ನೆರೆ ಪೀಡಿತ ಗ್ರಾಮಗಳ ಕರಮನ್ನಾ: ಸರ್ಕಾರಕ್ಕೆ ಪ್ರಸ್ತಾವನೆಗೆ ನಿರ್ಣಯ

ಗದಗ :  ಗದಗ ಜಿಲ್ಲೆಯ ನೆರೆ ಪೀಡಿತ ಗ್ರಾಮಸ್ಥರು ಸಂಕಷ್ಟದಲ್ಲಿದ್ದು 2019ರ ಅಗಸ್ಟದಿಂದ ಮಾರ್ಚ ಅವಧಿ ಅವರು ನೀಡಬೇಕಾದ ಗ್ರಾಮ ಪಂಚಾಯತ್ ಕರಗಳನ್ನು ಮನ್ನಾ ಮಾಡಲು ತೀಮರ್ಾನಿಸಿದ್ದು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ಗದಗ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕುಮಾರ ಸಿದ್ಧಲಿಂಗೇಶ್ವರ ಎಚ್. ಪಾಟೀಲ ಸೂಚನೆ ನೀಡಿದರು. 

           ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜರುಗಿದ ಕನರ್ಾಟಕ ಅಭಿವೃದ್ಧಿ ಯೋಜನೆಗಳ (ಕೆ ಡಿ ಪಿ) ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ನೆರೆ ಪೀಡಿತ ಪ್ರದೇಶಗಳ ಪ್ರವಾಸ ಸಂದರ್ಭದಲ್ಲಿ ತಮಗೆ ಸಂತ್ರಸ್ತರಿಂದ ಕುರಿತು ಮನವಿಯಾಗಿರುವುದನ್ನು   ಅಧ್ಯಕ್ಷರು ಸಭೆಯಲ್ಲಿ ವಿವರಿಸಿದರು.

ರಾಜ್ಯ ಸಕರ್ಾರ  ಶುದ್ಧ ನೀರಿನ ಘಟಕದ ನೀರಿನ ದರವನ್ನು ಲೀ 2 ರಿಂದ 5 ರೂಗೆ ಹೆಚ್ಚಿಸಿದ್ದು  ಜನರಿಗೆ ಮೊದಲಿನ ಲೀಗೆ  2 ರೂ. ದರವನ್ನೇ ಮುಂದುವರೆಸಲು ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.  

