ಬೆಂಗಳೂರು, ಮಾ. 30, ನಗರ ಪೊಲೀಸರಿಂದ KAP CLEAR ಇ -ಪಾಸ್ ಬಿಡುಗಡೆಗೊಳಿಸಲಾಗಿದೆ.ಕೊರೊನಾ ಸೋಂಕು ತಡೆಗಟ್ಟಲು 21ದಿನಗಳ ಕಾಲ ದೇಶವನ್ನು ಲಾಕ್ ಡೌನ್ ಮಾಡಿದ ಹಿನ್ನೆಲೆಯಲ್ಲಿ ಅಗತ್ಯ ವಸ್ತು ಪೂರೈಕೆ, ಡೋರ್ ಡೆಲಿವರಿ ಬಾಯ್ಸ್‌ಗೆ ಪಾಸ್ ನೀಡಲಾಗುತ್ತಿದೆ. ಇತ್ತೀಚೆಗೆ ನಗರದ ಡಿಸಿಪಿ ಕಚೇರಿಗಳಲ್ಲಿ ಪಾಸ್ ವಿತರಿಸಲಾಗುತ್ತಿತ್ತು. ಆದರೆ, ಈ ಸಂದರ್ಭದಲ್ಲಿ ಪಾಸ್ ಕೌಂಟರ್ ಹತ್ತಿರ ಭಾರಿ ಜನದಟ್ಟಣೆ ನಿರ್ಮಾಣವಾಗಿತ್ತು. ಕೊರೊನಾ ಸೋಂಕು ತಡೆಗಟ್ಟಲು ಮುಖ್ಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದೇ ಅಗತ್ಯವಾಗಿರುವುದರಿಂದ ಇ-ಪಾಸ್ ನೀಡಲು ನಗರ ಪೊಲೀಸ್ ಇಲಾಖೆ ನಿರ್ಧರಿಸಿದೆ. ಅವಶ್ಯಕತೆ ಇದ್ದವರು https://kspclearpass.mygate.com/signup ಈ ವೆಬ್ ಸೈಟ್ ನಲ್ಲಿ ಲಾಗ್ ಇನ್ ಆಗುವುದರ ಮೂಲಕ KAP CLEAR ಇ- ಪಾಸ್ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.