ಕಂಪ್ಲಿ: ಶಾಸಕ ಗಣೇಶ ಅಮಾನತು, ಬಿಡುಗಡೆಗೆ ಕಾರ್ಯಕರ್ತರ ಆಗ್ರಹ :ಉಗ್ರಪ್ಪ ಆಶ್ವಾಸನೆ

ಲೋಕದರ್ಶನ ವರದಿ

ಕಂಪ್ಲಿ 02: ಸ್ಥಳೀಯ ಶಾಸಕ ಜೆ.ಎನ್.ಗಣೇಶ್ ಅಭಿಮಾನಿಗಳು ಮತ್ತು  ಕಾಂಗ್ರೆಸ್ ಕಾರ್ಯಕರ್ತರುಮತ್ತುಮುಖಂಡರು ಸೇರಿ ಶಾಸಕ ಗಣೇಶ ಅವರ ಅಮಾನತ್ತನ್ನು ಪಕ್ಷದ ವರಿಷ್ಠರು ವಾಪಸ್ಸು ಪಡೆಯಬೇಕು.ಜೈಲುನಿಂದ ಒತ್ತಾಯಿಸಿದರು.

ಖಾಸಗಿ ಹೋಟೆಲ್ನಲ್ಲಿ ಸೇರಿದ ಅನೇಕಕಾರ್ಯಕರ್ತರು ಅಕ್ರೋಶ ವ್ಯಕ್ತಪಡಿಸಿ ಮಾತನಾಡಿ, ಶಾಸಕ ಜೆ.ಎನ್.ಗಣೇಶ್ ಮೇಲಿನ ಪಕ್ಷದ ಅಮಾನತ್ ವಾಪಸು ಪಡೆಯಬೇಕು.ಶಾಸಕರಿಲ್ಲದೆ ನಾವೇಲ್ಲರು ಹೇಗೆಕೆಲಸ ಮಾಡಬೇಕು ಅವರಿಲ್ಲದೆ ನಾವು ನಿಮ್ಮ ಪರವಾಗಿ ಹೇಗೆ ಪ್ರಚಾರ ಮಾಡಬೇಕು. ಕಳೆದ ಉಪ ಲೋಕಸಭೆ  ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ನಿಮಗೆ 34,000ಕ್ಕೂ ಅಧಿಕ ಮತ ಲಭಿಸಲು ಶಾಸಕ ಗಣೇಶ್ ಅವರೇ ಕಾರಣರಾಗಿದ್ದಾರೆ. ಚುನಾವಣೆ ವೇಳೆ ಪ್ರತಿ ಗ್ರಾಮಕ್ಕೂ ಸಂಚರಿಸಿ ನಿಮ್ಮ ಪರವಾಗಿ ಪ್ರಚಾರ ಮಾಡಿದ್ದರಿಂದ ಜಿಲ್ಲೆಯಲ್ಲಿ ಎರಡನೇ ಹೆಚ್ಚು ಮತ ಲಭಿಸಿದವು. ಅವರಿಲ್ಲದೆ ನಾವು ಅನಾಥರಾಗಿದ್ದೇವೆ. ರೆಸಾರ್ಟರ್ ಗಲಾಟೆಯಲ್ಲಿ ಗಣೇಶ್ ಒಬ್ಬರದೇ ತಪ್ಪಿದೆಯೇ. ಅವರೊಬ್ಬರಿಗೆ ಏಕೆ ಜೈಲು ಎಂದರು. ಕಳೆದ ಹತ್ತು ವರ್ಷಗಳಿಂದ ಈ ಭಾಗದಲ್ಲಿ ಕಾಂಗ್ರೆಸ್ನವರು ಆಡಳಿತ ನಡೆಸಿಲ್ಲ. ಇದೀಗ ಕಾರ್ಯಕರ್ತರಿಗೆ ಜೀವ ಬಂದಿದೆ. ಪಕ್ಷದ ವರಿಷ್ಠರು ಗಣೇಶ ಅಮಾನತ್ತು ವಾಪಸು ಪಡೆಯಬೇಕು ಎಂದು ಆಗ್ರಹಿಸಿದರು. 