ಜಿಲ್ಲಾ ಪಂಚಾಯತ್ದ ಸಭೆಗಳನ್ನು ಆಯೋಜಿಸಿದಾಗ 3 ದಿನ ಮುಂಚಿತವಾಗಿ ಮಾಹಿತಿಯನ್ನು ಸ್ಥಾಯಿ ಸಮಿತಿ ಅಧ್ಯಕ್ಷರಗಳಿಗೆ, ಜಿ.ಪಂ. ಸದಸ್ಯರಿಗೆ ತಲುಪಿಸಬೇಕು.  ನವೆಂಬರ್ 14 ರ ಒಳಗಾಗಿ ಜಿ.ಪಂ. ಅಧೀನದಲ್ಲಿರುವ ಎಲ್ಲ ಶುದ್ಧ ನೀರಿನ ಘಟಕಗಳ ಕಾರ್ಯನಿರ್ವಹಿಸುವಂತೆ ಕ್ರಮ ಜರುಗಿಸಬೇಕು.  ವಿವಿಧ ಇಲಾಖೆಗಳ ಕಾಮಗಾರಿಗಳ ಅಂಕಿ ಸಂಖ್ಯೆಗಳ ಜೊತೆಗೆ ಅವುಗಳ ವಿವರಗಳನ್ನು ಕೂಡ ಪೂರಕವಾಗಿ ಒದಗಿಸಬೇಕು.  ಆರೋಗ್ಯ ಇಲಾಖೆಯಿಂದ ಸೂಕ್ತ ಮಾಹಿತಿ ನೀಡದಿರುವ ಕುರಿತು ಅವರಿಗೆ ನೋಟೀಸ ಜಾರಿ ಮಾಡಿ ವಿವರಣೆ ಕೇಳಬೇಕು.  ಕೃಷಿ ಇಲಾಖೆಯು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಶೀಘ್ರ ನೆರೆ ಗ್ರಾಮದ ರೈತರಿಗೆ ತಾಡಪಾಲಗಳನ್ನು ವಿತರಿಸಲು ಕ್ರಮ ಜರುಗಿಸಬೇಕು.  ಬೆಳೆ ವಿಮೆ ಜಮೆಯಾಗಿದ್ದರ     ಮಾಹಿತಿಯನ್ನು  ರೈತರಿಗೆ ಸಂದೇಶ ಕಳುಹಿಸುವ ಕುರಿತು ಕೃಷಿ ಇಲಾಖೆ ಸಂಬಂಧಿತ ವಿಮಾ ಏಜನ್ಸಿಗಳಿಗೆ ಕ್ರಮ ಜರುಗಿಸಬೇಕು.  ನವೆಂಬರ್ ತಿಂಗಳಿನಲ್ಲಿ ಹಿಂಗಾರು ಬೆಳೆ  ವಿಮೆ ಕುರಿತು ಪ್ರತಿ ಗ್ರಾ. ಪಂ. ಮಟ್ಟದಲ್ಲಿ ಮಾಹಿತಿ ರೈತರಿಗೆ ನೀಡುವುದಕ್ಕೆ ಕ್ರಮ ವಹಿಸಬೇಕು.  ಉದ್ಯೋಗ ಖಾತ್ರಿ ಯೋಜನೆ ಬಳಸಿ ತೋಟಗಾರಿಕೆ ಇಲಾಖೆ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಕನಿಷ್ಟ  50  ಎಕರೆ  ತೋಟ ಅಭಿವೃದ್ಧಿ ಪಡಿಸಬೇಕು.  ತೋಟಗಾರಿಕೆ ನರ್ಸರಿಗಳಲ್ಲಿ ರೈತರ ಬೇಡಿಕೆ ಸಸಿಗಳನ್ನು ಬೆಳೆಸಿ ಪೂರೈಸಬೇಕು.  ಆಯುಷ್ ಇಲಾಖೆಗೆ ಆರೋಗ್ಯ ಇಲಾಖೆಯಿಂದ ಬಿಡುಗಡೆ ಆಗಬೇಕಾದ ಅನುದಾನ ಕುರಿತು ಜಿ.ಪಂ. ಸದಸ್ಯರ ಸಭೆಯನ್ನು ಜರುಗಿಸಿ ನಿರ್ಣಯಿಸಲಾಗುವುದು.  ಜಿಲ್ಲೆಯಲ್ಲಿ ನೆರೆ ಹಾಗೂ ಮಳೆಯಿಂದ ಹಾನಿಗೊಳಗಾದ ಶಾಲಾ ಕೊಠಡಿಗಳ ಕುರಿತಂತೆ ತಾತ್ಕಾಲಿಕ ಶೆಡ್ಗಳ ಕಾಮಗಾರಿಗಳನ್ನು ಒಂದು ವಾರದೊಳಗೆ ಪೂರೈಸಬೇಕು.  ಆರೋಗ್ಯ ಇಲಾಖೆಯಿಂದ ಜಿಲ್ಲೆಯಲ್ಲಿ ನಡೆದ ಕಟ್ಟಡ ಕಾಮಗಾರಿಗಳ ವರದಿಯನ್ನು ಸಲ್ಲಿಸಬೇಕು ಎಂದು ಜಿ.ಪಂ. ಅಧ್ಯಕ್ಷ  ಕುಮಾರ ಸಿದ್ಧಲಿಂಗೇಶ್ವರ ಎಚ್ ಪಾಟೀಲ ನಿದರ್ೇಶನಗಳನ್ನು ನೀಡಿದರು.  

ಜಿ.ಪಂ. ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ ತೋಟಗಾರಿಕೆ ಇಲಾಖೆಯು ನರ್ಸರಿಗಳಲ್ಲಿ ತೆಂಗಿನ ಸಸಿ ಬೆಳೆಸಿ ರೈತರಿಗೆ ನೀಡಿರುವ ವಿವರಗಳ ಮಾಹಿತಿ ನೀಡಲು ತಿಳಿಸಿದರು. ಜಿ.ಪಂ. ಉಪಕಾರ್ಯದಶರ್ಿ ಡಿ. ಪ್ರಾಣೇಶರಾವ್ ಅವರು ಕರ್ನಾ ಟಕ ಅಭಿವೃದ್ಧಿ  ಯೋಜನಾ ಪ್ರಗತಿ ಪರಿಶೀಲನೆ ಸಭೆಗೆ ಇಲಾಖೆಯ ಜಿಲ್ಲಾ ಮುಖ್ಯಸ್ಥರು ಅನಿವಾರ್ಯ ಕಾರಣಗಳಿಂದ ಬರಲಾಗದಿದ್ದರೆ ಪೂರ್ವಾನುಮತಿ ಪಡೆಯಬೇಕು.  ಜೊತೆಗೆ ಒಬ್ಬ ಜವಾಬ್ದಾರಿಯುತ ಅಧಿಕಾರಿಯನ್ನು ಪೂರ್ಣ ಮಾಹಿತಿಯೊಂದಿಗೆ ನಿಯೋಜಿಸಬೇಕು.  ಈ ಕುರಿತು ಉದಾಸೀನ ಸಲ್ಲದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

