ಲಖನೌ, ಅ 19: ಉತ್ತರ ಪ್ರದೇಶದ ರಾಜಧಾನಿ ಲಕ್ನೊದಲ್ಲಿ ಹಾಡುಹಗಲೇ ನಡೆದ ಹಿಂದು ಮಹಾಸಭಾದ ಮಾಜಿ ಅಧ್ಯಕ್ಷ ಕಮಲೇಶ್ ತಿವಾರಿ ಹತ್ಯೆ ಪ್ರಕರಣದ ಶಂಕಿತ ಆರೋಪಿಗಳನ್ನು ಗುಜರಾತ್ನಲ್ಲಿ ವಶಕ್ಕೆ ಪಡೆಯಲಾಗಿದೆ.ಹತ್ಯೆ ನಡೆದ 24 ಗಂಟೆಯೊಳಗೆ ಪ್ರಕರಣದ ಪಿತೂರಿ ಎಳೆಯನ್ನು ಬೇದಿಸಿದ ಗುಜರಾತ್ ಎಟಿಎಸ್ ತಂಡ ಆರು ಶಂಕಿತರನ್ನು ಸೂರತ್ನಲ್ಲಿ ವಶಕ್ಕೆ ಪಡೆದಿದೆ ಎಂದೂ ವರದಿಯಾಗಿದೆ ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ತಂಡ, ಹತ್ಯೆ ಪ್ರಕರಣದ ಸಂಚಿನ ಬಗ್ಗೆ ವಿವರ ಪಡೆಯುತ್ತಿದ್ದು, ಭಾಗಿಯಾದವರ ಮಾಹಿತಿಯನ್ನು ಕಲೆಹಾಕುತ್ತಿದೆ ಎನ್ನಲಾಗಿದೆಮೂಲಗಳ ಪ್ರಕಾರ, ಆರು ಜನ ಸೇರಿ ಪಿತೂರಿ ಮಾಡಿದ್ದು ಇವರ ಜೊತೆಗೆ ಇಬ್ಬರು ಪಿತೂರಿ ಜಾರಿಗೆ ತರಲು ಸಹಕರಿಸಿರುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.