ಬೆಂಗಳೂರು, ಮೇ 18,ಇಂದಿನಿಂದ ಬಸ್ ಸಂಚಾರ ಇರಲಿದೆ ಎಂದು ಭಾವಿಸಿ ಮೆಜಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಮೆಜೆಸ್ಟಿಕ್ ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್ ಖಾಲಿ ಖಾಲಿಯಾಗಿರುವುದನ್ನು ಕಂಡು ನೋಡಿ, ಕೇಳಿ ಕಂಗಲಾಗಿದ್ದಾರೆ. ಅದರಲ್ಲೂ ಯಾದಗಿರಿಗೆ ಹೋಗಲು ಬಂದಿದ್ದ ಗರ್ಭಿಣಿ ಮಹಿಳೆಯರ ಪರದಾಟವಂತೂ ಹೇಳ ತೀರದಾಗಿತ್ತು. ರಾಜ್ಯ ಸರ್ಕಾರದ ಅನುಮತಿ ಗಾಗಿ ಕಾಯುತ್ತಿರುವ ಕೆಎಸ್ಆರ್ಟಿಸಿ ಸಂಚಾರ ಸೇವೆ ಪುನರಾರಂಭಿಸಲು ಸರ್ವ ಸನ್ನದ್ದವಾಗಿದೆ ಪ್ರಯಾಣಿಕರು ಸಾಮಾಜಿಕ ಅಂತರ ಕಾಪಾಡಲು ಅನುಕೂಲವಾಗುವಂತೆ ಮೆಜೆಸ್ಟಿಕ್ ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್ ನಲ್ಲಿ ಬಾಕ್ಸ್ ಹಾಕಿ ವ್ಯವಸ್ಥೆ ಮಾಡಿದೆ .
ಡಿಪೋಗಳಿಲ್ಲಿರುವ ಬಸ್ ಗಳ ಸರ್ವಿಸ್ ಮಾಡಿ ನಿಲ್ಲಿಸಲಾಗಿದೆ ಮೇಲಾಗಿ ಪ್ರತಿಯೊಂದು ಬಸ್ಸಿಗೂ ಸ್ಯಾನಿಟೈಸ್ ಮಾಡಲಾಗಿದೆ.
ಇವತ್ತು ಬಸ್ ಸಂಚಾರ ಆರಂಭವಾಗದ ಕಾರಣ ಬಹಳಷ್ಠು ಪ್ರಯಾಣಿಕರು ಪೆಚ್ಚು ಮೋರೆ ಹಾಕಿಕೊಂಡು ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹೀಗಾಗಿ ಬಸ್ ಗಳು ಡಿಪೋದಲ್ಲೆ ಉಳಿದುಕೊಂಡಿದ್ದು ಮುಂದಿನ ಆದೇಶಕ್ಕೆ ಕಾಯತ್ತಿವೆ. ಇಂದು ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರು ಅಧಿಕಾರಿಗಳ ಮತ್ತು ಸಚಿವರ ಸಭೆ ಮಾಡಲಿದ್ದು ನಂತರ ಸಾರಿಗೆ ಸಂಚಾರ ಯಾವಾಗ ?ಏನು ಎತ್ತ ಎಂಬ ವಿವರಗಳು ಲಭ್ಯವಾಗಲಿದೆ ಈಗಾಗಲೇ ರಾಜ್ಯ ಸಹ ಎರಡು ದಿನಗಳ ಕಾಲ ಲಾಕ್ಡೌನ್ ಅವಧಿ ವಿಸ್ತರಣೆ ಮಾಡಿದ್ದು ಇದರ ನಂತರ ಸಾರಿಗೆ ಸೇವೆ ಮತ್ತೆ ಯಾವಾಗ ಶರುವಾಗಲಿದೆ ಎಂಬ ವಿವರ ಲಭ್ಯವಾಗಲಿದೆ.