ಶಿಕ್ಷಣ ಕ್ರಾಂತಿಯ ಜ್ಯೋತಿ ಸಾವಿತ್ರಿಬಾಯಿ ಫುಲೆ: ಸೋನಗೋಜೆ

ಲೋಕದರ್ಶನ ವರದಿ

ಬೆಳಗಾವಿ 03: ಭಾರತೀಯ ಸಮಾಜದಲ್ಲಿ ತುಂಬಿಕೊಂಡಿದ್ದ ಜಾತಿ ಮತ್ತು ಲಿಂಗ ತಾರತಮ್ಯ ಹಾಗೂ ಜೀವ ವಿರೋಧಿ ಮೂಢನಂಬಿಕೆಗಳ ವಿರುದ್ಧ ತಮ್ಮ ಜೀವನವಿಡೀ ಹೋರಾಟ ನಡೆಸಿ ಸಾಹಸ ಮೆರೆದ ತ್ಯಾಗಮಯಿ ಮತ್ತು ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆಯವರು ನಮ್ಮೆಲ್ಲರ ಆದರ್ಶವಾಗಬೇಕು. ಅಂದು ಅವರು ಶಿಕ್ಷಣ ಕ್ರಾಂತಿ ಮಾಡದಿದ್ದರೆ ಇಂದು ನನ್ನಂಥ ಮಹಿಳೆಯರು ಶಿಕ್ಷಕರಾಗಲು ಸಾಧ್ಯವೇ ಇರುತ್ತಿರಲಿಲ್ಲ. ಅಂಥ ಅಕ್ಷರದ ಅರಿವು ನೀಡಿದ ಅಕ್ಷರದ ತಾಯಿಗೆ ನಮಿಸುವುದೇ ನಿಜವಾದ ವಿದ್ಯಾದೇವಿಯ ಪೂಜೆ ಮಾಡಿದಂತೆ " ಎಂದು ಸಮತಾ ಶಾಲೆಯ ಶಿಕ್ಷಕಿ ಸುನೀತಾ ಸೋನಗೋಜೆ ಅಭಿಪ್ರಾಯ ಪಟ್ಟರು.

ನಗರದ ಹೊರವಲಯದ ಕಣಬರಗಿಯಲ್ಲಿ ಮಾನವ ಬಂಧುತ್ವ ವೇದಿಕೆಯ ಕಣಬರಗಿ ಘಟಕದ ವತಿಯಿಂದ  ಸಮತಾ ಶಾಲೆಯಲ್ಲಿ ಆಯೋಜಿಸಲಾದ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜಯಂತ್ಯುತ್ಸವದ ನಿಮಿತ್ಯ ಮಾನವ ಬಂಧುತ್ವ ವೇದಿಕೆಯ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲಾದ 'ಅಕ್ಷರದ ತಾಯಿಗೆ ನಮನ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, "ಶತ-ಶತಮಾನಗಳಿಂದ ಅಕ್ಷರದಿಂದ ವಂಚಿತರಾದ ಜನರಿಗೆ ಅದರಲ್ಲೂ ಸ್ತ್ರೀಯರಿಗೆ ಶಿಕ್ಷಣ ಕೊಡುವ ಮೂಲಕ ಅವರಲ್ಲಿದ್ದ ಮೌಢ್ಯತೆ-ಕಂದಾಚಾರಗಳನ್ನು ಹೋಗಲಾಡಿಸುದಷ್ಟೇ ಅಲ್ಲದೇ ಅನೇಕ ಸಾಮಾಜಿಕ ಸುಧಾರಣೆ ತರುವಲ್ಲಿ  ಫುಲೆ ದಂಪತಿಗಳ ಕೊಡುಗೆ ಅಪಾರವಾಗಿದೆ. ಸಾಮಾಜದ ತೀವ್ರ ವಿರೋಧದ ನಡುವೆ ಹತ್ತು ಹಲವು ನೋವು, ಅಪಮಾನಗಳನ್ನು ಸಹಿಸಿಕೊಂಡು ಅಂದು ಸಾವಿತ್ರಿಬಾಯಿ ಫುಲೆ  ಪುಣೆಯಲ್ಲಿ ಮೊದಲ ಶಾಲೆ ಪ್ರಾರಂಭಿಸಿದರು. ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಸಾಮಾನ್ಯ ಜನರಲ್ಲಿ ಸಂಪ್ರದಾಯಗಳ ನೆಪ ಒಡ್ಡಿ ಮೌಢ್ಯಾಚರಣೆಗಳನ್ನೇ ಪ್ರೋತ್ಸಾಹಿಸುತ್ತಿರುವುದು ವಿಷಾದನೀಯ. ಇದರಿಂದ ಹೊರಬರದಿದ್ದರೆ ನಮ್ಮ ದೇಶಕ್ಕೆ ಭವಿಷ್ಯವಿಲ್ಲ. ಹೀಗಾಗಿ ಅಕ್ಷರಸ್ಥರಾದ ನಮ್ಮಂಥವರು ಸ್ವಯಂ ಬದಲಾಗಿ ಜನರಲ್ಲಿ ಜಾಗೃತಿ ಮೂಡಿಸುವಂತಾಗಲಿ" ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದಶರ್ಿ ರೇಣುಕಾ ಮಜಲಟ್ಟಿ ಅವರು ಮಾತನಾಡಿ, "ಸಾವಿರಾರು ವರ್ಷಗಳಿಂದ ಹೆಜ್ಜೆ ಹೆಜ್ಜೆಗೂ ಸ್ತ್ರೀಯರನ್ನು ಶೋಷಣೆಗೊಳಪಡಿಸಿದ ನಮ್ಮ ಸಮಾಜದಲ್ಲಿ ಹದಿನೆಂಟನೆಯ ಶತಮಾನದ ಪ್ರಾರಂಭದಲ್ಲಿಯೇ ಶೈಕ್ಷಣಿಕ-ಸಾಮಾಜಿಕ ಕ್ರಾಂತಿ ಮಾಡುವುದೆಂದರೆ ಅಷ್ಟು ಸುಲಭದ ಮಾತಲ್ಲ. ಸ್ವತ: ಅನಕ್ಷರಳಾದ ಸಾವಿತ್ರಿಬಾಯಿ ತಮ್ಮ ಪತಿ ಜ್ಯೀತಿಬಾ ಫುಲೆಯವರಿಂದ ಅಕ್ಷರ ಕಲಿತು ಎಲ್ಲ ಸಮುದಾಯದವರಿಗೆ ಅಕ್ಷರದ ಅರಿವು ಮೂಡಿಸಿದ್ದಾರೆ. ಇಂದು ನಾವು ಅಕ್ಷರವಂತರಾದರೂ ಅಜ್ಞಾನಗಳಿಂದ ಹೊರಬರಲಾಗುತ್ತಿಲ್ಲ. ಹೀಗಾಗಿ ಸಾವಿತ್ರಿಬಾಯಿ ಫುಲೆಯವರಂಥ ಸಾಧಕರು ನಮಗೆಲ್ಲ ಮಾದರಿಯಾಗಬೇಕಿದೆ" ಎಂದರು. 

