ಕನ್ನಡ ಭಾಷೆ ಆತ್ಮಕ್ಕೆ ತಟ್ಟುವ ಭಾಷೆ: ಗಾಳಿ

ಲೋಕದರ್ಶನವರದಿ

ಶಿಗ್ಗಾವಿ ೦೨: ನಮ್ಮ ಆತ್ಮಕ್ಕೆ ತಟ್ಟುವ ಭಾಷೆ ಕನ್ನಡ ಜೊತೆಗೆ ರಕ್ತಗತವಾಗಿ ಬಂದ ಭಾಷೆ ಕನ್ನಡ ಆ ಭಾಷೆಗೆ ಗೌರವ ಕೊಡುವ ಸಂದರ್ಭ ಇದಾಗಿದೆ ಎಂದು ತಾಲೂಕಾ ದಂಡಾಧಿಕಾರಿ ಚಂದ್ರಶೇಖರ ಗಾಳಿ ಹೇಳಿದರು.

ಶಿಗ್ಗಾವಿ ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಕನರ್ಾಟಕ ರಾಜ್ಯೋತ್ಸವ ಸಮಿತಿಯ ವತಿಯಿಂದ ಹಮ್ಮಿಕೊಂಡ 64 ನೇ ಕನರ್ಾಟಕ ರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು, ಕನ್ನಡವೆಂಬುದು ಸಾಂಸ್ಕೃತಿಕ ಮತ್ತು ಪ್ರಾಚೀನ ಇತಿಹಾಸವನ್ನು ಹೊಂದಿದ ಭಾಷೆಯಾಗಿದೆ ಜೊತೆಗೆ ಭಾರತದ ಶಾಸ್ತ್ರೀಯ ಭಾಷೆಯಲ್ಲಿ ಒಂದಾಗಿದೆ ಎಂದರು.

ಶಿಗ್ಗಾವಿಯ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕಿ ಡಾ ಸುಜಾತಾ ದೇವರಮನಿ ಮಾತನಾಡಿ ಕನ್ನಡಿಗರಾಗಿ ಕನ್ನಡ ಉಳಿಸುವ ಜವಾಬ್ದಾರಿಯನ್ನು ಮರೆಯುತ್ತಿದ್ದೆವೆ, ಅಂದು ಮುತ್ತು ರತ್ನಗಳನ್ನು ಅಳೆಯುತ್ತಿದ್ದ ನಾಡು ಇಂದು ನುಸಿ ಹತ್ತಿದ ಜೋಳವನ್ನ  ಅಳೆಯುತ್ತಿದ್ದೇವೆ ಇದು ನಮ್ಮ ಕನ್ನಡಿಗರಿಗೆ ಅಂಟಿದ ಕಳಂಕ ಇದಕ್ಕೆ ಕಾರಣ ನಮ್ಮ ದುರಾಸೆಯೇ ಮೂಲ ಕಾರಣವಾಗಿದೆ, ನಾವು ದೇಶದ ಏಳಿಗೆಗಾಗಿ ಹಾಗೂ ಆಡಳಿತ ಏಳಿಗೆಗಾಗಿ ಗಡಿ ರೇಖೆಗನ್ನು ಹಾಕಿಕೊಂಡೆವು ಆದರೆ ಆ ಗಡಿ ರೇಖೆಗಳು ಮನಸ್ಸುಗಳನ್ನು ಒಡೆಯತ್ತಿವೆ ಎಂದು ಮಾಮರ್ಿಕವಾಗಿ ನುಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾನಂದ ಮ್ಯಾಗೇರಿ, ಉತ್ತರ ಕನರ್ಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಹನುಮಂತ ಬಂಡಿವಡ್ಡರ, ಎಪಿಎಂಸಿ ಅಧ್ಯಕ್ಷೆ ಪ್ರೇಮಾ ಪಾಟೀಲ್, ನ್ಯಾಯವಾದಿ ಬಸವರಾಜ ಜಕ್ಕನಕಟ್ಟಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳನ್ನು ಸನ್ಮಾನಿಸಲಾಯಿತು.

ಇದಕ್ಕೂ ಪೂರ್ವದಲ್ಲಿ ಪಟ್ಟಣದ ಸಂತೆ ಮೈದಾನದಿಂದ ಆರಂಭವಾದ ಭುವನೇಶ್ವರಿಯ ಭಾವಚಿತ್ರ ಭವ್ಯ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಾಲೂಕಾ ಕ್ರೀಡಾಂಗಣದಲ್ಲಿ ಸೇರಿತು. 

ಜಿಪಂ ಸದಸ್ಯ ಬಸವರಾಜ ದೇಸಾಯಿ, ತಾಪಂ ಅಧ್ಯಕ್ಷೆ ಪಾರವ್ವ ಆರೇರ್, ಸ್ವಾಭಿಮಾನಿ ಕರವೇ ಜಿಲ್ಲಾಧ್ಯಕ್ಷ ನಿಂಗಪ್ಪ ಬೆಂಚಳ್ಳಿ, ಕರವೇ ತಾಲೂಕಾ ಅಧ್ಯಕ್ಷ ಸಂತೋಗೌಡ ಪಾಟೀಲ್, ಸ್ವಾಭಿಮಾನಿ ಬಣದ ಬಸಲಿಂಗಪ್ಪ ಮಲ್ಲೂರ, ಶಂಬು ಕೆರಿ, ಚಂದ್ರು ಮಂಚೇನಕೊಪ್ಪ, ಮಂಜುನಾಥ ಕಟ್ಟಿಮನಿ, ಈರಣ್ಣ ಸಮಗೊಂಡ, ಬಸವರಾಜ ಹಂಚಿನಮನಿ, ಫಕ್ಕಿರಪ್ಪ ಕುಂದುರ ಸೇರಿದಂತೆ ತಾಪಂ, ಪುರಸಭೆ ಸದಸ್ಯರುಗಳು, ವಿವಿದ ಇಲಾಖೆಯ ಅಧಿಕಾರಿಗಳು, ತಾಲೂಕಿನ ವಿವಿದ ಕನ್ನಡ ಪರ ಸಂಘಟೆಗಳ ಮುಖಂಡರು, ಚುನಾಯಿತ ಪ್ರತಿನಿಧಿಗಳು, ಶಿಕ್ಷಕ ವರ್ಗದವರು, ವಿವಿದ ಸಮಾಜಗಳ ಮುಖಂಡರು, ಕಾರ್ಯಕರ್ತರು ಸೇರಿದಂತೆ ವಿವಿಧ ಶಾಲೆಗಳ ವಿದ್ಯಾಥರ್ಿಗಳು ಇದ್ದರು.