ಕೆಎಲ್‌ಇ ಸಂಸ್ಥೆಯು ಸಾರ್ವಜನಿಕ ಆರೋಗ್ಯಕ್ಕೆ ಮೀಸಲಾಗಿರುತ್ತದೆ: ಡಾ. ರಾಜಶೇಖರ

KLE Institute is dedicated to public health: Dr. Rajashekar

ಬೆಳಗಾವಿ 12: ಕೆ  ಎಲ್ ಇ ಸಂಸ್ಥೆಯು ಸಾರ್ವಜನಿಕ ಆರೋಗ್ಯಕ್ಕೆ ಮೀಸಲಾಗಿರುತ್ತದೆ ನಾಗರಿಕರ ಆರೋಗ್ಯ ಕಾಪಾಡುವದೇ ಕೆ ಎಲ್ ಇ ಸಂಸ್ಥೆಯ ಮೂಲ ಉದ್ದೇಶವಾಗಿದೆ ಎಂದು ಯು ಎಸ್ ಎಮ್ ಕೆ ಎಲ್ ಇ ಯ ನಿರ್ದೇಶಕರಾದ ಡಾ. ಹೆಚ್ ಬಿ ರಾಜಶೇಖರ ಮಾತನಾಡುತ್ತಿದ್ದರು. 

 ಅವರು ಇಂದು ನಗರದ ಕೆ ಎಲ್ ಇ ಎಮ್ ಎಸ್ ಶೇಷಗಿರಿ ಎಂಜಿನಿಯರಿಂಗ ಕಾಲೇಜಿನ ಆವರಣದಲ್ಲಿರು ಕೆ ಎಲ್ ಇ ಆಸ್ಪತ್ರೆ ಉದ್ಯಮಬಾಗದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸನಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಶತಕಕ್ಕೂ ಮೀರಿದ ಇತಿಹಾಸ ಹೊಂದಿರುವ ಕೆ ಎಲ್ ಇ ಸಂಸ್ಥೆಯು ಸದಾಕಾಲ ಸಾರ್ವಜನಿಕರ ಹಿತಾಸಕ್ತಿಗಳ ಬಗ್ಗೆ ಚಿಂತಿಸುತ್ತಲೇ ಇದೆ. ಈ ನಿಟ್ಟಿನಲ್ಲಿ ಒಂದು ವರ್ಷದ ಹಿಂದೆಯಷ್ಟೇ ಆರಂಬವಾಗಿರುವ ನಮ್ಮ ಉದ್ಯಮಬಾಗನ ಕೆ ಎಲ್ ಇ ಆಸ್ಪತ್ರೆಯಲ್ಲಿ ಇಂದು ಉಚಿತ ಆರೋಗ್ಯ ತಪಾಸನಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅಭಿಮತ ವ್ಯಕ್ತಪಡಿಸಿದರು.  

ಈ ಸಂದರ್ಭದಲ್ಲಿ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ ಸಿ ಧಾರವಾಡ ಅವರು ಮಾತನಾಡುತ್ತ  ಅನಗೋಳ, ಮಜಗಾವ, ಪೀರಣವಾಡಿ, ಉದ್ಯಮಬಾಗ ಹಾಗೂ ಸುತ್ತಮುತ್ತಲ ನಾಗರಿಕರ ಹಿತದೃಷ್ಟಿಯಿಂದ ಉದ್ಯಮಬಾಗ ನ ಕೆ ಎಲ್ ಇ ಆಸ್ಪತ್ರೆಯನ್ನು ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೊರೆ ಅವರ ಆಶಯದಂತೆ  ಹಾಗೂ ಬೆಳಗಾವಿಯ ಹೆಸರಾಂತ ಉದ್ಯಮಿಗಳು ವಿನಂತಿಯ ಮೇರೆಗೆ ಪ್ರಾರಂಭಿಸಲಾಗಿದೆ. ಈ ನಿಟ್ಟಿನಲ್ಲಿ ಈ ಭಾಗದ ಜನರಿಗೆ ಇನ್ನೂ ಹೆಚ್ಚಿನ ಆರೊಗ್ಯ ಸೇವೆಗಳು ಸಿಗುವಂತಾಗಲಿ ಎಂಬ ಉದ್ದೇಶದಿಂದ ವಿಶೇಷ ಸೇವೆಗಳಾದ ಪ್ರತಿ ಬುಧವಾರದಂದು ದಂತ ಚಿಕಿತ್ಸೆ ವಿಬಾಗ, ಗುರುವಾರದಂದು ಚಿಕ್ಕಮಕ್ಕಳ ತಪಾಸಣೆ ಹಾಗೂ ಸ್ತ್ರೀರೋಗ ಮತ್ತು ಪ್ರಸೂತಿ ವೈದ್ಯರು ಹಾಗೂ ಶುಕ್ರವಾರದಂದು ಜನರಲ್ ಮೆಡಿಸಿನ ವಿಭಾಗದ ತಜ್ಞ ವೈದ್ಯರು ಲಭ್ಯರಿರುತ್ತಾರೆ. ಆದರೆ ಇಂದು ನಾಗರಿಕರ ಒಳಿತಿಗಾಗಿ ಉಚಿತ ಆರೊಗ್ಯ ತಪಾಸನಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಆರೋಗ್ಯ ಸೇವೆಗಳು, ಇದೇ ಆಸ್ಪತ್ರೆಯಲ್ಲಿ ಶೀಘ್ರದಲ್ಲಿಯೇ ನಾಗರಿಕರಿಗೆ ಸಿಗಲಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.  

