ವೆಲ್ಲಿಂಗ್ಟನ್, ಫೆ 24,ಭಾರತದ ವಿರುದ್ಧ ಸೋಮವಾರ ಮೊದಲನೇ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ ನ್ಯೂಜಿಲೆಂಡ್ ತಂಡವನ್ನು ನಾಯಕ ಕೇನ್ ವಿಲಿಯಮ್ಸನ್ ಶ್ಲಾಘಿಸಿದ್ದಾರೆ.ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಭಾರತವನ್ನು ಪ್ರಥಮ ಇನಿಂಗ್ಸ್ನಲ್ಲಿ 165 ರನ್ ಗಳಿಗೆ ಆಲೌಟ್ ಮಾಡಿತು. ಅಲ್ಲದೆ, ಆತಿಥೇಯ ಕೆಳ ಕ್ರಮಾಂಕದ ಬ್ಯಾಟ್ಸ್ಮನ್ಗಳ ತಮ್ಮ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದರು. ಇದರ ಫಲವಾರಿ ಕಿವೀಸ್ 183 ರನ್ ಮುನ್ನಡೆ ಗಳಿಸಲು ಸಾಧ್ಯವಾಗಿತ್ತು. ನಂತರ, ದ್ವಿತೀಯ ಇನಿಂಗ್ಸ್ನಲ್ಲಿ ಭಾರತ ಕೇವಲ 191 ರನ್ಗಳಿಗೆ ಸರ್ವಪತನವಾಯಿತು. ಭಾರತ ನೀಡಿದ ಕೇವಲ ಒಂಬತ್ತು ರನ್ಗಳನ್ನು ನ್ಯೂಜಿಲೆಂಡ್ ವಿಕೆಟ್ ನಷ್ಟವಿಲ್ಲದೆ ಮುಟ್ಟಿತು. ಆ ಮೂಲಕ 100ನೇ ಟಸ್ಟ್ ಐತಿಹಾಸಿಕ ಜಯವನ್ನು ಆತಿಥೇಯರು ಸಾಧಿಸಿದರು.ಪಂದ್ಯದ ಬಳಿಕ ಮಾತನಾಡಿದ ಕೇನ್ ವಿಲಿಯಮ್ಸನ್," ಕಳೆದ ನಾಲ್ಕು ದಿನಗಳಲ್ಲಿತಂಡ ತೋರಿದ ಅಸಾಧಾರಣ ಪ್ರದರ್ಶನ ಇದಾಗಿದೆ. ವಿಶ್ವದಲ್ಲೇ ಭಾರತ ಪ್ರಬಲವಾಗಿದೆ ಎಂಬುದು ನಮಗೆ ತಿಳಿದಿದೆ. ಮೊದಲ ಇನಿಂಗ್ಸ್ನಲ್ಲಿನ ಪ್ರಯತ್ನ ಹಾಗೂ ನಾವು ಕಲೆಹಾಕಿದ ಸ್ಪರ್ಧಾತ್ಮಕ ಮೊತ್ತ ಅದ್ಭುತವಾಗಿತ್ತು. ನಾವು ಹೆಚ್ಚಿನ ಮುನ್ನಡೆ ಗಳಿಸಲು ಕೆಳ ಕ್ರಮಾಂಕದ ಆಟಗಾರರು ನೆರವಾದರು,'' ಎಂದು ಹೇಳಿದರು. ಎರಡನೇ ಇನಿಂಗ್ಸ್ನಲ್ಲಿ ಭಾರತ ತಂಡವನ್ನು 191 ರನ್ಗಳಿಗೆ ಆಲೌಟ್ ಮಾಡುವಲ್ಲಿ ಟಿಮ್ ಸೌಥಿ ಹಾಗೂ ಟ್ರೆಂಟ್ ಬೌಲ್ಟ್ ಅವರು ಪ್ರಮುಖ ಪಾತ್ರವಹಿಸಿದ್ದರು.
