ಕೆಎಲ್ ರಾಹುಲ್ ಭಾರತ ತಂಡದ ಭವಿಷ್ಯದ ಸಚಿನ್, ಗವಾಸ್ಕರ್: ಫಾರೋಕ್ ಎಂಜಿನಿಯರ್


ಲಂಡನ್: ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಭಾರತ ತಂಡದ ಭವಿಷ್ಯದ ಸಚಿನ್ ತೆಂಡೂಲ್ಕರ್, ಅಥವಾ ಸುನಿಲ್ ಗವಾಸ್ಕರ್ ಎಂದು ಮಾಜಿ ಕ್ರಿಕೆಟಿಗ ಫಾರೋಕ್ ಎಂಜಿನಿಯರ್ ಹೇಳಿದ್ದಾರೆ. 

ನಾಳೆಯಿಂದ ಇಂಗ್ಲೆಂಡ್ ನ ಟ್ರೆಂಟ್ ಬ್ರಿಡ್ಜ್ ನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗುತ್ತಿದ್ದು, ಈ ಹಿನ್ನಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಫಾರೋಕ್ ಎಂಜಿನಿಯರ್, ಖಂಡಿತಾ ಪ್ರಸ್ತುತ ಭಾರತ ತಂಡ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಜಯಿಸುವ ಸಾಮಥ್ರ್ಯಹೊಂದಿದೆ. 

ಈ ಹಿಂದೆಂದಿಗಿಂತಲೂ ಅಂದರೆ ಈ ಹಿಂದೆ ಇಂಗ್ಲೆಂಡ್ ನೆಲದ ಮೇಲೆ ಕಾಲಿಟ್ಟ ಟೀಂ ಇಂಡಿಯಾ ತಂಡಕ್ಕಿಂತ ಹಾಲಿ ಟೀಂ ಇಂಡಿಯಾ ಬಲಿಷ್ಠವಾಗಿದೆ. ತಂಡದಲ್ಲಿ ಸಾಕಷ್ಟು ವೃತ್ತಿಪರ ಮತ್ತು ಯುವ ಕ್ರಿಕೆಟಿಗರಿದ್ದು ಖಂಡಿತಾ ಭಾರತ ತಂಡ ಸರಣಿ ಜಯಿಸಲಿದೆ ಮತ್ತು ಗೆಲ್ಲಬೇಕು ಕೂಡ. ನಾನೇನೂ ಜೂಜು ಕಟ್ಟಿಲ್ಲ. ಆದರೆ ನನ್ನ ತಂಡಕ್ಕೆ ನಾನು ಬೆಂಬಲ ನೀಡಲೇಬೇಕು ಎಂದು ಫಾರೋಕ್ ಎಂಜಿನಿಯರ್ ಹೇಳಿದ್ದಾರೆ. 

ಇದೇ ವೇಳೆ ಕನ್ನಡಿಗ ಕೆಎಲ್ ರಾಹುಲ್ ಕುರಿತು ಮಾತನಾಡಿದ ಫಾರೋಕ್ ಎಂಜಿನಿಯರ್, ಕೆಎಲ್ ರಾಹುಲ್ ಓರ್ವ ಅದ್ಬುತ ಆಟಗಾರ. ಆತ ಭವಿಷ್ಯದ ಸಚಿನ್ ತೆಂಡೂಲ್ಕರ್ ಅಥವಾ ಸುನಿಲ್ ಗವಾಸ್ಕರ್.. ಖಂಡಿತಾ ಇದು ಉತ್ಪ್ರೇಕ್ಷೆಯಲ್ಲ. ನಿಜಕ್ಕೂ ಆತ ಪ್ಪತಿಭಾನ್ವಿತ ಕ್ರಿಕೆಟಿಗ. ತಂಡದ ಸ್ಟಾರ್ ಬ್ಯಾಟ್ಸಮನ್ ಆಗುವ ಎಲ್ಲ ಲಕ್ಷಣಗಳೂ ಆತನಲ್ಲಿದೆ. ಆತನ ಆಟದಿಂದ ನಾನು ಸಾಕಷ್ಚು ಸ್ಪೂತರ್ಿಗೊಂಡಿದ್ದೇನೆ. ಆತನಿಗೆ ಸೂಕ್ತ ಅವಕಾಶ ಸಿಕ್ಕಿಲ್ಲ. ಸಿಕ್ಕ ಅವಕಾಶವನ್ನು ಆತ ಸರಿಯಾಗಿ ಬಳಸಿಕೊಂಡಿಲ್ಲ.  

ಇನ್ನು ಹಾಲಿ ತಂಡದಲ್ಲಿ ಕೊಹ್ಲಿ ಮತ್ತು ಕುಲದೀಪ್ ಯಾದವ್ ಪ್ರಮುಖ ಪಾತ್ರ ನಿರ್ವಹಣೆ ಮಾಡಲಿದ್ದಾರೆ ಎಂದು ಫರೋಕ್ ಎಂಜಿನಿಯರ್ ಹೇಳಿದ್ದಾರೆ.