ಧಾರವಾಡ 17; ನಿಷ್ಪಕ್ಷಪಾತ ನ್ಯಾಯಾದಾನವನ್ನು ಉಸಿರಾಗಿಸಿಕೊಂಡಿರುವ ನ್ಯಾಯಾಂಗ ಇಲಾಖೆಯು ಪ್ರಕರಣಗಳ ವಿಚಾರಣೆ, ಆಡಳಿತದಲ್ಲಿ ಪ್ರಾದೇಶಿಕ ಭಾಷೆಗಳಿಗೆ ಪ್ರಧಾನ್ಯತೆ ನೀಡಿದ್ದು, ಧಾರವಾಡ ಜಿಲ್ಲೆಯ ಜಿಲ್ಲಾ ಹಾಗೂ ಎಲ್ಲ ನ್ಯಾಯಾಲಯಗಳಲ್ಲಿ ನ್ಯಾಯಾಲಯದ ಎಲ್ಲ ಹಂತದಲ್ಲೂ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಿ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂ ಸೇವೆಗಳ ಪ್ರಾಧಿಕಾರಿದ ಅಧ್ಯಕ್ಷರಾದ ಈಶಪ್ಪ .ಕೆ. ಭೂತೆ ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಧಾರವಾಡ ಜಿಲ್ಲಾ ನ್ಯಾಯಾಲಯದ ಸಭಾಭವನದಲ್ಲಿ ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪದ್ಮಶ್ರೀ ಡಾ. ಆರ್.ಬಿ.ಪಾಟೀಲ್ ಕ್ಯಾನ್ಸರ್ ಆಸ್ಪತ್ರೆ, ಪದ್ಮಶ್ರಿ ಡಾ. ಎಮ್.ಎಮ್.ಜೋಶಿ ಕಣ್ಣಿನ ಆಸ್ಪತ್ರೆ ಹಾಗೂ ಸರಕಾರದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ಯ ಆಯೋಜಿಸಿದ್ದ ರಕ್ತದಾನ, ಆರೋಗ್ಯ ತಪಾಸಣೆ ಹಾಗೂ ಕಣ್ಣು ತಪಾಸಣೆ ಶಿಬಿರವನ್ನು ಉದ್ಘಾಟಿಸಿ, ಮಾತನಾಡಿದರು.
ಸವರ್ೋಚ್ಚ ನ್ಯಾಯಾಲಯವು ಪ್ರಾದೇಶಿಕ ಭಾಷೆಗಳಲ್ಲಿ ನ್ಯಾಯಾಲಯಗಳ ತೀಪರ್ು ಪ್ರಕಟಿಸಲು ಅನುಮತಿಸಿದೆ. ಅದರಂತೆ ಸವರ್ೋಚ್ಚ ನ್ಯಾಯಾಲಯ, ಉಚ್ಚನ್ಯಾಯಾಲಯ ಸೇರಿದಂತೆ ವಿವಿಧ ನ್ಯಾಯಾಲಯಗಳ ಪ್ರಮುಖ ತೀಪರ್ುಗಳು ತಜರ್ುಮೆಗೊಂಡು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗುವಂತೆ ಕ್ರಮವಹಿಸಲಾಗಿದೆ. ಕನರ್ಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಗಿದ್ದು, ನ್ಯಾಯಾಂಗದ ಎಲ್ಲ ನ್ಯಾಯಾಲಯಗಳಲ್ಲಿ ಆಡಳಿತ, ಪ್ರಕರಣಗಳ ವಿಚಾರಣೆ, ಸಾಕ್ಷಿ ವಿಚಾರಣೆ, ವಾದ ಮಂಡನೆ ಮತ್ತು ತೀಪರ್ುಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಲಾಗಿದೆ. ಧಾರವಾಡದ ಎಲ್ಲ ನ್ಯಾಯಾಧೀಶರು ಕನ್ನಡ ಭಾಷೆ ಬಳಕೆಗೆ ಪ್ರೋತ್ಸಾಹ ನೀಡಿದ್ದಾರೆ. ನೂತನವಾಗಿ ಆಯ್ಕೆಯಾದ ನ್ಯಾಯಾಧೀಶರು ತರಬೇತಿಗಾಗಿ ಜಿಲ್ಲೆಗೆ ಬಂದಿದ್ದು ಅವರಿಗೂ ಕನ್ನಡದ ಮಹತ್ವ ತಿಳಿಸಲಾಗುತ್ತಿದ್ದು, ಅವರ ಮುಂದಿನ ವೃತ್ತಿಜೀವನದಲ್ಲಿ ಇದಕ್ಕೆ ಪೂರಕವಾಗಿ ಸ್ಪಂದಿಸುತ್ತಾರೆ ಎಂದು ಜಿಲ್ಲಾ ನ್ಯಾಯಾಧೀಶರು ತಮ್ಮ ಆಶಾಭಾವ ವ್ಯಕ್ತಪಡಿಸಿದರು.