ಶಿಬಿರದಲ್ಲಿ ಯು ಎಸ್ ಎಮ್ ಕೆ ಎಲ್ ಇ ಯ ಹಿರಿಯ ವೈದ್ಯರಾದ ಡಾ. ಸಿ ಎನ್ ತುಗಶೆಟ್ಟಿ, ಉದ್ಯಮಬಾಗ ಕೆ ಎಲ್ ಇ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಮದನ ಡೋಂಗ್ರೆ, ಡಾ. ಪ್ರಿಯಾಂಕಾ ಎ, ಕೆ ಎಲ್ ಇ ದಂತಮಹಾವಿದ್ಯಾಲಯದ ಹಿರಿಯ ವೈದ್ಯರಾದ ಡಾ. ಅನಿಲ ಅಂಕೋಲಾ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಜನಸಂಪರ್ಕಾಧಿಕಾರಿಗಳಾದ ಶ್ರೀ ಕೃಷ್ಣಾ ಗುಮಾಸ್ತೆ, ಲಕ್ಷ್ಮೀ ಪಾಟೀಲ, ಸಂತೋಷ ಇತಾಪೆ ಅವರು ಹಾಗೂ ನಾಗರಿಕರು ಬಾಗವಹಿಸಿದ್ದರು.  

ಶಿಬಿರದಲ್ಲಿ 167 ಜನರಿಗೆ ಆರೊಗ್ಯ ತಪಾಸಣೆ ಮಾಡಲಾಯಿತು. ಅದರಲ್ಲಿ 145 ಜನರಿಗೆ ಜನರಲ್ಲ ಮೆಡಿಸಿನ್ ವಿಭಾಗದ ವೈದ್ಯರು ಆರೋಗ್ಯ ತಪಾಸಣೆ ಮಾಡಲಾಗಿ ಅವರಲ್ಲಿ 16 ಜನರಿಗೆ ಮಧುಮೇಹ, 21 ಜನರಿಗೆ ಅತಿರಕ್ತದೊತ್ತಡದ ಸಮಸ್ಯೆಗಳಿರುವದು ತಿಳಿದುಬಂದಿತು, 52 ಜನರಿಗೆ ದಂತ ತಪಾಸಣೆ ಮಾಡಲಾಗಿ ಅವರಲ್ಲಿ 14 ಜನರಿಗೆ ದಂತಗಳ ವಿವಿಧ ಸಮಸ್ಯೆಗಳಿರುವದು ತಿಳಿದು ಬಂದಿತು. ಹೆಚ್ಚಿನ ಸಮಸ್ಯೆಗಳನ್ನು ಹೊಂದಿರುವ ರೊಗಿಗಳಿಗೆ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಅಸ್ಪತ್ರೆ ಅಥವಾ ಉದ್ಯಮಬಾಗ ನ ಕೆ ಎಲ್ ಇ ಆಸ್ಪತ್ರೆಯ ಸೇವೆಗಳನ್ನು ಉಪಯೋಗಿಸಿಕೊಳ್ಳಬಹುದೆಂದು ಕೆ ಎಲ್ ಇ ಶತಮಾನೊತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಅವರು ಸೂಚಿಸಿದ್ದಾರೆ.