ಕಂಪ್ಲಿ: ಅಕ್ಕಮಹಾದೇವಿ ಜಯಂತ್ಯೋತ್ಸವ: ಭಾವಚಿತ್ರ ಮೆರವಣಿಗೆ

ಲೋಕದರ್ಶನ ವರದಿ

ಕಂಪ್ಲಿ 20: ಇಲ್ಲಿನ ಅಕ್ಕಮಹಾದೇವಿ ಮಹಿಳಾ ಮಂಡಳಿವತಿಯಿಂದ ಅಕ್ಕಮಹಾದೇವಿ ಜಯಂತ್ಯೋತ್ಸವ ಅಂಗವಾಗಿ ಅಕ್ಕಮಹಾದೇವಿ ಭಾವಚಿತ್ರ ಮೆರವಣಿಗೆ ಪಟ್ಟಣದಲ್ಲಿ ಜರುಗಿತು. 

  ಸ್ಥಳೀಯ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿರುವ ಅಕ್ಕಮಹಾದೇವಿ ದೇವಸ್ಥಾನದಿಂದ, ಅಕ್ಕಮಹಾದೇವಿ ಭಾವಚಿತ್ರ  ಮೆರವಣಿಗೆಯಲ್ಲಿ ಕಳಸಧಾರತಿ, ತಾಷಾರಾಂಡೋಲ್, ಮಂಗಳವಾಧ್ಯಗಳು ಪಾಲ್ಗೊಂಡಿದ್ದವು. ಪ್ರಮುಖ ಬೀದಿಗಳಲ್ಲಿ ಸಾಗಿ ದೇವಸ್ಥಾನದಲ್ಲಿ ಸಮಾವೇಶಗೊಂಡಿತು.

    ಜಯಂತಿ ಅಂಗವಾಗಿ ಅಕ್ಕಮಹಾದೇವಿ ಪ್ರತಿಮೆಗೆ ರುದ್ರಾಭಿಷೇಕ ಸೇರಿ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದವು. ಅಕ್ಕಮಹಾದೇವಿಗೆ ನಾಮಕರಣ, ಲಿಂ.ಗೊಗ್ಗ ವಿಶಾಲಾಕ್ಷಮ್ಮನವರ ಸ್ಮರಣಾರ್ಥ ಗೊಗ್ಗ ಕುಟುಂಬದವರಿಂದ ಉಡಿತುಂಬುವ ಕಾರ್ಯಕ್ರಮಗಳು ಜರುಗಿದವು.  

    ಅಕ್ಕಮಹಾದೇವಿ ಮಹಿಳಾ ಮಂಡಳಿಯ ಅಧ್ಯಕ್ಷೆ ಮುಕ್ಕುಂದಿ ರುದ್ರಾಣಿ ಬಸವರಾಜ, ವಾಲಿ ಶಕುಂತಲಾ, ವಿಜಯಲಕ್ಷ್ಮಿ ಅರಳಲೆಮಠ, ಸರ್ವಮಂಗಳ ಬಸವರಾಜ, ಎಂ.ಎಸ್.ಅಮೃತಾ ಶಶಿಧರಶಾಸ್ತ್ರಿ, ಮುಕ್ಕುಂದಿ ವಸಂತಾ, ತಾಂಡೂರು ಸುಜಾತಾ, ಭತ್ತದ ಸಂಧ್ಯಾ, ಕಾಮರೆಡ್ಡಿ ಉಮಾ, ಕಲ್ಗುಡಿ ಶಾಂತಾ, ಎ.ಟಿ.ಉಮಾದೇವಿ, ಗೋಶೆಟ್ಟಿ ಪುಷ್ಪಾ, ಜೆ.ಶೋಭಾ, ಬಿ.ಪಾರ್ವತಮ್ಮ, ವಾಲಿ ಶಾರದಾ, ಕೆ.ರಾಜೇಶ್ವರಿ, ಎಂ.ವಿಜಯಲಕ್ಷ್ಮಿ, ಟಿ.ಶಾರದಾ, ಕೋರಿ ಶರಣಮ್ಮ, ಕೆ.ಚನ್ನಮ್ಮ, ಕಲ್ಗುಡಿ ಜ್ಞಾನೇಶ್ವರಿ, ಗಡಾದ ವಿಜಯಲಕ್ಷ್ಮಿ ಸೇರಿ ಸದಸ್ಯೆಯರು, ಎಸ್.ಡಿ.ಬಸವರಾಜ, ಎಂ.ಬಸವರಾಜ, ಎಚ್.ನಾಗರಾಜ, ಕೆ.ಸಣ್ಣ ಗವಿಸಿದ್ದಪ್ಪ ಸೇರಿ ವೀರಶೈವ ಸಮುದಾಯದವರು ಪಾಲ್ಗೊಂಡಿದ್ದರು.