ಕಂಪ್ಲಿ: ಅಂಬೇಡ್ಕರ್ ಜಯಂತ್ಯೋತ್ಸವ ನಿಮಿತ್ತ ಸಾಮೂಹಿಕ ವಿವಾಹ

ಲೋಕದರ್ಶನ ವರದಿ

ಕಂಪ್ಲಿ 27: ಸ್ಥಳೀಯ 10 ನೇವಾಡರ್ಿನ ರಾಮಲಿಂಗಮ್ಮನ ದೇವಸ್ಥಾನದ ಆವರಣದಲ್ಲಿ,ಕರ್ನಾಟಕದ  ಬೌದ್ಧ ಸಮಾಜ ಹಾಗೂ ಛಲವಾದಿ ಮಹಾಸಭಾ ಸಹಯೋಗದಲ್ಲಿ, ಶನಿವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೇ ಜಯಂತ್ಯುತ್ಸವ ನಿಮಿತ್ತ, ನರಸಿಂಹಪ್ಪ ಇವರ ಪೌರೋಹಿತ್ಯದಲ್ಲಿ 7ಜೋಡಿ ಸಾಮೂಹಿಕ ವಿವಾಹ  ಜರುಗಿತು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮಹಿಳಾ ಮೇಲ್ವಿಚಾರಕಿ ಲತೀಫಾ ಬೇಗಮ್, ಛಲವಾದಿ ಮತ್ತು ಕರ್ನಾಟಕದ ಬೌದ್ಧ ಸಮಾಜದ ಯುವ ಮುಖಂಡರಾದ ಶಶಿ, ಕರಡಿ ರಾಘು, ಟಿ.ಶಿವರಾಜ್, ಷಣ್ಮುಖ, ಭೀಮ, ಮಹೇಶ್, ಚನ್ನ, ಚಂದ್ರು, ರಂಗ, ಸುಗ್ಗೇನಹಳ್ಳಿ ಸಿ.ರಮೇಶ್, ಎಲ್.ಸಂತೋಷ್, ಟಿ.ಶಿವಪ್ಪ, ಪಿ.ಸಿ.ಅಂಜಿನಪ್ಪ, ಚನ್ನಬಸಪ್ಪ, ಮಂಜುನಾಥ, ಮಣ್ಣೂರಿನ ಗಂಗಮ್ಮ ಪ್ರಾಣೇಶ್ ದಂಪತಿಗಳು, ಛಲವಾದಿ ಸಮಾಜದ ಮುಖಂಡರು, ಸರ್ವ ಸಮುದಾಯಗಳ ಮುಖಂಡರು ಪಾಲ್ಗೊಂಡಿದ್ದರು.