ಕನರ್ಾಟಕ ಸರಕಾರ ಕನ್ನಡ ಭಾಷೆ ಬಳಕೆಗೆ ಮತ್ತು ಅನುಷ್ಠಾನಕ್ಕೆ ಆದ್ಯತೆ ನೀಡುವ ಜಿಲ್ಲಾ ನ್ಯಾಯಾಧೀಶರೊಬ್ಬರಿಗೆ ಪ್ರತಿ ವರ್ಷ ಪ್ರಶಸ್ತಿ ನೀಡಿ, ಗೌರವಿಸುತ್ತಿದೆ. ಇದು ಸಹ ಕನ್ನಡ ಭಾಷೆ ಅನುಷ್ಠಾನಕ್ಕೆ ಪ್ರೇರಣೆಯಾಗಿದ್ದು, ಜಿಲ್ಲೆಯ ನ್ಯಾಯಾಧೀಶರಿಗೆ ಮತ್ತು ನ್ಯಾಯಾಂಗ ಇಲಾಖೆ ಸಿಬ್ಬಂದಿಗೆ ನ್ಯಾಯಾಂಗ ಇಲಾಖೆಯಲ್ಲಿ ಕನ್ನಡ ಬಾಷೆಯ ಪರಿಣಾಮಕಾರಿ ಆನುಷ್ಠಾನಕ್ಕಾಗಿ ಇನ್ನೂ ಅಗತ್ಯವಿರುವ ತರಬೇತಿ, ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಜಿಲ್ಲಾ ನ್ಯಾಯಾಧೀಶ ಈಶಪ್ಪ .ಕೆ. ಭೂತೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೆಡಕ್ರಾಸ ಸಂಸ್ಥೆಯ ಧಾರವಾಡ ಜಿಲ್ಲಾ ಅಧ್ಯಕ್ಷ ಹಾಗೂ ನಿವೃತ್ತ ಜಿಲ್ಲಾ ಸರ್ಜನ ಡಾ.ವ್ಹಿ.ಡಿ.ಕಪರ್ೂರಮಠ ಅವರು ಮಾತನಾಡಿ, ರಕ್ಷದಾನ ಶ್ರೇಷ್ಠವಾದದ್ದು, ಜೀವದಾನಕ್ಕೆ ಅದು ಸಮಾನ. ನ್ಯಾಯಾಧೀಶರು ಸ್ವತಃ ರಕ್ತದಾನ ಮಾಡುತ್ತಿರುವುದು ಇತರರಿಗೆ ಮಾದರಿ. ಅಪಘಾತ, ಹೆರಿಗೆ, ಅಶಕ್ತತೆ ಕಾರಣಗಳಿಂದಾಗಿ ದಿನನಿತ್ಯ ಅನೇಕರಿಗೆ ರಕ್ತದ ಅಗತ್ಯವಿರುತ್ತದೆ. ಪ್ರತಿಯೊಬ್ಬರು ವರ್ಷದಲ್ಲಿ ಕನಿಷ್ಟ ಎರಡು ಬಾರಿ ರಕ್ತದಾನ ಮಾಡುವ ಮನೊಭಾವ ಬೆಳೆಸಿಕೊಳ್ಳಬೇಕು. ಇದರಿಂದ ರಕ್ತ ಅಗತ್ಯವಿರುವವರಿಗೆ ಸಹಾಯವಾಗುತ್ತದೆ ಎಂದು ಅವರು ಹೇಳಿದರು.
