ಮಹಾವೀರರ ಬೋಧನೆಗಳು, ತತ್ವಗಳನ್ನು ಅಳವಡಿಸಿಕೊಳ್ಳಿ: ಓಸ್ವಾಲ್

Adopt the principles of Mahavira: Oswal

ಮಹಾಲಿಂಗಪುರ 10: ಪಟ್ಟಣದ ಜೋಡು ರಸ್ತೆಯಲ್ಲಿರುವ ಜೈನ್ ಮಂದಿರದಲ್ಲಿ ಜೈನ ಧರ್ಮದ 24ನೇ ತೀಥಂರ್ಕರರಾದ ಮಹಾವೀರ ಜಯಂತಿಯನ್ನು ಆಚರಣೆ ಮಾಡಲಾಯಿತು.  

ಇದೇ ಸಂದರ್ಭದಲ್ಲಿ ಪಿಯೂಷ್ ಓಸ್ವಾಲ್ ಮಾತನಾಡಿ ಜೈನ ಧರ್ಮದ 24ನೇ ತೀಥಂರ್ಕರರಾದ ಮಹಾವೀರರ ಜನ್ಮ ದಿನವನ್ನು ಮಹಾವೀರ ಜಯಂತಿ ಎಂದು ಆಚರಿಸಲಾಗುತ್ತದೆ. ಪ್ರತೀ ವರ್ಷದಂತೆ 2025ರಲ್ಲೂ ಮಹಾವೀರ ಜಯಂತಿಯನ್ನು ಏಪ್ರಿಲ್ 10ರಂದು, ಗುರುವಾರ ಆಚರಿಸಲಾಗುವುದು 2025ರ ಮಹಾವೀರ ಜಯಂತಿಯ ದಿನದಂದು ಅವರ ಬೋಧನೆಗಳನ್ನು, ತತ್ವಗಳನ್ನು ಸ್ಮರಿಸಿ, ಪಾಲಿಸಿ ಅದನ್ನ ಅಳವಡಿಸಿಕೊಳ್ಳಬೇಕೆಂದು ಎಂದು ಹೇಳಿದರು. 

ನಂತರ ನಿಲೇಶ ಒಸ್ವಾಲ ಮಾತನಾಡಿ ಜೈನ ಧರ್ಮದ ಜನರು ಮಹಾವೀರ ಜಯಂತಿಯನ್ನು ಮಹಾವೀರ ಸ್ವಾಮಿಯ ಜನ್ಮ ದಿನಾಚರಣೆಯಾಗಿ ಆಚರಿಸುತ್ತಾರೆ. ಮಹಾವೀರ ಸ್ವಾಮಿಯನ್ನು ವರ್ಧಮಾನ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಅವರು ಜೈನ ಧರ್ಮದ 24 ನೇ ಮತ್ತು ಕೊನೆಯ ತೀಥಂರ್ಕರರೆನ್ನುವ ಹೆಮ್ಮೆಗೆ ಪಾತ್ರರಾದವರು. ಜೈನ ಧರ್ಮದ ಮೂಲ ತತ್ವಗಳನ್ನು ಸ್ಥಾಪಿಸಿದವರು ಕೂಡ ಇವರೇ ಆಗಿದ್ದಾರೆ. ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ತ್ರಯೋದಶಿ ತಿಥಿಯನ್ನು ಅವರ ಜನ್ಮ ವಾರ್ಷಿಕೋತ್ಸವವಾಗಿ ಆಚರಿಸಲಾಗುತ್ತದೆ. ಮಹಾವೀರರು ಬಿಹಾರ ರಾಜ್ಯದ ವೈಶಾಲಿ ಜಿಲ್ಲೆಯಲ್ಲಿರುವ ಕುಂದಲಗ್ರಾಮ ಎಂಬ ಸ್ಥಳದಲ್ಲಿ ಜನಿಸಿದರು.ಮಹಾವೀರ ಸ್ವಾಮಿಗಳು ತಮ್ಮ ಜೀವನದ ಮೂಲಕ ಅಹಿಂಸೆ,ಸತ್ಯ,ಕರುಣೆ ಮತ್ತು ಸ್ವಯಂ ಕೃಷಿಯ ಅದ್ಭುತ ತತ್ವಗಳನ್ನು ಪ್ರಸ್ತುತಪಡಿಸಿದರು.ಅವರ ಬೋಧನೆಗಳು ಇಂದಿಗೂ ಪ್ರತಿಯೊಬ್ಬ ವ್ಯಕ್ತಿಗೂ ಸ್ಫೂರ್ತಿಯ ಮೂಲವಾಗಿದೆ ಎಂದರು. 

