ಜ್ಞಾನ ಪ್ರಜ್ಞಾ ಅಂದ ಮಕ್ಕಳ ಶಾಲೆಯಲ್ಲಿ ಕನ್ನಡಿಗರ ಕಣ್ಮಣಿ ಡಾ! ಪುನಿತ್ ರಾಜಕುಮಾರ 50ನೇ ಜನ್ಮದಿನ ಆಚರಣೆ
ಮುಂಡಗೋಡ 18: ಪಟ್ಟಣದಲ್ಲಿ ಕರ್ನಾಟಕ ರತ್ನ ಕನ್ನಡಿಗರ ಕಣ್ಮಣಿ ಡಾ/ ಪುನೀತ್ ರಾಜಕುಮಾರ ಅವರ 50ನೇ ಜನ್ಮದಿನದ ಅಂಗವಾಗಿ ಪಟ್ಟಣದಲ್ಲಿ ಅಪ್ಪುಬಾಯ್ಸ್ ವತಿಯಿಂದ ವಿಶೇಷ ಜ್ಞಾನ ಪ್ರಜ್ಞಾ ಅಂದ ಮಕ್ಕಳ ಶಾಲೆಯಲ್ಲಿ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಇಲ್ಲಿಯ ವಿಶೇಷ ಜ್ಞಾನ ಪ್ರಜ್ಞಾ ಅಂದ ಮಕ್ಕಳ ಶಾಲೆ ದೇಶಪಾಂಡೆ ನಗರ ಮುಂಡಗೋಡ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡಿಗರ ಕಣ್ಮಣಿ ಡಾ ಪುನೀತ್ ರಾಜಕುಮಾರ ಅವರ ಭಾವಚಿತ್ರಕ್ಕೆ ಮಾಲಾರೆ್ಣ ಸಲ್ಲಿಸಿ ಮಕ್ಕಳ ಕಡೆಯಿಂದ ಕೇಕ್ ಕತ್ತರಿಸಿ ನಂತರ ಸಿಹಿಯನ್ನು ಹಂಚಿ ಹಾಗೂ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ಈ ವೇಳೆಗೆ ಮನೋಜ್ ರಾಮು ಪುಟಾಣಿಕರ, ವಿನಾಯಕ ದಶರಥ ಪವಾರ, ರವಿ.ಆರ್.ಹೊಸಮನಿ, ದೀಪಕ್ ಕುಮಟೇಕರ,ಸಂಜಯ ಕುಡಲಮಠ, ಅರುಣ್ ಚಲವಾದಿ, ಗುರು ದೇಸಳ್ಳಿ ಹಾಗೂ ಜ್ಞಾನ ಪ್ರಜ್ಞಾ ಅಂದ ಮಕ್ಕಳ ಶಾಲೆ ಸಿಬ್ಬಂದಿಗಳು ಇದ್ದರು.