ನಮ್ಮ ಭಾರತ ಆದರೆ ಪರಿಸ್ಥಿತಿ ಕೈ ಮೀರಿ ವಿರೋದಿಗಳು ಆಕ್ರಮಣ ಮಾಡಿದಾಗ ಅನಿವಾರ್ಯವಾಗಿ ದೇಶದ ರಕ್ಷಣಿಗಾಗಿ ಸಿದ್ದರಾಗಿ ಯುದ್ದ ಮಾಡಬೇಕಾಯಿತು. ಎಂದು ಮುಖ್ಯ ಭಾಷಣಕಾರರಾಗಿ ಆಗಮಿಸಿದ ಯುವಾ ಬ್ರಿಗೇಡನ ರಾಜ್ಯ ಸಧ್ಭಾವನಾ ಸಂಚಾಲಕ ಸಂತೋಷ ಸಾಮ್ರಾಟ ಹೇಳಿದರು.ಅವರು ಪಟ್ಟಣದ ಸರಕಾರಿ ಪ್ರಥಮ ಧಜರ್ೆ ಕಾಲೇಜಿನಲ್ಲಿ ಯುವಾ ಬ್ರಿಗೇಡ ಆಯೋಜಿಸಿದ್ದ ಕಾಗರ್ಿಲ್ ವಿಜಯದಿವಸವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕಾಗರ್ಿಲ ಯುದ್ದದಲ್ಲಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಟ್ಟು ಬಗ್ಗು ಬಡಿದ ನಮ್ಮ ಭಾರತೀಯ ಸೈನಿಕರು ಯುದ್ದದಲ್ಲಿ ಹೋರಾಡಿದ ಯೋಧರ ಬಗ್ಗೆ ವಿವರಿಸಿದರು. ಯುದ್ದದಲ್ಲಿ ರಾಷ್ಟ್ರಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ನಮನಗಳನ್ನು ಸಲ್ಲಿಸಿ ಕಾಗರ್ಿಲ ವಿಜಯೋತ್ಸವ ಆಚರಣೆಯಲ್ಲಿ ಒಂದಿನವಾದರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋದರಿಗಾಗಿ ಸ್ಮರಣೆ ಮಾಡುವುದರ ಜೋತೆಗೆ ಅವರಂತೆ ದೇಶ ಸೇವೆಗೆ ಮುಂದಾಗೂಣ ಎಂದು ಯುವಕರಲ್ಲಿ ಕರೆ ನೀಡಿದರು.
ಇನ್ನೋಬ್ಬ ಮುಖ್ಯ ಅತಿಥಿಯಾಗಿ ಆಗಮಿಸಿದ ನಮ್ಮ ಕನಸಿನ ಮುಂಡಗೋಡ ವೇಧಿಕೆಯ ಸದಸ್ಯರಾದ ಮಹೇಶ ಹೆಗಡೆ ಮಾತನಾಡಿ ರಾಷ್ಟ್ರಕ್ಕಾಗಿ ಬದುಕುವ ಸಂಕಲ್ಪವನ್ನು ಮಾಡುವ ಮೂಲಕ ನಮ್ಮ ಮುಂಡಗೋಡ ಪಟ್ಟಣವನ್ನು ಸ್ವಚ್ಚ ಹಾಗೂ ಸುಂದರಗೊಳಿಸೋಣ ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನಾಗಿಸೋಣ ಎಂದು ಕರೆ ನೀಡಿದರು.
ಈ ಕಾರ್ಯ ಕ್ರಮದಲ್ಲಿ ದ್ರಾಸ್ ಸೆಕ್ಟರನಲ್ಲಿ ಪ್ರಸ್ತುತ ಸೇವೆಲ್ಲಿರುವ ಸೈನಿಕ ಯಶವಂತ್ ಅವರಿಗೆ ಸನ್ಮಾನ ಮಾಡಲಾಯಿತು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಮಂಜುಳಾ ಪೂಜಾರ್ ವಹಿಸಿದ್ದರು.
ಈ ಸಂದರ್ಭದಲ್ಲಿ ಯುವಾ ಬ್ರಿಗೇಡನ ತಾಲೂಕಾ ಸಂಚಾಲಕ ಶ್ರೀದರ ಉಪ್ಪಾರ.ಶಶಿ ಓಂಕಾರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.