ಮಕ್ಕಳಲ್ಲಿ ಒಳ್ಳೆಯ ಜ್ಞಾನ, ಸಂಸ್ಕೃತಿ ನೀಡಲು ಕನ್ನಡ ಭಾಷೆಗೆ ಮಾತ್ರ ಸಾಧ್ಯ

ಯರಗಟ್ಟಿ :      ಈ ನಾಡಿನಲ್ಲಿ ಹಲವಾರು ಭಾಷೆ ಪ್ರಚಲಿತವಿದ್ದು ಮಕ್ಕಳಲ್ಲಿ ಒಳ್ಳೆಯ ಜ್ಞಾನ, ಸಂಸ್ಕೃತಿ ನೀಡಲು ಕನ್ನಡ ಭಾಷೆಗೆ ಮಾತ್ರ ಸಾಧ್ಯವಿದೆ ಎಂದು ಪ್ರೊ. ಡಾ. ಯಶವಂತ ಕೊಕ್ಕನವರ ಹೇಳಿದರು.

ಇಲ್ಲಿನ ಬಸವೇಶ್ವರ ಆಂಗ್ಲ ಮಾದ್ಯಮ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳ ಹಬ್ಬ ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮಕ್ಕಳ ಮುಂದೆ ಪಾಲಕರು ಹಠ, ದುಶ್ಚಟ, ಹೋಲಿಕೆ ಬಿಟ್ಟು ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ, ಪ್ರತಿಭೆಗೆ ಪ್ರೊತ್ಸಾಹ, ಆರೋಗ್ಯದ ಕಡೆಗೆ ಗಮನಕೊಟ್ಟು ಜ್ಞಾನವಂತ, ಶಕ್ತಿವಂತ, ಹೃದಯವಂತ, ಪ್ರತಿಭಾವಂತರನ್ನಾಗಿ ಮಾಡಲು ಪಣ ತೊಡಬೇಕು ಎಂದರು.

ರಾಜರಾಜೇಶ್ವರ ಆಶ್ರಮದ ಗಣಪತಿ ಮಹಾರಾಜರು ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡುತ್ತಾ ಮಕ್ಕಳಲ್ಲಿ ಗುರುಹಿರಿಯರಿಗೆ ಗೌರವ ಕೊಡುವ ಹಾಗೂ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ಓದುವ ಹವ್ಯಾಸಗಳನ್ನು ಬೆಳಿಸಬೇಕು ಎಂದರು.

ಈ ಸಂಧರ್ಭದಲ್ಲಿ ಗಣ್ಯಮಾನ್ಯರನ್ನು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಮರಡಿ ಬಸವೇಶ್ವರ ವಿದ್ಯಾ ಪ್ರಸಾರ ಮಂಡಳಿಯ ಅಧ್ಯಕ್ಷ ಜಿ.ವಿ.ದೇವರಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಜಿ.ಪಂ.ಸದಸ್ಯ ಅಜೀತಕುಮಾರ ದೇಸಾಯಿ ಕಾರ್ಯಕ್ರಮ ಉದ್ಘಾಟಿಸಿದರು, ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ ಗಜಾನನ ಮೊಹಿತೆ, ತಾ.ಪಂ.ಸದಸ್ಯೆ ಮಂಜುಳಾ ಕರಿಗೊಣ್ಣವರ, ಸಂಸ್ಥೆಯ ಕಾರ್ಯದರ್ಶಿ ಪಿ.ಎಚ್. ಪಾಟೀಲ, ಉಪಾಧ್ಯಕ್ಷ ಅರವಿಂದಗೌಡ ಪಾಟೀಲ, ಸಂಸ್ಥೆಯ ನಿರ್ದೇಶಕರಾದ ಎ.ಜಿ.ಪತ್ತಾರ, ಮಂಜುನಾಥ ತಡಸಲೂರ, ಉಮೇಶ ಇಟ್ನಾಳ, ಬಾಬುಸಾಬ ಉಗರಗೋಳ, ಬಸವೇಶ್ವರ ಆಂಗ್ಲಮಾದ್ಯಮ ಶಾಲೆ ಅಧ್ಯಕ್ಷ ರಮೇಶ ದೇವರಡ್ಡಿ, ಪ್ರೌಡ ಶಾಲಾ ಮುಖ್ಯ ಶಿಕ್ಷಕ ಬಿ.ಎಸ್.ಆಲದಕಟ್ಟಿ, ಮುಖ್ಯ ಶಿಕ್ಷಕಿ ದೀಪಾ ಕಾದ್ರೋಳಿ, ಎನ್.ಎಸ್.ಕಾಂಬ್ಳೆ, ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ವರ್ಷಿಣಿ ತಡಸಲೂರ ಸ್ವಾಗತಿಸಿದರು, ವೈಷ್ಣವಿ ಬಾಗಿಲದ, ಶೃದ್ಧಾ ದೇವಾಂಗಮಠ ನಿರೂಪಿಸಿದರು, ತೇಜಶ್ವಿನಿ ಕೋಡಳ್ಳಿ ವಂದಿಸಿದರು.