ಅಹಿಂಸೆಯೇ ಸರ್ವೋಚ್ಚ ಧರ್ಮಸಿ  

ಅಹಿಂಸೆಯೇ ಧರ್ಮದ ಮಾರ್ಗವೆಂದವರಲ್ಲಿ ಮಹಾವೀರರೂ ಒಬ್ಬರು. ಅವರು ಅಹಿಂಸೆಯನ್ನೇ ಶ್ರೇಷ್ಠ ಧರ್ಮವೆಂದು ಬೋಧಿಸಿದ್ದಾರೆ. ಅಹಿಂಸೆಯೆಂದರೆ ಕೇವಲ ದೈಹಿಕ ಹಿಂಸೆ ಅಥವಾ ನೋವಿಗೆ ಮಾತ್ರ ಸೀಮಿತವಾಗಿಲ್ಲ. ಅದು ವ್ಯಕ್ತಿಯ ಆಲೋಚನೆಗಳು, ಮಾತು ಮತ್ತು ಕಾರ್ಯಗಳನ್ನೂ ಪ್ರತಿನಿಧಿಸುತ್ತದೆ. 

ಸತ್ಯವೇ ಶಾಶ್ವತಸಿ  

ಮಹಾವೀರರು ಸತ್ಯವೇ ಮೋಕ್ಷಕ್ಕೆ ಮೊದಲ ದಾರಿಯೆಂದು ಹೇಳಿದ್ದಾರೆ. ಸತ್ಯವನ್ನು ಮಾತನಾಡುವುದು, ಸತ್ಯ ಮಾರ್ಗವನ್ನು ಪಾಲಿಸುವುದು ಜೀವನದ ಪರಮ ಉದ್ದೇಶವಾಗಿರಬೇಕು ಎಂದಿದ್ದಾರೆ. 

ಸಿಸ್ವಶಿಸ್ತು ಮತ್ತು ಧ್ಯಾನಸಿ ಮಹಾವೀರ ಸ್ವಾಮಿಗಳು ಸ್ವಯಂ ನಿಯಂತ್ರಣದ ಮಹತ್ವವನ್ನು ಒತ್ತಿ ಹೇಳಿದರು. 'ತನ್ನನ್ನು ತಾನು ಜಯಿಸಿಕೊಳ್ಳುವವನೇ ನಿಜವಾದ ವಿಜೇತ' ಎಂದು ಅವರು ಜೀವನದಲ್ಲಿ ಧ್ಯಾನದ ಮಹತ್ವವನ್ನು ಹೇಳಿದ್ದಾರೆ. 

ಸಿಇಂದ್ರಿಯ ನಿಯಂತ್ರಣಸಿ ಭೌತಿಕ ವಸ್ತುಗಳ ಮೇಲಿನ ಬಾಂಧವ್ಯವು ದುಃಖಕ್ಕೆ ಕಾರಣವಾಗುತ್ತದೆ ಎಂಬುದು ಅವರ ಬೋಧನೆಯಾಗಿದೆ. ಆದ್ದರಿಂದ, ಯಾವುದರ ಮೇಲೂ ಅತಿಯಾಗಿ ಆಸೆಯನ್ನು ಇಟ್ಟುಕೊಳ್ಳದೇ ಬದುಕುವುದು ಸಂತೋಷದ ಮಾರ್ಗವಾಗಿದೆ. 