          ಆಹಾರ ಇಲಾಖೆ ಪ್ರಭಾರ  ಹೊಂದಿರುವ ನಗರಾಭಿವೃದ್ಧಿ ಕೋಶದ ಯೋಜನಾ ನಿದೇಶಕ ರುದ್ರೇಶ ಜಿಲ್ಲೆಯ ನೆರೆ ಸಂದರ್ಭದಲ್ಲಿ  10 ಸಾವಿರ ಸಂತ್ರಸ್ತ ಕುಟುಂಬಗಳಿಗೆ ರಾಜ್ಯ ಸರ್ಕಾ ರದ ನಿರ್ದೇಶನದಂತೆ ಆಹಾರ ಕಿಟ್ಗಳನ್ನು ಒದಗಿಸಲಾಗಿತ್ತು.  10 ಕೆ.ಜಿ. ಅಕ್ಕಿ, , 1 ಕೆಜಿ ತೊಗರಿ ಬೇಳೆ, 1 ಕೆಜಿ ಸಕ್ಕರೆ, 1 ಲೀ ಅಡುಗೆ ಎಣ್ಣೆ ಹಾಗೂ 5 ಲೀ ಸೀಮೆ ಎಣ್ಣೆ ಇದ್ದ ಆಹಾರ ಕಿಟ್ಗಳನ್ನು ನರಗುಂದ ತಾಲೂಕಿನ 2778 , ರೋಣದ 6967,  ಮುಂಡರಗಿ  36,  ಶಿರಹಟ್ಟಿ 219  ಕುಟುಂಬಗಳಿಗೆ  ವಿತರಿಸಲಾಗಿತ್ತು ಎಂದು ತಿಳಿಸಿದರು.

        ನೆರೆ ಪೀಡಿತ ಪ್ರದೇಶಗಳಲ್ಲಿ ಟಿಸಿ ದುರಸ್ತಿಗಾಗಿ  ಹೆಸ್ಕಾಂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.    ರಸ್ತೆ ಕಾಮಗಾರಿ  ಸೇರಿದಂತೆ  ವಿವಿಧ  ಕಾಮಗಾರಿಯ ಚಾಲನಾ ಕಾರ್ಯಕ್ರಮಗಳಿಗೆ  ಸಂಬಂಧಪಟ್ಟ  ತಾ.ಪಂ.  ಗ್ರಾ.ಪಂ. ಸದಸ್ಯರುಗಳನ್ನು  ಅಧಿಕಾರಿಗಳು  ಆಮಂತ್ರಿಸಬೇಕು ಎಂದು  ಸಿದ್ಧಲಿಂಗೇಶ್ವರ ಪಾಟೀಲ ನುಡಿದರು. ಜಾನುವಾರುಗಳಿಗೆ ಕಾಲುಬಾಯಿ ರೋಗದ ಲಸಿಕೆ ನೀಡಿಕೆ,    ರಸ್ತೆ ದುರಸ್ತಿ ನಿರ್ವಹಣೆ,   ಹೆಚ್ಚುವರಿ ಹಾಸ್ಟೆಲ್ಗಳಿಗೆ ಪ್ರಸ್ತಾವನೆ,  ನೆರೆ ಪೀಡಿತ ಪ್ರದೇಶಗಳಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ ಗಿಡ ನೆಡುವ ಕಾರ್ಯಕ್ರಮ  ಸೇರಿದಂತೆ  ವಿವಿದ ಇಲಾಖೆಗಳ ಪ್ರಗತಿ ಕುರಿತಂತೆ ಪರಿಶೀಲನೆ ನಡೆಸಲಾಯಿತು. 

         ಜಿ.ಪಂ. ಸಾಮಾಜಿಕ  ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಪೂಜಾರ, ಶಿಕ್ಷಣ ಸ್ಥಾಯಿ ಸಮಿತಿ ಅದ್ಯಕ್ಷ ಶಿವಕುಮಾರ ನೀಲಗುಂದ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಈರಪ್ಪ ನಾಡಗೌಡ್ರ,  ಅವರುಗಳು ಚಚರ್ೆಯಲ್ಲಿ  ಭಾಗವಹಿಸಿದ್ದರು.  ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.