ನವದೆಹಲಿ, 25 ಸಿಂಧ್ಯಾ ಎಂದರೆ ಕಾಂಗ್ರೆಸ್, ... ಕಾಂಗ್ರೆಸ್ ಎಂದರೆ ಸಿಂಧ್ಯಾ ಎಂದೇ ಅನ್ವರ್ಥಗೊಂಡಿರುವ ಮಧ್ಯಪ್ರದೇಶ ರಾಜ್ಯ ರಾಜಕೀಯದಲ್ಲಿ ಜ್ಯೋತಿರಾದಿತ್ಯ ಸಿಂಧ್ಯಾ ಕುಟುಂಬ ಮೊದಲಿನಿಂದಲೂ ತಮ್ಮದೇ ಆದ ಸ್ಥಾನ ಮಾನ ಹೊಂದಿದೆ. ಹೊಸ ಬೆಳವಣಿಗೆಯೊಂದು ರಾಜ್ಯದ ಜನರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.. ಜ್ಯೋತಿರಾದಿತ್ಯ ಸಿಂಧ್ಯಾ ತಮ್ಮ ಟ್ವಿಟ್ಟರ್ ಖಾತೆ ಸ್ವ ವಿವರದಿಂದ ಕಾಂಗ್ರೆಸ್ ಹೆಸರನ್ನು ತೆಗೆದುಹಾಕಿದ್ದಾರೆ. ಕಾಂಗ್ರೆಸ್ ಹೆಸರು ಪ್ರಸ್ತಾಪಿಸದೆ, ಕೇವಲ ಜನ ಸೇವಕ ಮತ್ತು ಕ್ರಿಕೆಟ್ ಪ್ರೇಮಿ ಎಂದು ಮಾತ್ರ ಉಲ್ಲೇಖಿಸಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಮಾತ್ರವಲ್ಲದೆ, ರಾಷ್ಟ್ರ ರಾಜಕೀಯ ವಲಯಗಳಲ್ಲಿಯೂ ಚಚರ್ೆಗೆ ಗ್ರಾಸವಾಗಿದೆ. ಈ ಬಗ್ಗೆ ಸಿಂಧ್ಯಾ ಅವರನ್ನು ಸಂಪಕರ್ಿಸಿದಾಗ, ಒಂದು ತಿಂಗಳ ಹಿಂದೆಯೇ ಅದನ್ನು ಬದಲಾಯಿಸಿದ್ದೇನೆ. ಜನರ ಸಲಹೆಯಂತೆ ತಮ್ಮ ಟ್ವೀಟರ್ ಸ್ವ ವಿವರವನ್ನು ಸಂಕ್ಷೇಪಿಸಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಈ ಕುರಿತ ಹಬ್ಬಿರುವ ಯಾವುದೇ ವದಂತಿ ನಂಬಬಾರದೆಂದು ಮನವಿಮಾಡಿದ್ದಾರೆ. ಆದರೆ, ಇದರ ಹಿಂದೆ ಇರುವ ಅಸಲಿ ಕಾರಣಗಳು ಬೇರೆ ಎಂದು ರಾಜಕೀಯ ವಲಯಗಳಲ್ಲಿ ಚಚರ್ೆ ನಡೆಯುತ್ತಿವೆ. ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್, ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ತೆರೆಮರೆಯಲ್ಲಿ ನೆಡೆಸಿರುವ ರಾಜಕೀಯ ಮಸಲಿತ್ತಿನಿಂದ ಬೇಸತ್ತು ಅವರು ಈ ನಿಧರ್ಾರವನ್ನು ತೆಗೆದುಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮಧ್ಯಪ್ರದೇಶ ಕಾಂಗ್ರೆಸ್ ನಾಯಕರಾಗಿ ಜ್ಯೋತಿರಾದಿತ್ಯ ಸಿಂಧ್ಯಾ ಅವರೊಂದಿಗೆ, ದಿವಂಗತ ನಾಯಕ ಅಜರ್ುನ್ ಸಿಂಗ್ ಅವರ ಪುತ್ರ ಅಜಯ್ ಸಿಂಗ್ ಅವರನ್ನು ಮುಂದೆ ತರಲು ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನಲೆಯಲ್ಲಿ ಸಿಂಧ್ಯಾ ಈ ನಿಧರ್ಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್ ಗಾಂಧಿ ತಂಡದ ಪ್ರಮುಖ ನಾಯಕರಾಗಿ ಹೆಸರು ಪಡೆದಿರುವ ಸಿಂಧ್ಯಾ, ಹೊಸದಾಗಿ ತೆಗೆದುಕೊಂಡ ನಿಧರ್ಾರ ಕಾಂಗ್ರೆಸ್ ವಲಯಗಳಲ್ಲಿ ತೀವ್ರ ಚಚರ್ೆಗೆ ಗ್ರಾಸವಾಗಿದೆ. ಪಕ್ಷ ತೊರೆಯಲಿದ್ದಾರೆ ಎಂಬ ವದಂತಿಗಳು ಕಾಡ್ಗಿಚ್ಚಿನಂತೆ ಹಬ್ಬಿವೆ. ಬಿಜೆಪಿ ನಿಧರ್ಾರಗಳ ಬಗ್ಗೆ ಆಗಾಗ್ಗೆ ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿ ಸಿಂಧ್ಯ ಟ್ವೀಟ್ ಮಾಡಿದ್ದರು. ಸಂವಿಧಾನ ವಿಧಿ 370 ರದ್ದತಿಯ ಕೇಂದ್ರ ಸಕರ್ಾರದ ಕ್ರಮ ಬೆಂಬಲಿಸಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರ ದೃಷ್ಟಿ ಬಿಜೆಪಿ ಕಡೆಗಿದೆ ಎಂಬ ಚಚರ್ೆಗಳು ನಡೆಯುತ್ತಿದೆ.