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಮತಾ ಶಾಲೆಯ ಸಂಸ್ಥಾಪಕರಾದ ಶಂಕರ ಬಾಗೇವಾಡಿ ಅವರು ಮಾತನಾಡಿ 'ಬುದ್ಧ-ಬಸವಣ್ಣ' ಅವರುಗಳ ತತ್ವಗಳನ್ನೇ ಜೀವನಾದರ್ಶವಾಗಿಸಿಕೊಂಡು ಫುಲೆ ದಂಪತಿಗಳು ಅಂದು ಅರ್ಥಪೂರ್ಣ ಚಳುವಳಿ ಕಟ್ಟುವ ಮೂಲಕ ವಿಚಾರ ಕ್ರಾಂತಿಗೆ ನಾಂದಿ ಹಾಡಿದ್ದಾರೆ. ಅವರಿಂದ ಪ್ರಭಾವಿತರಾದ ಡಾ. ಬಿ.ಆರ್. ಅಂಬೇಡ್ಕರ ಅವರು ಸ್ವಸ್ಥ ಸಮಾಜದ ನಿಮರ್ಾಣದ ಸೂತ್ರಗಳನ್ನು ನಮ್ಮ ದೇಶದ ಸಂವಿಧಾನದಲ್ಲಿ ಅಳವಡಿಸುವಂತಾಗಿದೆ. ಅಂಥ ಆಶಯಗಳಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕಾಗಿದೆ " ಎಂದರು. 

ಕಾರ್ಯಕ್ರಮದಲ್ಲಿ ತೇಜಸ್ವಿನಿ ಬಾಗೇವಾಡಿ, ಸುನಂದಾ ಪಟ್ಟಣಶೆಟ್ಟಿ, ಜಯಶ್ರೀ ನಾಯಕ, ಅಪಣರ್ಾ ಗೌಡರ, ಗಿರಿಜಾ ತಳವಾರ, ಕೆ.ಕೆ. ಸುತಾರ, ಆರ್.ಎಸ್.ಹುಲಮನಿ, ಡಿ.ಬಿ.ಬಿಲ್ಲನವರ, ಮಲಿಕಜಾನ ಗದಗಿನ, ಪ್ರಭುಲಿಂಗ ಹೊ ಹಾಗೂ ಸಮತಾ ಶಾಲೆಯ ಶಿಕ್ಷಕ ಸಿಬ್ಬಂದಿ-ಮಕ್ಕಳು ಉಪಸ್ಥಿತರಿದ್ದರು. ಶಿಕ್ಷಕಿ ಶಾಂತಾ ಮೋದಿ ಸ್ವಾಗತಿಸಿ ಪರಿಚಯಿಸಿದರು. ಸುನಂದಾ ಪಟ್ಟಣಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀದೇವಿ ಕುಂಬಾರ ನಿರೂಪಿಸಿದರು. ಶಿಕ್ಷಕಿ ಗೀತಾ ಸಂಗನ್ನವರ ವಂದಿಸಿದರು.