ಲೋಕದರ್ಶನ ವರದಿ
ಇಂಡಿ 03:ಜ್ಯೋತಿಭಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ದಂಪತಿಗಳು ಅಂದಿನ ಅಂಧ;ಕಾರದ ಸಮಾಜದಲ್ಲಿನ ಕೀಳರಿಮೆಯನ್ನು ಹೋಗಲಾಡಿಸಲು ಅವಿರತ ಶ್ರಮಿಸಿದ ಒಬ್ಬ ಕ್ರಾಂತಿಕಾರಕ ಸಮಾಜ ಹೋರಾಟಗಾರರು ಎಂದು ಬ್ಲಾಕ ಕಾಂಗ್ರೆಸ್ ಸಂಚಾಲಕ ಶಿವಾನಂದ ಮೂರಮನ್ ಹೇಳಿದರು.
ಪಟ್ಟಣದ ಜ್ಯೋತಿಭಾ ಫುಲೆ ವೃತ್ತದಲ್ಲಿ ಸಾವಿತ್ರಿಭಾಯಿ ಫುಲೆಯವರ ಜನ್ಮದಿನಾಚರಣೆ ನಿಮಿತ್ಯ ಭಾವಚಿತ್ರಕ್ಕೆ ಹೂ ಮಾಲೆ ಹಾಕಿ ನಂತರ ಮಾತನಾಡಿದ ಅವರು ಜ್ಯೋತಿಭಾ ಫುಲೆಯವರು ಸಮಾಜದ ಅಂಧಕಾರಗಳನ್ನು ಹೋಗಲಾಡಿಸಲು ತಮ್ಮ ಜೀವಿತದ ಅಂತಿಮಗಳಿಗೆಯವರಿಗೂ ಸಮಾಜ ಪರಿವರ್ತನಾ ತರಲು ಹೋರಾಟ ಮಾಡಿದ ಧೀಮಂತ ವ್ಯಕ್ತಿ.
ಜ್ಯೋತೀಭಾ ಫುಲೆಯವರು ಸತ್ಯಶೋಧಕ ಸಮಾಜ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಇದರಿಂದ ಅನೇಕ ಕ್ರಾಂತಿಕಾರಕ ಬದಲಾವಣೆ ಮಾಡಿದರು. ಮಹಿಳೆ ಕೇವಲ ಹೆರಿಗೆಯಂತ್ರವಾಗದೆ ನಾಲ್ಕು ಗೋಡೆಗಳ ಮಧ್ಯ ಇರುವದಕ್ಕಿಂತ ಅವರು ಸಹಿತ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿ ಸಮಾನವಾಗಿ ಬದುಕಬೇಕು ಎಂಬ ಸಮಾನವಾದ ಕ್ರಾಂತಿಕಾರಕ ಹೆಜ್ಜೆಯನ್ನು ಇಟ್ಟ ಪ್ರಥಮ ನಾಯಕ.
ಪತಿಗೆ ತಕ್ಕ ಸತಿಯಾಗಿ ಮಾತೆ ಸಾವಿತ್ರಿಭಾಯಿಫುಲೆ ಬಡವರು ದೀನದಲಿತರು ನೊಂದವರಪಾಲಿನ ಆಶಾಕಿರಣವಾಗಿ ದಮನಿತರ ಧ್ವನಿಯಾಗಿ ಅಂದಿನ ಸಮಾಜದಲ್ಲಿ ನಿಂತಳು. ಅಂದು ಕಲುಷಿತ ಸಮಾಜದಲ್ಲಿ ದಲಿತರಿಗೆ ಶಿಕ್ಷಣ ಕನಸಿನ ಮಾತಾಗಿತ್ತು. ಮಡಿವಂತಿಕೆ ಸಮಾಜದಲ್ಲಿ ದಲಿತರಿಗೆ ಶಿಕ್ಷಣ ನೀಡಿದ ಪ್ರಪ್ರಥಮ ಶಿಕ್ಷಕಿ ಎಂದರೆ ಸಾವಿತ್ರಬಾಯಿಫುಲೆ ಎಂದರೆ ತಪ್ಪಾಗಲಾರದು.ಸಾವಿತ್ರ್ರಿಬಾಯಿ ದಲಿತರ ಬಡಾವಣೆಗೆ ಹೋಗಿ ಶಿಕ್ಷಣ ನೀಡುವಾಗ ಅನೇಕ ಅಪಮಾನಗಳು ಆದರೂ ಸಹಿತ ಯಾವದನ್ನು ಲೆಕ್ಕಿಸದೆ ಶಿಕ್ಷಣವೇ ಪರಮ ಶಕ್ತಿಯಾಗಿದ್ದು ತುಳಿತಕ್ಕೆ ಒಳಗಾದ ಜನರನ್ನು ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಕಂಕಣ ಬದ್ದರಾಗಿ ನಿಂತರು.
ಸಾವಿತ್ರಿಭಾಯಿಫುಲೆ ದಲಿತರನ್ನು ಮಹಿಳೆಯರನ್ನು ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಪೂನಾ:ದಲ್ಲಿ ಜ್ಯೋತಿಭಾ ಫುಲೆಯವರು ಡೆಕ್ಕನ್ ಶಾಲೆಯನ್ನು ಸ್ಥಾಪಿಸಿದರು ಈ ಶಿಕ್ಷಣ ಸಂಸ್ಥೆಗೆ ಸಾವಿತ್ರಿಬಾಯಿ ಫುಲೆಯವರು ಬೆನ್ನಲುಬಾಗಿ ಬೆಳೆಸಿದರು ಅದು ಇಂದು ಹೆಮ್ಮರವಾಗಿ ವಿಶ್ವವಿಧ್ಯಾಲಯದ ಮಟ್ಟದಲ್ಲಿ ಬೆಳೆದಿದೆ ಇಂತಹ ಕ್ರಾಂತಿಕಾರಿ ಮಹನೀಯರು. ಒಂದೇ ಸಮಾಜಕ್ಕೆ ಹೋಲಿಕೆ ಮಾಡುವದು ತರವಲ್ಲ ಇಂತ ಮಹಾನ್ ನಾಯಕರನ್ನು ಇಡೀ ಸಮುದಾಯ ಜನತೆ ಗೌರವಿಸಿ ಪೂಜಿಸುವಂತಾಗಬೇಕು ಎಂದು ಹೇಳಿದರು.
ಜೈಭೀಮದಳದ ತಾಲೂಕಾ ಅಧ್ಯಕ್ಷ ಕಲ್ಲಪ್ಪ ಅಂಜುಟಗಿ, ಕ.ರಾ.ದ.ಸಂಘರ್ಷ ಸಮಿತಿ ಸಂತೋಷ ತಳಕೇರಿ, ರೈಸ್ ಅಷ್ಠೇಕರ್, ಬಹುಜನ ದಲಿತ ಸಂಘರ್ಷ ಸಮಿತಿ ತಾಲೂಕಾ ಅಧ್ಯಕ್ಷ ಮಂಜು ಹಾದಿಮನಿ, ಧಮರ್ು ಕಾಂಬಳೆ ,ಮಿಲಿಂದ ಹೊಸಮನಿ , ಸುರೇಶ ಅಂಜುಟಗಿ, ,ರಾಘು ಹಾದಿಮನಿ, ಸೇರಿದಂತೆ ಅನೇಕರಿದ್ದರು.