ಮಹಾರಾಷ್ಟದಲ್ಲಿ ಕಮಲ ಕಿಲಕಿಲ: ತೀವ್ರ ಕುತೂಹಲ ಕೆರಳಿಸಿದ ಹರಿಯಾಣ ಫಲಿತಾಂಶ

ಮುಂಬೈ/ಚಂಡಿಗಢ, ಅ 24:     ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಆರಂಭಿಕ ಮಾಹಿತಿಯ ಪ್ರಕಾರ ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿಕೂಟ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯುವುದು ಬಹತೇಕ ನಿಶ್ಚಿತವಾಗಿದೆ. 

  ಹರಿಯಾಣದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುವ ಸ್ಥಿತಿ ಕಂಡು ಬರುತ್ತಿದೆ. ಕಾಂಗ್ರೆಸ್ ಸರಕಾರ  ರಚಿಸಲಿದೆ  ಎಂದು ಮಾಜಿ ಸಿಎಂ  ಹೂಡಾ ಹೇಳಿದ್ದಾರೆ. ಆರಂಭದಲ್ಲಿ ಮುನ್ನಡೆಗಳಿಸಿಕೊಂಡಿದ್ದ ಬಿಜೆಪಿ ಇದೀಗ ಹಿನ್ನಡೆಗೆ ಒಳಗಾಗಿದೆ. ಜನನಾಯಕ ಜನತಾ ಪಾರ್ಟಿ ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ಬಿಜೆಪಿಗೆ ಭಾರಿ ಹೊಡೆತ ಕೊಟ್ಟಿದೆ.   

 ಕಾಂಗ್ರೆಸ್ ನಾಯಕರು ಜನನಾಯಕ ಜನತಾ ಪಾರ್ಟಿಯ ದುಷ್ಯಂತ್ ಚೌಟಾಲಾರನ್ನು ಸಂಪರ್ಕಿಸಿ. ಕಾಂಗ್ರೆಸ್ ಗೆ  ಬೆಂಬಲ ನೀಡಿದರೆ  ಉಪಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಆಹ್ವಾನ ನೀಡಿದ್ದಾರೆ. 

 ಮಹಾರಾಷ್ಟ್ರದ ಒಟ್ಟು 288 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ-ಶಿವಸೇನೆ ಮೈತ್ರಿಕೂಟ 166, ಕಾಂಗ್ರೆಸ್-ಎನ್ಸಿಪಿ ಮೈತ್ರಿಕೂಟ 83 ಮತ್ತು ಇತರರು 39 ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿಕೊಂಡಿದ್ದಾರೆ. 

ಹರಿಯಾಣದ ಒಟ್ಟು 90 ವಿಧಾನಸಭಾ ಕ್ಷೇತ್ರಗಳಿಗೆ ಸೋಮವಾರ  ಮತದಾನ  ನಡೆದಿತ್ತು .