ಇವರಿಬ್ಬರು ಒಂಬತ್ತು ವಿಕೆಟ್ಗಳನ್ನು ಹಂಚಿಕೊಂಡಿದ್ದರು.ಸೌಥಿ ಎರಡೂ ಇನಿಂಗ್ಸ್ಗಲ್ಲಿ 110 ರನ್ ನೀಡಿ 9 ವಿಕೆಟ್ ಪಡೆದರೆ, ಬೌಲ್ಟ್ 96 ರನ್ ನೀಡಿ ಐದು ವಿಕೆಟ್ ತನ್ನ ಕಿಸೆಗೆ ಹಾಕಿಕೊಂಡರು."ಬೆಳಗ್ಗೆ ಪಿಚ್ ಹೇಗೆ ವರ್ತಿಸುತ್ತದೆ ಎಂಬ ಬಗ್ಗೆ ನಮಗೆ ಗೊತ್ತಿರಲಿಲ್ಲ. ಏಕೆಂದರೆ, ಈ ವಾರವೀಡಿ ಇಲ್ಲಿ ಹೆಚ್ಚಿನ ಗಾಳಿ ಬೀಸುತ್ತಿದ್ದು, ಚೆಂಡು ಹೆಚ್ಚು ಸ್ವಿಂಗ್ ಆಗುತ್ತಿತ್ತು. ಬೌಲರ್ಗಳು ಅದ್ಭುತ ಬೌಲಿಂಗ್ ಮಾಡಿದ್ದಾರೆ,'' ಎಂದು ತಿಳಿಸಿದರು.ಚೊಚ್ಚಲ ಟೆಸ್ಟ್ ಪಂದ್ಯದಲ್ಲಿಯೇ ಕಿವೀಸ್ ಅತಿ ಉದ್ದದ ವೇಗಿ ಕೈಲ್ ಜಾಮಿಸನ್ ಅವರು ನಾಲ್ಕು ವಿಕೆಟ್ ಜತೆಗೆ ಬ್ಯಾಟಿಂಗ್ನಲ್ಲಿಯೂ 44 ರನ್ ಗಳಿಸಿ ಮಿಂಚಿದ್ದರು. ಆ ಮೂಲಕ ನ್ಯೂಜಿಲೆಂಡ್ 348 ರನ್ ಗಳಿಸುವಲ್ಲಿ ನೆರವಾಗಿದ್ದರು."ಕೈಲ್ ಜಾಮಿಸನ್ ಅವರು ಅದ್ಭುತವಾಗಿದ್ದರು.
ಬೇಸಿಗೆಯಿಂದಲೂ ಅವರು ಬಿಳಿ ಚೆಂಡಿನೊಂದಿಗೆ ಅತ್ಯುತ್ತಮ ಕಾರ್ಯನಿರ್ವಹಣೆಯನ್ನು ಹೊಂದಿದ್ದಾರೆ. ಪದಾರ್ಪಣೆ ಪಂದ್ಯದಲ್ಲಿಯೇ ಹಲವು ಹಾದಿಯಲ್ಲಿ ತಂಡಕ್ಕೆ ನೆರವಾಗಿದ್ದು ಅತ್ಯುತ್ತಮವಾಗಿತ್ತು,'' ಎಂದು ಕೊಂಡಾಡಿದರು."ಸೌಥಿಯ ಮನೋಧರ್ಮವು ಸಾಬೀತುಪಡಿಸುವ ಇದು ಒಂದು ಅಂಶವಲ್ಲ. ಅವರು ಚೆಂಡಿನೊಂದಿಗೆ ಮುನ್ನಡೆಸಲು ಮಾತ್ರ ಬಯಸಿದ್ದರು. ಇನ್ನೊಂದು ತುದಿಯಲ್ಲಿ ಬೌಲ್ಟ್ ಇರುವುದು ಅವರಿಗೆ ಸಹ ಒಳ್ಳೆಯದಾಗಿತ್ತು. ಎಡಗೈ ಹಾಗೂ ಬಲಗೈ ಸಂಯೋಜನೆಯು ಅಪಾಯಕಾರಿ," ಎಂದು ಹೇಳಿದರು.ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಟಿಮ್ ಸೌಥಿ ಮಾತನಾಡಿ, "ಗುಣಮಟ್ಟದ ಭಾರತೀಯ ತಂಡದ ವಿರುದ್ಧ ನಮಗೆ ಇದು ಒಂದು ದೊಡ್ಡ ಗೆಲುವು. ತವರು ಪರಿಸ್ಥಿತಿಗಳಿಗೆ ಮರಳುವ ಆಹ್ಲಾದಕರ ಬದಲಾವಣೆ. ಇಂದು ಬೆಳಗ್ಗೆ ಆಟದ ಒಂದು ದೊಡ್ಡ ಕ್ಷಣ ಎಂದು ನಾನು ಭಾವಿಸುತ್ತೇನೆ. ಎರಡನೇ ಹೊಸ ಚೆಂಡಿನ ಮೊದಲು ಆ ಎರಡು ವಿಕೆಟ್ಗಳನ್ನು ತೆಗೆದುಕೊಳ್ಳಲು ಸಾಧ್ಯವಾಯಿತು" ಎಂದು ಹೇಳಿದರು."ಬೌಲಿಂಗ್ ಘಟಕವಾಗಿ, 20 ವಿಕೆಟ್ ತೆಗೆದುಕೊಳ್ಳುವುದು ಮತ್ತು ಈ ರೀತಿಯ ಪ್ರಯತ್ನವು ಬಹಳ ಸಂತೋಷಕರವಾಗಿತ್ತು. ವಿಕೆಟ್ ಸಾಮಾನ್ಯಕ್ಕಿಂತ ಹೆಚ್ಚಿನದನ್ನು ಹೊಂದಿತ್ತು. ಅಲ್ಲಿ ಗಾಳಿಯೊಂದಿಗೆ, ಚೆಂಡು ಸ್ವಲ್ಪ ಹೆಚ್ಚು ವಿಭಿನ್ನವಾಗಿ ವರ್ತಿಸುತ್ತಿತ್ತು," ಎಂದು ಅವರು ಹೇಳಿದರು.ಮುಂದಿನ ಶನಿವಾರ ಕ್ರೈಸ್ಟ್ಚರ್ಚ್ನಲ್ಲಿ ಉಭಯ ತಂಡಗಳು ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.