ಸಿಪ್ರೀತಿ ಮತ್ತು ಸಹನೂಭೂತಿಸಿಮಹಾವೀರ ಸ್ವಾಮಿಗಳು ಯಾವಾಗಲೂ ಪ್ರೀತಿ ಮತ್ತು ಸಹನೂಭೂತಿಯಿಂದ ಬದುಕಲು ಕಲಿಸಿದರು. 'ಇತರರು ನಿಮ್ಮೊಂದಿಗೆ ಹೇಗೆ ವರ್ತಿಸಬೇಕೆಂದು ನೀವು ಬಯಸುತ್ತೀರೋ ಹಾಗೆಯೇ ನೀವು ಇತರರೊಂದಿಗೆ ವರ್ತಿಸಿ' ಇಲ್ಲವಾದರೆ ಪ್ರೀತಿಯೆಂಬುದು ಇಬ್ಬರಲ್ಲಿಯೂ ಚಿಗುರಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ. 

ಸಿಮೌನ ಮತ್ತು ವಿಮೋಚನೆಸಿ: ಮಹಾವೀರರು ಸಮ್ಯಕ ದರ್ಶನ, ಸರಿಯಾದ ಜ್ಞಾನ, ಸರಿಯಾದ ನಡವಳಿಕೆ ಮತ್ತು ಸರಿಯಾದ ಅಭ್ಯಾಸವು ವಿಮೋಚನೆಯ ನಾಲ್ಕು ಮುಖಗಳು ಎಂದು ಹೇಳಿದ್ದರು. ಹಾಗೂ ಮೌನವನ್ನು ಶಕ್ತಿಯ ಶ್ರೇಷ್ಠ ರೂಪವೆಂದು ವರ್ಣಿಸಿದ್ದಾರೆ.ಮಹಾವೀರ ಜಯಂತಿಯ ಈ ಶುಭ ಸಂದರ್ಭದಲ್ಲಿ, ನಾವು ಅವರ ಬೋಧನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು.ಶಾಂತಿ, ಸತ್ಯ ಮತ್ತು ಕರುಣೆಯ ಸಂದೇಶವನ್ನು ಸಮಾಜದ ಮೂಲೆ ಮೂಲೆಗೂ ಹರಡಬೇಕು.ಜೀವನದಲ್ಲಿ ನಿಜವಾದ ಸಂತೋಷಕ್ಕಾಗಿ,ಅಹಿಂಸೆ, ಸತ್ಯ ಮತ್ತು ಸ್ವಯಂ ನಿಯಂತ್ರಣದ ಮಾರ್ಗವನ್ನು ಅನುಸರಿಸಬೇಕು ಎಂದು ಅವರು ಹೇಳಿದ್ದರು.ಇದೇ ಸಂದರ್ಭದಲ್ಲಿ ಜೈನ ಸಮುದಾಯದ ಮುಖಂಡರಾದ ಕೆಮಚಂದ ಓಸ್ವಾಲ್ ,ಶಿವಲಾಲ ಜೈನ, ಅಶೋಕ ಓಸ್ವಾಲ,ಪಾಪು ಓಸ್ವಾಲ,ನಿರ್ಮಲ ಓಸ್ವಾಲ, ಕಾಂತಿಲಾಲ್ ಕೊಠಾರಿ,ಜಸರಾಜ್ ಕೊರವಾಲ್, ಪಂಕಜ್ ಕೋರವಾಲ್, ಹರ್ಷ ಓಸ್ವಾಲ, ಮೇಘ ಓಸ್ವಾಲ,ಸೇರಿದಂತೆ ಅನೇಕ ಸಮಾಜದ ಮಹಿಳೆಯರು ಮುಖಂಡರು ಈ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.