ಇದಕ್ಕೆ ಸಂಸದ ವಿ.ಎಸ್.ಉಗ್ರಪ್ಪ ಸ್ಪಂದಿಸಿ, ನಿಮ್ಮ ನೋವು ಅರ್ಥವಾಗುತ್ತದೆ. ಅಲ್ಲದೆ ನಿಮ್ಮ ನೋವಿನಲ್ಲಿಯೂ ನಾನು ಭಾಗಿಯಾಗಿದ್ದೇನೆ. ಗಣೇಶ್ ಜಾಮೀನು ವಿಷಯ   ನ್ಯಾಯಾಲಯದಲ್ಲಿದ್ದು, ಮಾತನಾಡುವುದು ಸರಿಯಲ್ಲ. ಈ ಗಲಾಟೆ ನಡೆಯಬಾರದಿತ್ತು. ಇದು ಸೂಕ್ಷ್ಮ ವಿಚಾರವಾಗಿದೆ. ಕಾರ್ಯಕರ್ತರು ತಾಳ್ಮೆಯಿಂದರಬೇಕು. ಈ ನಿಟ್ಟಿನಲ್ಲಿ  ಮುಖಂಡ ಎನ್.ಸೂರ್ಯನಾರಾಯಣ ರೆಡ್ಡಿ ಸೇರಿದಂತೆ ನಾನು ಆನಂದ್ಸಿಂಗ್ ಕುಟುಂಬದವರ ಜತೆ ಮಾತನಾಡಿದ್ದೇನೆ. ಶಾಸಕರಾದ ಗಣೇಶ್ ಮತ್ತು ಆನಂದಸಿಂಗ್ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದ್ದು ಪರಸ್ಪರ ಸಾಮರಸ್ಯಕ್ಕೆ ಒಪ್ಪಿದ್ದಾರೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷರು, ಮಾಜಿ ಸಿಎಂ ಸೇರಿದಂತೆ ಮುಖಂಡರ ಜತೆ ಮಾತನಾಡಿದ್ದೇನೆ. ಅಮಾನತ್ತು ವಾಪಸು ಪಡೆಯಲು ಪಕ್ಷದ ಮುಖಂಡರ ಜತೆ ಚರ್ಚಿಸುವುದಾಗಿ ಭರವಸೆ ನೀಡಿದರು. 

ಕಾಂಗ್ರೆಸ್ ಕಾರ್ಯಕರ್ತರಾದ ಕೆ.ರಾಘವೇಂದ್ರ, ಮೆಟ್ರಿ ಜಗದೀಶಗೌಡ, ಗೌಡ್ರು ಸುರೇಶಗೌಡ, ಮರೇಗೌಡ, ಸಿದ್ದಪ್ಪ, ಗೌಡ್ರ ಅಂಜೀನಪ್ಪ, ನಿಂಗನಗೌಡ, ವೀರಾಂಜನೇಯಲು, ಎನ್.ಗಿರೀಶ, ಬುಡಗನಗೌಡ, ಮೆಟ್ರಿ ಕುಮಾರಸ್ವಾಮಿ, ಜಾಫರ್, ಎಚ್.ಜಗದೀಶ್, ಚಿನ್ನಾಪುರ ಗಣೇಶ್, ಲಕ್ಷ್ಮಿನಾರಾಯಣ, ಎ.ಕೊಂಡಪ್ಪ, ನಾಗರಾಜ ಚಿನ್ನಾಪುರ, ಕುಂಬಾರ ಹೊನ್ನೂರ, ಹಂಪಣ್ಣಸೇರಿಅನೇಕ ಕಾರ್ಯಕರ್ತರಿದ್ದರು.