ಅಥಣಿ 10: ರಾಮಾಯಣ ವಿಶ್ವದ ಸರ್ವಶ್ರೇಷ್ಠ ಗ್ರಂಥವಾಗಿದ್ದು, ಕೇವಲ ಭಾರತದಲ್ಲಿ ಮಾತ್ರವಲ್ಲ ವಿಶ್ವದ ಅನೇಕ ದೇಶಗಳಲ್ಲಿಯೂ ರಾಮಾಯಣ ಪ್ರಸ್ತುತವಾಗಿದೆ ಎಂದು ಪಂ.ನರಹರಿ ಆಚಾರ್ಯ ಜೋಶಿ (ಮುತ್ತಗಿ) ಹೇಳಿದರು.
ಅವರು ಸ್ಥಳೀಯ ಶ್ರೀರಾಮ ಮಂದಿರದಲ್ಲಿ ರಾಮ ನವಮಿ ಅಂಗವಾಗಿ ರಾಮಾಯಣ ಕುರಿತು ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ರಾಮಾಯಣದಲ್ಲಿ ಶ್ರೀರಾಮನ ಆದರ್ಶ, ರಾಜ ಧರ್ಮದ ಕುರಿತು ಉಲ್ಲೇಖಿಸುವದರ ಜೊತೆಗೆ ರಾಜ, ತಾಯಿ, ಸಹೋದರ, ಪತ್ನಿ, ಸೇವಕ ಸೇರಿದಂತೆ ಎಲ್ಲರ ಕರ್ತವ್ಯಗಳ ಕುರಿತು ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ ಎಂದ ಅವರು ಸ್ವಂತ ತಾಯಿಯಂತೆ ಗೌರವದ ಭಾವ ಹೊಂದಿದ್ದ ಶ್ರೀರಾಮ ತಾಯಿ ಕೈಕೆಯಿಯ ಆಸೆಯಂತೆ 12 ವರ್ಷ ವನವಾಸಕ್ಕೆ ತೆರಳುವ ಮೂಲಕ ತಾನೊಬ್ಬ ತಾಯಿಯ ಆಜ್ಞಾಧಾರಕ ಎಂದು ತೋರಿಸಿಕೊಟ್ಟ. ಇಂತಹ ನೂರಾರು ಆದರ್ಶಗಳು ರಾಮಾಯಣದಲ್ಲಿ ಉಲ್ಲೇಖಗೊಂಡಿದ್ದರಿಂದ ರಾಮಾಯಣ ಸರ್ವಶ್ರೇಷ್ಢ ಗ್ರಂಥವಾಗಿದೆ ಎಂದರು.
ಮೂರು ದಿನಗಳ ಕಾಲ ಪ್ರವಚನ ಕಾರ್ಯಕ್ರಮ ನಡೆಸಿಕೊಟ್ಟ ಪಂ.ನರಹರಿ ಆಚಾರ್ಯ ಜೋಶಿ ಇವರಿಗೆ ಶ್ರೀರಾಮ ಮಂದಿರದ ಲಕ್ಷ್ಮಣ ರಾಮದಾಸಿ, ಪಂ.ಜಯರಾಮಾಚಾರ್ಯ ಮದನಪಲ್ಲಿ, ಗುರುರಾಜ ಬಾದರಾಯಣಿ ಕಾಣಿಕೆ ಸಮರ್ಿಸಿದರು. ವಾದಿರಾಜ ಜಂಬಗಿ, ಪ್ರವೀಣ ರಾಮದಾಸಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.