ವಿವಿಧ ನ್ಯಾಯಾಲಯಗಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಹೊಸಮನಿ ಸಿದ್ದಪ್ಪ.ಎಚ್, ಹೆಚ್.ಸಿ.ಶ್ಯಾಮಪ್ರಸಾದ, ಗಂಗಾಧರ ಸಿ.ಎಮ್, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾತರ್ಾ ಸಹಾಯಕ ಅಧಿಕಾರಿ ಡಾ.ಎಸ್.ಎಮ್.ಹಿರೇಮಠ, ಪದ್ಮಶ್ರೀ ಡಾ.ಆರ್.ಬಿ.ಪಾಟೀಲ ಕ್ಯಾನ್ಸರ್ ಆಸ್ಪತ್ರೆಯ ರಕ್ತ ಶೇಖರಣಾಧಿಕಾರಿಗಳಾದ ಡಾ.ಉಮೇಶ ಹಳ್ಳಿಕೇರಿ, ಡಾ.ಪ್ರಭು ಸಂಗಮ ಉಪಸ್ಥಿತರಿದ್ದರು.
ಜಿಲ್ಲಾ ನ್ಯಾಯಾಧೀಶರುಗಳಾದ ಇಂದಿರಾ ಚಟ್ಟಿಯಾರ, ಸಂಜಯ ಗುಡಗುಡಿ, ಮಮತಾ, ವಿಜಯಲಕ್ಷ್ಮೀ ಘಾನಾಪೂರ, ಪರಿಮಳಾ ತುಬಾಕಿ, ಪಾರ್ವತಿ, ಸೃಷ್ಠಿಶ್ರೀ ಹಾಗೂ ಆಕರ್ಷ ಜೈನ, ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಮಹೇಶ ಗುಡಿ, ಪ್ರಧಾನ ಜಿಲ್ಲಾ ನ್ಯಾಯಾಲಯದ ಸರಕಾರಿ ಅಭಿಯೋಜಕರಾದ ಪವಾರ, ಸರಕಾರಿ ಅಭಿಯೋಜಕ ತಮ್ಮನಹಾಳ, ಸಹಾಯಕ ಸರಕಾರಿ ಅಭಿಯೋಜಕ ಭರತೇಶ ಸೇರಿದಂತೆ ನ್ಯಾಯಾಂಗ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳು ಭಾಗವಹಿಸಿದ್ದರು.
ಶಿಬಿರದಲ್ಲಿ ಜಿಲ್ಲಾ ನ್ಯಾಯಾಧೀಶರಾದ ಸಂಜಯ ಗುಡಗುಡಿ, ಪರಿಮಳಾ ತುಬಾಕಿ, ವಿಜಯಲಕ್ಷ್ಮೀ ಘಾನಾಪೂರ, ಪ್ರಥಮ ದಜರ್ೆ ಸಹಾಯಕ ಮಂಜುನಾಥ ಅಂಚಟಗಿ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಜನ ಅಧಿಕಾರಿ, ಸಿಬ್ಬಂದಿಗಳು ರಕ್ತದಾನ ಮಾಡಿದರು. 150ಕ್ಕೂ ಹೆಚ್ಚು ಸಿಬ್ಬಂದಿಗಳು ರಕ್ತ ತಪಾಸಣೆ, ಆರೋಗ್ಯ ತಪಾಸಣೆ ಹಾಗೂ ಕಣ್ಣು ತಪಾಸಣೆ ಮಾಡಿಸಿಕೊಂಡರು.
ಡಾ. ವ್ಹಿ.ಡಿ.ಕಪರ್ೂರಮಠ ನೇತೃತ್ವದಲ್ಲಿ ಡಾ. ಉಮೇಶ ಹಳ್ಳಿಕೆರಿ, ಡಾ. ಪ್ರಭು ಸಂಗಮ, ಡಾ. ಗವಿಸಿದ್ದನಗೌಡ ಪಾಟೀಲ, ಡಾ. ಸಮೀರ ಕುಲಕಣರ್ಿ, ಡಾ. ಮಹೇಶ, ಡಾ. ಶೋಭಾ ಮೂಲಿಮನಿ, ಡಾ.ಜ್ಯೋತಿ ಉಡುಪಿ ಹಾಗೂ ಡಾ. ಆರ್.ಪಿ.ಜೆನ್ ಸೇರಿದಂತೆ ವಿವಿಧ ವೈದ್ಯರ ತಂಡವು ರಕ್ತ ತಪಾಸಣೆ, ರಕ್ತ ಸಂಗ್ರಹ, ಕಣ್ಣು ತಪಾಸಣೆ ಮತ್ತು ಆರೋಗ್ಯ ತಪಾಸಣೆ ಕಾರ್ಯಕೈಗೊಂಡರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧೀಕಾರದ ಸದಸ್ಯ ಕಾರ್ಯದಶರ್ಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಚಿಣ್ಣನ್ನವರ ಆರ್.ಎಸ್.ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಪಕ ವಾಳದ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.